Headlines

Ravi Kumar C H

ಹಿರಿಯ ನಟಿ ಬಹು ಭಾಷಾ ತಾರೆ ಬಿ.ಸರೋಜದೇವಿ ಅವರ ಸ್ಮರಣಾರ್ಥ ಗಾನ ನಮನ ಹಾಗೂ ಸನ್ಮಾನ ಸಮಾರಂಭ..

ಬೆಂಗಳೂರು ವಿಜಯನಗರ ಚಂದ್ರ ಲೇಔಟ್ ನಲ್ಲಿರುವ ಅಪ್ಪು ಮ್ಯೂಸಿಕ್ ಅಕಾಡೆಮಿಯ ಸಭಾಂಗಣದಲ್ಲಿ ಮಧುರ ಗೆಳೆಯರ ಬಳಗದ ವತಿಯಿಂದ ಕನ್ನಡದ ಹಿರಿಯ ನಟಿ ಬಹು ಭಾಷಾ ತಾರೆ ಬಿ.ಸರೋಜದೇವಿ ಅವರ ಸ್ಮರಣಾರ್ಥ ಗಾನ ನಮನ ಹಾಗೂ ಸನ್ಮಾನ ಸಮಾರಂಭ ಆಯೋಜಿಸಲಾಗಿತ್ತು.ಈ ಸಮಾರಂಭದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ರಾಮನಗರದ ಜಿಲ್ಲೆಯ ನಿವೃತ್ತ.ಭೂಗೋಳಶಾಸ್ತ್ರ ಉಪನ್ಯಾಸಕರಾದ ಶ್ರೀ ಪೂರ್ಣಚಂದ್ರ ಎಂ.ಎ. ಅವರು ಮಾತನಾಡಿ ಬಹುಬಾಷಾ ತಾರೇ ಸರೋಜದೇವಿ ನಮ್ಮ ಕನ್ನಡದ ಕಣ್ಮಣಿ. ಅಭಿನವ ಸರಸ್ವತಿ ಸುಮಾರು 200ಕ್ಕೂ ಹೆಚ್ಚು ಅಭಿನಯಿಸಿ ಕಣ್ಮರೆಯಾಗಿದ್ದಾರೆ. ನಮ್ಮ…

Read More

ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ, ಹುಟ್ಟು ಹಬ್ಬದ ಪ್ರಯುಕ್ತ ರಕ್ತದಾನ ಶಿಬಿರ.

ಶಿರಾ :- ಕ್ಷೇತ್ರದ ಶಾಸಕ‌ಹಾಗೂ ರಾಜ್ಯ ಸರ್ಕಾರದದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ,ಅವರ 76ನೇ ವರ್ಷದ ಹುಟ್ಟು ಹಬ್ಬದ ಪ್ರಯುಕ್ತ ರಕ್ತದಾನ ಶಿಬಿರವನ್ನು ಯುವ ಕಾಂಗ್ರೆಸ್ ನಗರ ಅದ್ಯಕ್ಷ ಅಂಜನ್ ಕುಮಾರ್ ಅವರ ಮಿತ್ರ ವೃಂದ ವತಿಯಿಂದ ನಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಆವರಣದಲ್ಲಿ ಆಯೋಜಿಸಲಾಗಿತ್ತು,ರಕ್ತದಾನ ಮಾಡುವ ಮೂಲಕ ನೆಚ್ಚಿನ ನಾಯಕನ ಹುಟ್ಟು ಹಬ್ಬವನ್ನು ಆಚರಿಸಿದರು. ಈ ರಕ್ತ ದಾನ ಶಿಬಿರ ಇನ್ನೊಬ್ಬರ ಜೀವ ಉಳಿಸುವ ನಿಟ್ಟಿನಲ್ಲಿ ಮಹಾದಾನ ಕಾರ್ಯಕ್ರಮ ಇದಾಗಿದ್ದು, ಇಂತಹ ಒಳ್ಳೆಯ ಕೆಲಸಗಳು ಶ್ಲಾಘನೀಯ…

Read More

ಚಳವಳಿಯ ಪ್ರಜ್ಞೆ ಮತ್ತು ಸಾಹಿತ್ಯ ಪ್ರಜ್ಞೆ ಪರಸ್ಪರ ಬೇರೆಯಲ್ಲ: ನಾಡೋಜ ಬರಗೂರು ರಾಮಚಂದ್ರಪ್ಪ…

ಸಾಹಿತಿಗಳಿಗೆ ಚಳವಳಿಯ ಸಂಬಂಧ ಇದ್ದರೆ ಅಂತಹ ಸಾಹಿತ್ಯ ಸೃಜನಶೀಲವಾಗಿ ಸೊರಗುತ್ತಾ ಹೋಗುತ್ತದೆ ಎನ್ನುವ ಭಾವನೆ ಇಟ್ಟುಕೊಂಡಿರುವ ಒಂದು ವಿಮರ್ಶಕ ವಲಯ ಇದೆ. ಆದರೆ ಜಗತ್ತಿನಲ್ಲಿ ಚಳವಳಿಯ ಜೊತೆ ಸಂಬಂಧ ಇಟ್ಟುಕೊಂಡ ಅನೇಕರು ಬಹಳ ಅದ್ಬುತವಾದಂತಹ ಕೃತಿಗಳನ್ನು ಕೊಟ್ಟಿದ್ದಾರೆ. ಚಳವಳಿಯ ಪ್ರಜ್ಞೆ ಮತ್ತು ಸಾಹಿತ್ಯ ಪ್ರಜ್ಞೆ ಪರಸ್ಪರ ಬೇರೆಯಲ್ಲ ಎನ್ನುವ ತಿಳುವಳಿಕೆ ನಮಗೆ ಬಹಳ ಅಗತ್ಯವಿದೆ ಎಂದು ನಾಡೋಜ ಬರಗೂರು ರಾಮಚಂದ್ರಪ್ಪ ಅಭಿಪ್ರಾಯಪಟ್ಟಿದ್ದಾರೆ. ಬಂಡಾಯ ಸಂಘಟನೆ ತುಮಕೂರು ಘಟಕದಿಂದ ತುಮಕೂರಿನಲ್ಲಿ ಹಮ್ಮಿಕೊಂಡಿದ್ದ ಚಳವಳಿಯ ಸಂಗಾತಿಯಾಗಿ ಕನ್ನಡ ಸಾಹಿತ್ಯ ಎಂಬ…

Read More

ಗ್ರಾಮೀಣ ಭಾಗದ ಜನರಿಗೆ ವೈದ್ಯಕೀಯ ಸೇವೆ ನೀಡುವ ಸಲುವಾಗಿ 25ಸಾವಿರ ವೈದ್ಯಕೀಯ ಶಿಕ್ಷಣ ಸೀಟುಗಳ ಸೃಜನೆ…

ತುಮಕೂರು:ಗ್ರಾಮೀಣ ಭಾಗದ ಜನರಿಗೆ ಗುಣಮಟ್ಟದ ವೈದ್ಯಕೀಯ ಸೇವೆ ದೊರೆಯಬೇಕೆಂಬ ಮಹತ್ವದ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರ ವೈದ್ಯಕೀಯ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುತಿದ್ದು, ಮುಂದಿನ ವರ್ಷದಿಂದ ಪ್ರತಿವರ್ಷ ೭೫ ಸಾವಿರ ವೈದ್ಯಕೀಯ ಶಿಕ್ಷಣ ಸೀಟುಗಳನ್ನು ಸೃಜಿಸಲು ಮುಂದಾಗಿದೆ ಎಂದು ಕೇಂದ್ರದ ಜಲಶಕ್ತಿ ಮತ್ತು ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ.ನಗರದ ಗ್ರಂಥಾಲಯ ಸಭಾಂಗಣದಲ್ಲಿ ಪಾವಗಡದ ಶ್ರೀರಾಮಕೃಷ್ಣ ಸೇವಾಶ್ರಮದ ಅಡಿಯಲ್ಲಿ ಬರುವ ಸ್ವಾಮಿ ವಿವೇಕಾನಂದ ಇಚಿಟಿಗ್ರೆಟೆಡ್ ರೂರಲ್ ಹೆಲ್ತ್ ಸೆಂಟರ್ , ಶ್ರೀಶಾರದದೇವಿ ಐ…

Read More

ಹುಟ್ಟು ಸಾಧನೆ ಮತ್ತು ಸಾವು

ಶ್ರೀಕೃಷ್ಣನ ಪಾಠ ಶಾಲೆಯ ಬಗ್ಗೆ ಕೃಷ್ಣನು ಭಗವದ್ಗೀತೆಯಲ್ಲಿ ಹೀಗೆ ಹೇಳಿದ್ದಾನೆ…(ಬನ್ನಂಜೆ ಗೋವಿಂದಾಚಾರ್ಯರ ವಿವರಣೆಯಲ್ಲಿ)ಅಧ್ಯಾಯ – 02 : ಶ್ಲೋಕ – 40ನೇಹಾಭಿಕ್ರಮನಾಶೋSಸ್ತಿ ಪ್ರತ್ಯವಾಯೋ ನ ವಿದ್ಯತೇ ।ಸ್ವಲ್ಪಮಪ್ಯಸ್ಯ ಧರ್ಮಸ್ಯ ತ್ರಾಯತೇ ಮಹತೋ ಭಯಾತ್ ॥ನ ಇಹ ಅಭಿಕ್ರಮ ನಾಶಃ ಅಸ್ತಿ ಪ್ರತ್ಯವಾಯುಃ ನ ವಿದ್ಯತೇಸು ಅಲ್ಪಮ್ ಅಪಿ ಅಸ್ಯ ಧರ್ಮಸ್ಯ ತ್ರಾಯತೇ ಮಹತಃ ಭಯಾತ್- -ಇಲ್ಲಿ ತೊದಲು ಹೆಜ್ಜೆ ಕೂಡಾ ಹಾಳಾಗದು. ಇಲ್ಲಿ ತೊಡರುಗಳಿಲ್ಲ; ಈ ಧರ್ಮದ ತುಣುಕು ಕೂಡಾ ದೊಡ್ಡ ಬೆದರಿನಿಂದ ಪಾರುಮಾಡಬಲ್ಲುದು. ಸಾಧನೆಯ ಬಗ್ಗೆ…

Read More

ಹೊಡಿ ಬಡಿ ಕಡಿ ಸಿನಿಮಾಗಳಿಂದ ಬೇಸತ್ತ ನಯನಗಳನ್ನ ತಂಪಾಗಿಸುತ್ತೆ.. ಜೀವನದ ಜಂಜಾಟಗಳಿಂದ ಜಡವಾಗಿರೋ ಮನಸ್ಸುಗಳಿಗೆ ಆಹ್ಲಾದ ನೀಡುತ್ತೆ ”ಸು ಫ್ರಮ್ ಸೋ”

ಪರಭಾಷಾ ಸೂಪರ್ ಸ್ಟಾರ್ ಗಳು ರೆಡ್ ಕಾರ್ಪೆಟ್ ಹಾಸಿ ವೆಲ್ಕಮ್ ಮಾಡ್ತಿದ್ರೂ, ತಾಯಿ ನೆಲ ಮರೆತಿಲ್ಲ ರಾಜ್ ಬಿ ಶೆಟ್ಟಿ. ಕೆರೆಯ ನೀರನ್ನ ಕೆರೆಗೇ ಚೆಲ್ಲಿ ಅನ್ನೋ ಮಾತಿನಂತೆ ಹೊಸ ಪ್ರತಿಭೆಗಳಿಗಾಗಿ ಸು ಫ್ರಮ್ ಸೋ ಅನ್ನೋ ಸಿನಿಮಾ ನಿರ್ಮಿಸಿದ್ದಾರೆ. ರಿಲೀಸ್‌ ಗೂ ಮೊದಲೇ ಪೇಯ್ಡ್ ಪ್ರೀಮಿಯರ್ ಶೋಗಳಿಂದ ಟಾಕ್ ಆಫ್ ದಿ ಟೌನ್ ಆಗಿರೋ ಸೋಮೇಶ್ವರ ಸುಲೋಚನ ಕಥೆ, ನೋಡುಗರನ್ನ ಹೊಟ್ಟೆ ಹುಣ್ಣಾಗಿಸುವಂತೆ ನಕ್ಕು ನಲಿಸುತ್ತಿದೆ. ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆಯನ್ನ ಎಬ್ಬಿಸಿದ ಬಳಗ ಅಂದ್ರೆ…

Read More

ಕ್ರೀಡೆ ಯುವಕರ ಜೀವನೋತ್ಸಾಹ ದ್ವಿಗುಣಗೊಳಿಸುವಲ್ಲಿ ಸಹಕಾರಿ.

ಶಿರಾ : ಕ್ರೀಡೆ ಯುವಕರ ಜೀವನೋತ್ಸಾಹ ದ್ವಿ ಗುಣಗೊಳಿಸುವಲ್ಲಿ ಸಹಕಾರಿಯಾಗಲಿದ್ದು, ಇಂತಹ ಕ್ರಿಕೆಟ್ ಟೂರ್ನಿಮೆಂಟ್ ಗಳು ಯುವಕರಲ್ಲಿ ಪರಸ್ಪರ ಸ್ನೇಹ-ಬಾಂಧವ್ಯ ಗಟ್ಟಿಗೊಳಿಸಿ ಒಗ್ಗೂಡಿಸುವಂತಹ ಕೆಲಸದಲ್ಲಿ ಮಹತ್ವದ ಪಾತ್ರ ವಹಿಸುತ್ತವೆ ಎಂದುಸಮಾಜಸೇವಕ, ಶಿರಾ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶಿವು ಚಂಗಾವರ ಹೇಳಿದರು.ಶಿರಾ ತಾಲೂಕಿನ ಗೌಡಗೆರೆ ಹೋಬಳಿಯ ಜಿ.ರಂಗನಹಳ್ಳಿ ಗ್ರಾಮದಲ್ಲಿ ಶ್ರೀ ಸೇವಾಲಾಲ್ ಕ್ರಿಕೆಟರ್ಸ್ ಹಾಗೂ ಶಿವು ಚಂಗಾವರ ಅಭಿಮಾನಿ ಬಳಗ ಅಯೋಜಿಸಿದ್ದ 2. ದಿನಗಳ ಕ್ರಿಕೆಟ್ ಟೂರ್ನಿಮೆಂಟ್ ಉದ್ಘಾಟಿಸಿ ಮಾತನಾಡಿದರು.ಕ್ರಿಕೆಟ್ ಜೊತೆಗೆ ಗ್ರಾಮೀಣ ಪ್ರದೇಶದ ಕ್ರೀಡೆಗಳಾದ ಕಬ್ಬಡಿ,…

Read More

ಪುರಾಣ ಕಥೆಗಳಿಂದ…“ಶಿವ-ಪ್ರಿಯ” ವಿಷ್ಣುವಾದರೆ, “ವಿಷ್ಣು-ಪ್ರಿಯ” ಶಿವದೃಷ್ಟಿ ದೋಷವುಳ್ಳವರು ಬೇರೆ ಬೇರೆ ನೋಡುತ್ತಾರೆ.

ವೈಕುಂಠಪತಿ ನಾರಾಯಣ ಮತ್ತು ಲಕ್ಷ್ಮಿಗೂ ಯಾವುದೋ ಕಾರಣಕ್ಕೆ ಮಾತಾಗಿ ಲಕ್ಷ್ಮಿಗೆ ಕುದುರೆಯಾಗು ಎಂದು ವಿಷ್ಣು ಶಾಪ ಕೊಟ್ಟನು. ( ಇದು ಭಗವಂತನ ಲೀಲಾ ನಾಟಕದ ವೇದಿಕೆಗೆ ಪೂರ್ವ ತಯಾರಿ) ಶಾಪ ಕೊಟ್ಟಿದ್ದು ಏಕೆ ಎಂದು ಲಕ್ಷ್ಮಿ ಕೇಳಲಿಲ್ಲ. ಶಾಪದ ಪ್ರಭಾವದಿಂದ ಅವಳು ಯಮುನಾ ಮತ್ತು ತಮಸ ನದಿಗಳ ಸಂಗಮ ಜಾಗದಲ್ಲಿ ಹೆಣ್ಣು ಕುದುರೆಯಾಗಿ ಜನಿಸಿದಳು. ಲಕ್ಷ್ಮಿಗೆ ಪೂರ್ವ ಜನ್ಮದ ಸ್ಮೃತಿ ಇದ್ದು, ತಾನು ಶಾಪದಿಂದ ಕುದುರೆಯಾಗಿ ಇಲ್ಲಿರ ಬೇಕಾಗಿದೆ. ವೈಕುಂಠದಲ್ಲಿ ನಾರಾಯಣ ಹಾಯಾಗಿದ್ದಾನೆ ಎಂಬ ದುಃಖಕ್ಕಿಂತ, ತನ್ನ…

Read More

ಬದುಕ ಯೋಗ್ಯ ಕನಿಷ್ಟ ವೇತನ ನಿಗಧಿಗೆ ಒತ್ತಾಯಿಸಿ – ಜುಲೈ 28ಸಿಐಟಿಯು ಪ್ರತಿಭಟನೆ..

ರಾಜ್ಯ ಸರ್ಕಾರವು ಕನಿಷ್ಟ ವೇತನ ಪಾವತಿ ಕಾಯಿದೆ- 1948 ಅಡಿಯಲ್ಲಿ ರಾಜ್ಯದಲ್ಲಿ ದುಡಿಯುವ ಎಲ್ಲಾ ಕಾರ್ಮಿಕರಿಗೆ ಕನಿಷ್ಟವೇತನದ ದರಗಳನ್ನು ನಿಗಧಿ ಪಡಿಸಿ ಹೋರಡಿಸಿರುವ ಕರಡು . ಕಾಇ 411 ಎಲ್ಡಬ್ಲೂö್ಯಎ 2023 ದಿನಾಂಕ 11.04.2025ಮತ್ತು 2. ಸೇರ್ಪಡೆ ಅಧಿಸೂಚನೆ ಕಾಇ 411 ಎಲ್ಡಬ್ಲೂö್ಯಎ 2023 ದಿನಾಂಕ 19.04.2025 ಅಧಿಸೂಚನೆಗಳು ವೈಜ್ಞಾನಿಕವಾಗಿಲ್ಲ ಎಂದು ಸಿಐಟಿಯು ಅಭಿಪ್ರಾಯಪಟ್ಟಿದೆ ಹಾಗಾಗಿ ಇಂದಿನ ಬೆಲೆಗಳು ಹಾಗು ಜೀವನ ನಿರ್ವಹಣಾ ವೆಚ್ಚಗಳಿಗೆ ಅನುಗುಣವಾಗಿ ಕನಿಷ್ಟ ವೇತನವನವನ್ನು ನಿಗಧಿಗೆ ಒತ್ತಾಯಿಸಿ ಸಿಐಟಿಯು ಸಂಘಟನೆಯು ರಾಜ್ಯಾದ್ಯಂತ ಜುಲೈ-28…

Read More

ಚಂದ್ರಶೇಖರ್ ಅಜಾದ್ ಹಾಗೂ ಲೋಕಮಾನ್ಯ ಬಾಲ ಗಂಗಾಧರ್ ತಿಲಕ್ ರವರುಗಳ ಜನ್ಮದಿನಾಚರಣೆ..

ತುಮಕೂರು : ಅಖಿಲ ಭಾರತ ಡಾ. ಅಂಬೇಡ್ಕರ್ ಪ್ರಚಾರ ಸಮಿತಿ ಹಾಗೂ ಅಖಿಲ ಭಾರತ ದಲಿತ ಕ್ರಿಯಾ ಸಮಿತಿ ವತಿಯಿಂದ ಚಂದ್ರಶೇಖರ್ ಅಜಾದ್ ಹಾಗೂ ಲೋಕಮಾನ್ಯ ಬಾಲ ಗಂಗಾಧರ್ ತಿಲಕ್ ರವರುಗಳ ಜನ್ಮದಿನಾಚರಣೆಯನ್ನು ಜಿಲ್ಲಾ ಕೇಂದ್ರ ಕಛೇರಿಯಲ್ಲಿ ಅವರುಗಳ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಸಿಹಿ ವಿತರಣೆ ಮಾಡುವುದರ ಮೂಲಕ ಆಚರಿಸಲಾಯಿತು. ಈ ಕುರಿತು ಅಖಿಲ ಭಾರತ ಡಾ. ಅಂಬೇಡ್ಕರ್ ಪ್ರಚಾರ ಸಮಿತಿ ಹಾಗೂ ಅಖಿಲ ಭಾರತ ದಲಿತ ಕ್ರಿಯಾ ಸಮಿತಿಯ ಜಿಲ್ಲಾಧ್ಯಕ್ಷರಾದ ಎನ್.ಕೆ.ನಿಧಿಕುಮಾರ್‌ರವರು ಮಾತನಾಡುತ್ತಾ ನಮ್ಮ…

Read More