Axiom 4: ಬಾಹ್ಯಾಕಾಶದಲ್ಲಿ ಭಾರತ-ಪ್ರತಿದಿನ 10 ಗಂಟೆ ಡ್ಯೂಟಿ ಟೈಂ; ಹೇಗಿರತ್ತೆ ಗಗನಯಾತ್ರಿಗಳ ದಿನಚರಿ? | Shubhanshu Shukla Enters The International Space Station With The Axiom 4 Daily Life In Space Suc

Axiom 4: ಬಾಹ್ಯಾಕಾಶದಲ್ಲಿ ಭಾರತ-ಪ್ರತಿದಿನ 10 ಗಂಟೆ ಡ್ಯೂಟಿ ಟೈಂ; ಹೇಗಿರತ್ತೆ ಗಗನಯಾತ್ರಿಗಳ ದಿನಚರಿ? | Shubhanshu Shukla Enters The International Space Station With The Axiom 4 Daily Life In Space Suc



40 ವರ್ಷಗಳ ಬಳಿಕ ಬಾಹ್ಯಾಕಾಶದಲ್ಲಿ ಭಾರತ ಶೈನ್​ ಆಗುತ್ತಿದೆ. ಭಾರತೀಯ ಹೆಮ್ಮೆಯ ಪುತ್ರ ಶುಭಾಂಶು ಶುಕ್ಲಾ ಯಶಸ್ವಿಯಾಗಿ ನಭವನ್ನು ತಲುಪಿದ್ದಾರೆ. ಅಲ್ಲಿ ಪ್ರತಿದಿನ 10 ಗಂಟೆ ಡ್ಯೂಟಿ. ಹೇಗಿರತ್ತೆ ನೋಡಿ ಅವರ ದಿನಚರಿ… 

1984 ರಲ್ಲಿ ರಾಕೇಶ್ ಶರ್ಮಾ ಬಾಹ್ಯಾಕಾಶಕ್ಕೆ ಹೋದ ನಂತರ ಬರೋಬ್ಬರಿ 41 ವರ್ಷಗಳ ಬಳಿಕ ಉತ್ತರ ಪ್ರದೇಶದ ಲಖನೌನ 40 ವರ್ಷ ವಯಸ್ಸಿನ ಶುಭಾಂಶು ಶುಕ್ಲಾ ಇಂದು ಮತ್ತೊಂದು ಮೈಲಿಗಲ್ಲನ್ನು ಸ್ಥಾಪಿಸಿದ್ದಾರೆ. ಭಾರತದ ಬಾಹ್ಯಾಕಾಶ ಇತಿಹಾಸದಲ್ಲಿ ಇನ್ನೊಂದು ದಾಖಲೆ ಬರೆದಿದ್ದಾರೆ. ಗ್ರೂಪ್​ ಕ್ಯಾಪ್ಟನ್​, ಭಾರತೀಯ ಶುಭಾಂಶು ಶುಕ್ಲಾ ಸೇರಿ ನಾಲ್ವರು ಗಗನಯಾನಿಗಳ ಎಕ್ಸಿಮೋ-4ರ ಯಶಸ್ವಿಯಾಗಿ ಅಂತರಿಕ್ಷ ತಲುಪಿದೆ. ನಿನ್ನೆ ಫ್ಲೋರಿಡಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಇದನ್ನು ಉಡ್ಡಯನ ಮಾಡಲಾಗಿತ್ತು. ಇದೀಗ 40 ನಿಮಿಷದ ಮುಂಚೆಯೇ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ತಲುಪಿದ್ದು, ಭಾರತದ ಪಾಲಿಗೆ ಇದೊಂದು ರೋಮಾಂಚನ ಕ್ಷಣವಾಗಿದೆ.

ಈ ಯೋಜನೆಯಲ್ಲಿ ಭಾರತದ ಶುಭಾಂಶು ಶುಕ್ಲಾ ಅವರ ಜೊತೆ ಅಮೆರಿಕದ ಪೆಗ್ಗಿ ವಿಟ್ಲನ್, ಪೋಲೆಂಡ್​ನ ನವೋಖ್ ಉಝ್ ನಾಸ್ತಿ, ಹಂಗೇರಿಯ ಟಿಬರ್ ಕಪ್ಪು ಫ್ಲೋರಿ ಇದ್ದು ಇವರೆಲ್ಲರೂ 14 ದಿನಗಳ ಕಾಲ ಬಾಹ್ಯಾಕಾಶದಲ್ಲಿ ಇರಲಿದ್ದಾರೆ. ಅಲ್ಲಿ ಭಾರತವೇ ಡಿಸೈನ್​ ಮಾಡಿರುವ 60 ರೀತಿಯ ವಿವಿಧ ಪ್ರಯೋಗಗಳನ್ನ ಗಗನಯಾತ್ರಿಗಳು ನಡೆಸಲಿದ್ದಾರೆ. ಇದರಲ್ಲಿ ಮುಖ್ಯವಾಗಿ ಬಾಹ್ಯಾಕಾಶದ ಗುರುತ್ವಾಕರ್ಷಣೆ, ಲೈಫ್, ಬಯೋಲಾಜಿಕಲ್, ಭೂಮಿ ವೀಕ್ಷಣೆ, ಮೆಟಿರಿಯಲ್ ಸೈನ್ಸ್ ಸೇರಿವೆ. ಇದಾಗಲೇ ಶುಭಾಂಶು ಅವರು, ಬಾಹ್ಯಾಕಾಶದಿಂದ ಸಂದೇಶವನ್ನೂ ಕಳಹಿಸಿದ್ದಾರೆ. ಬಾಹ್ಯಾಕಾಶದಲ್ಲಿ ಹೇಗೆ ನಡೆಯಬೇಕು ಮತ್ತು ತಿನ್ನಬೇಕು ಎಂಬುದರ ಬಗ್ಗೆ ಮಗುವಿನಂತೆ ಕಲಿಯುತ್ತಿದ್ದೇನೆ. ಗುರುತ್ವಾಕರ್ಷಣೆಗೆ ಹೊಂದಿಕೊಳ್ಳುವುದು ಸ್ವಲ್ಪ ಸವಾಲಾಗಿದೆ ಎಂದಿದ್ದಾರೆ.

ಹಾಗಿದ್ದರೆ, ಬಾಹ್ಯಾಕಾಶದಲ್ಲಿ ಅವರು ಹೇಗೆ ಕೆಲಸ ಮಾಡುತ್ತಾರೆ? 24 ಗಂಟೆನೂ ಕೆಲ್ಸ ಮಾಡುತ್ತಲೇ ಇರುತ್ತಾರಾ ಎನ್ನುವ ಕುತೂಹಲದ ವಿಷಯ ಹಲವರ ತಲೆ ಕೊರೆಯುತ್ತಿರಬಹುದು. ಆದರೆ ಕುತೂಹಲದ ಸಂಗತಿ ಎಂದರೆ, ಭೂಮಿಯ ಮೇಲಿನ ರೀತಿಯಲ್ಲಿಯೇ ಬಾಹ್ಯಾಕಾಶದಲ್ಲಿಯೂ ಗಗನಯಾತ್ರಿಗಳಿಗೆ ವರ್ಕಿಂಗ್​ ಟೈಮ್​ ಇರುತ್ತದೆ. ಅದು ಪ್ರತಿದಿನ 10 ಗಂಟೆ ಕೆಲಸ. ಇದರಲ್ಲಿ ಬಾಹ್ಯಾಕಾಶ ನೌಕೆ ವ್ಯವಸ್ಥೆಗಳ ಮೇಲ್ವಿಚಾರಣೆ, ಪ್ರಯೋಗಗಳನ್ನು ನಡೆಸುವುದು ಮತ್ತು ನಿರ್ವಹಣೆ ಮತ್ತು ಸಂಶೋಧನೆಗಾಗಿ ಬಾಹ್ಯಾಕಾಶ ನಡಿಗೆಗಳಲ್ಲಿ ಭಾಗವಹಿಸುವುದು ಸೇರಿದಂತೆ ಹಲವಾರು ಕರ್ತವ್ಯಗಳು ಇರುತ್ತವೆ. ಸೂಕ್ಷ್ಮ ಗುರುತ್ವಾಕರ್ಷಣೆಯ ಪರಿಣಾಮಗಳನ್ನು ಎದುರಿಸಲು ಅವರು ದೈಹಿಕ ವ್ಯಾಯಾಮಕ್ಕೂ ಸಮಯವನ್ನು ಮೀಸಲಿಡುತ್ತಾರೆ.

 

ಇವರ ದಿನಚರಿಯ ಕುರಿತು ಹೇಳುವುದಾದರೆ, ಇಲ್ಲಿ ಕೋ ಆರ್ಡಿನೇಟೆಡ್​ ಯೂನಿವರ್ಸಲ್​ ಟೈಂ ಬಳಕೆ ಮಾಡಲಾಗುತ್ತದೆ. ಬೆಳಿಗ್ಗೆ 6 ಗಂಟೆ ಸ್ಟೇಷನ್​ ಪರಿಶೀಲನೆಯಿಂದ ಕೆಲಸ ಶುರುವಾಗುತ್ತದೆ. ಬಳಿಕ ಬ್ರೇಕ್​ಫಾಸ್ಟ್​, ಅದಾದ ನಂತರ ಪ್ಲ್ಯಾನಿಂಗ್​ ಮಷಿನ್ ಕಂಟ್ರೋಲ್​ ಟೀಮ್​ ಜೊತೆಗೆ ಒಂದು ಸಭೆ ನಡೆಯುತ್ತದೆ. ಮಧ್ಯಾಹ್ನ 1 ಗಂಟೆಗೆ ಊಟದ ಬ್ರೇಕ್​ ಇದ್ದರೆ ಸಂಜೆಯವರೆಗೂ ಕೆಲಸವಿರುತ್ತದೆ. ನಡುವೆ ರೆಸ್ಟ್​ಗೆ ಒಂದಿಷ್ಟು ಟೈಮ್​. ಇದನ್ನು ಪರಿಗಣಿಸಿದರೆ ಕನಿಷ್ಠ 10 ಗಂಟೆ ಪ್ರತಿದಿನ ಅವರ ಶೆಡ್ಯೂಲ್​ ಇರುತ್ತದೆ. ಅದರ ಸಂಪೂರ್ಣ ಮಾಹಿತಿ ಈ ಕೆಳಗಿನಂತೆ ಇದೆ:

ಮೇಲ್ವಿಚಾರಣೆ ಮತ್ತು ನಿರ್ವಹಣೆ: ವಿಶೇಷವಾಗಿ ಆರೋಹಣ, ಸಂಧಿಸುವಿಕೆ ಮತ್ತು ಡಾಕಿಂಗ್‌ನಂತಹ ನಿರ್ಣಾಯಕ ಹಂತಗಳಲ್ಲಿ ಏವಿಯಾನಿಕ್ಸ್, ಪ್ರೊಪಲ್ಷನ್ ಮತ್ತು ಲೈಫ್ ಸಪೋರ್ಟ್‌ನಂತಹ ನಿರ್ಣಾಯಕ ವ್ಯವಸ್ಥೆಗಳ ಆರೋಗ್ಯವನ್ನು ಪರಿಶೀಲಿಸುವ ಜವಾಬ್ದಾರಿಯನ್ನು ಶುಕ್ಲಾ ವಹಿಸುತ್ತಾರೆ. ನಿಲ್ದಾಣದ ವ್ಯವಸ್ಥೆಗಳ ನಿಯಮಿತ ಪರಿಶೀಲನೆಗಳು, ಏರ್ ಫಿಲ್ಟರ್‌ಗಳನ್ನು ಸ್ವಚ್ಛಗೊಳಿಸುವುದು ಮತ್ತು ಕಂಪ್ಯೂಟರ್ ಉಪಕರಣಗಳನ್ನು ನವೀಕರಿಸುವುದು ಸಹ ಅವರು ನಿರ್ವಹಿಸುತ್ತಾರೆ.

ವೈಜ್ಞಾನಿಕ ಪ್ರಯೋಗಗಳು: ಆಕ್ಸಿಯಮ್ -4 ಕಾರ್ಯಾಚರಣೆಯ ಭಾಗವಾಗಿ, ಬೀಜ ಮೊಳಕೆಯೊಡೆಯುವಿಕೆ, ಪಾಚಿ ಬೆಳವಣಿಗೆ, ಸೂಕ್ಷ್ಮ ಗುರುತ್ವಾಕರ್ಷಣೆಯಲ್ಲಿ ಮಾನವ ಶರೀರಶಾಸ್ತ್ರ ಮತ್ತು ಸೂಕ್ಷ್ಮ ಗುರುತ್ವಾಕರ್ಷಣೆಯಲ್ಲಿ ಎಲೆಕ್ಟ್ರಾನಿಕ್ ಪ್ರದರ್ಶನಗಳೊಂದಿಗೆ ಮಾನವ ಸಂವಹನ ಸೇರಿದಂತೆ ವಿವಿಧ ಪ್ರಯೋಗಗಳಲ್ಲಿ ಶುಕ್ಲಾ ಭಾಗಿಯಾಗಿರುತ್ತಾರೆ.

ದೈಹಿಕ ವ್ಯಾಯಾಮ: ಸೂಕ್ಷ್ಮ ಗುರುತ್ವಾಕರ್ಷಣೆಯ ಪರಿಣಾಮಗಳನ್ನು ಎದುರಿಸಲು, ಗಗನಯಾತ್ರಿಗಳು ಪ್ರತಿದಿನ ಕನಿಷ್ಠ ಎರಡು ಗಂಟೆಗಳ ಕಾಲ ವ್ಯಾಯಾಮ ಮಾಡುತ್ತಾರೆ. ಇದು ಸಾಮಾನ್ಯವಾಗಿ ಟ್ರೆಡ್‌ಮಿಲ್, ಸ್ಟೇಷನರಿ ಬೈಕ್ ಮತ್ತು ತೂಕ ತರಬೇತಿಯನ್ನು ಒಳಗೊಂಡಿರುತ್ತದೆ.

ತುರ್ತು ಸಿದ್ಧತೆ: ಉಡಾವಣೆಯ ಸಮಯದಲ್ಲಿ ಘರ್ಷಣೆ ತಪ್ಪಿಸುವ ಕುಶಲತೆ ಮತ್ತು ಇತರ ಆಕಸ್ಮಿಕ ಕಾರ್ಯವಿಧಾನಗಳಂತಹ ಸಂಭಾವ್ಯ ತುರ್ತು ಪರಿಸ್ಥಿತಿಗಳನ್ನು ನಿರ್ವಹಿಸಲು ಶುಭಾಂಶುಗೆ ತರಬೇತಿ ನೀಡಲಾಗುತ್ತದೆ.

ಸಂವಹನ: ಮಿಷನ್‌ನ ಯಶಸ್ಸನ್ನು ಖಚಿತಪಡಿಸಿಕೊಳ್ಳಲು ಕಮಾಂಡರ್, ಇತರ ISS ಸಿಬ್ಬಂದಿ ಮತ್ತು ನೆಲದ ತಂಡಗಳೊಂದಿಗೆ ಸಂವಹನ ನಡೆಸುವುದು ಅವರ ದಿನಚರಿಯ ಪ್ರಮುಖ ಭಾಗವಾಗಿರುತ್ತದೆ.

 



Source link

Leave a Reply

Your email address will not be published. Required fields are marked *