B-2 stealth bomber: ಬರೋಬ್ಬರಿ 37 ತಾಸು, 7000 ಮೈಲಿ ಪ್ರಯಾಣ, ಪೈಲಟ್‌ಗಳಿಗೆ ಕಿಚನ್, ಟಾಯ್ಲೆಟ್ ವ್ಯವಸ್ಥೆ! | B 2 Bomber Pilots Had Microwave Snacks And Toilets On The 37 Hour Flight To Demolish Iranian Nuclear Plants Rav

B-2 stealth bomber: ಬರೋಬ್ಬರಿ 37 ತಾಸು, 7000 ಮೈಲಿ ಪ್ರಯಾಣ, ಪೈಲಟ್‌ಗಳಿಗೆ ಕಿಚನ್, ಟಾಯ್ಲೆಟ್ ವ್ಯವಸ್ಥೆ! | B 2 Bomber Pilots Had Microwave Snacks And Toilets On The 37 Hour Flight To Demolish Iranian Nuclear Plants Rav



B-2 stealth bomber Iran attackಇರಾನ್‌ನ ಅಣು ಕೇಂದ್ರಗಳ ಮೇಲಿನ ದಾಳಿಗೆ ಬಳಸಲಾದ ಬಿ-2 ಸ್ಟೆಲ್ತ್‌ ಬಾಂಬರ್‌ಗಳಲ್ಲಿ ಪೈಲಟ್‌ಗಳಿಗೆ ಆಹಾರ, ವಿಶ್ರಾಂತಿ ಕೊಠಡಿ, ಶೌಚಾಲಯ ಸೇರಿದಂತೆ ಎಲ್ಲಾ ಸೌಕರ್ಯಗಳನ್ನು ಒದಗಿಸಲಾಗಿತ್ತು

ವಾಷಿಂಗ್ಟನ್‌ (ಜೂ.24): ಇರಾನ್‌ನ ಫೊರ್ಡೋ ಸೇರಿದಂತೆ 3 ಅಣು ಕ್ರೇಂದ್ರಗಳ ಮೇಲಿನ ದಾಳಿಗೆ ಅಮೆರಿಕದಿಂದ ಹೊರಟಿದ್ದ ಬಿ-2 ಸ್ಟೆಲ್ತ್‌ ಬಾಂಬರ್‌ಗಳಲ್ಲಿ, ಆಹಾರ, ಆರಾಮದಿಂದ ಹಿಡಿದು ಶೌಚದವರೆಗೆ ಪೈಲಟ್‌ಗಳಿಗೆ ಬೇಕಾದ ಎಲ್ಲಾ ಮೂಲಭೂತ ಸೌಕರ್ಯಗಳು ಇದ್ದವು ಎಂದು ತಿಳಿದುಬಂದಿದೆ.

ಅಮೆರಿಕದ ಮಿಸೌರಿ ನೆಲೆಯಿಂದ ಇರಾನ್‌ನತ್ತ ರವಾನೆಯಾಗಿ, ಮತ್ತೆ ಮರಳಬೇಕಿದ್ದ 14 ಬಾಂಬರ್‌ಗಳು ನಿರಂತರ 37 ತಾಸುಗಳ ಕಾಲ ಹಾರಾಟ ನಡೆಸಬೇಕಿದ್ದ ಕಾರಣ, ಆ ಅವಧಿಯಲ್ಲಿ ಪೈಲಟ್‌ಗಳ ಅನುಕೂಲಕ್ಕಾಗಿ ವಿಮಾನಗಳೊಳಗೇ ಆಹಾರವನ್ನು ಬಿಸಿ ಮಾಡಿಕೊಳ್ಳಲು ಮೈಕ್ರೋವೇವ್‌, ಅದನ್ನು ಶೇಖರಿಸಿಡಲು ರೆಫ್ರಿಜರೇಟರ್, ವಿಶ್ರಾಂತಿ ಕೊಠಡಿಗಳು, ಶೌಚಾಲಯ ಇತ್ಯಾದಿ ಸೌಕರ್ಯಗಳನ್ನು ಒದಗಿಸಲಾಗಿತ್ತು. ಅಂತೆಯೇ, ಹಾರಾಟದ ವೇಳೆಯೇ ಹಲವು ಬಾರಿ ಇವುಗಳಿಗೆ ಇಂಧನವನ್ನೂ ಮಾರ್ಗಮಧ್ಯವೇ ತುಂಬಿಸಲಾಗಿತ್ತು.

ಬಿ-2ಗಳ ಸುದೀರ್ಘ ಕಾರ್ಯಾಚರಣೆ:

ಇರಾನ್‌ ಪರಮಾಣು ಕೇಂದ್ರಗಳ ಮೇಲೆ ಅಮೆರಿಕ ನಡೆಸಿದ ಕಾರ್ಯಾಚರಣೆಯನ್ನು, ಇದುವರೆಗಿನ ಬಿ-2 ಬಾಂಬರ್‌ಗಳ ಸುದೀರ್ಘಕಾಪರೇಷನ್‌ ಎನ್ನಲಾಗಿದೆ. ಈ ಮೊದಲು, 2001ರ 9/11 ಉಗ್ರದಾಳಿಯ ಬಳಿಕ ಇವುಗಳನ್ನು ಆಫ್ಘಾನಿಸ್ತಾನದ ವಿರುದ್ಧ ಬಳಸಲಾಗಿತ್ತು.



Source link

Leave a Reply

Your email address will not be published. Required fields are marked *