
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಶೀಘ್ರದಲ್ಲೇ ರಾಷ್ಟ್ರೀಯ ಕ್ರೀಡಾ ಮಸೂದೆಯಡಿ ಬರಲಿದೆ ಎಂದು ಕೇಂದ್ರ ಕ್ರೀಡಾ ಸಚಿವಾಲಯದ ಮೂಲಗಳು ಖಚಿತಪಡಿಸಿವೆ. ಲೋಕಸಭೆಯಲ್ಲಿ ಈ ತಿದ್ದುಪಡಿ ಮಸೂದೆ ಮಂಡಿಸಲು ಸಿದ್ದತೆ ನಡೆಸಿದೆ. ಬಿಸಿಸಿಐ ಕೇಂದ್ರದ ಯಾವುದೇ ಅನುದಾನ ಪಡೆಯುವುದಿಲ್ಲ, ಆದರೂ ಕ್ರೀಡಾ ವ್ಯಾಪ್ತಿಗೆ ತರಲು ನಿರ್ಧರಿಸಲಾಗಿದೆ. ಇದರಿಂದ ಉಳಿದ ರಾಷ್ಟ್ರೀಯ ಕ್ರೀಡಾ ಫೆಡರೇಷನ್ ಮಾದರಿಯಲ್ಲಿ ಬಿಸಿಸಿಐ ಕೂಡ ಈ ನೆಲಸದ ಕಾನೂನು ಅನ್ವಯವಾಗಲಿದೆ. ಬಿಸಿಸಿಐ ಕೂಡ ಸ್ವಾಯತ್ತ ಸಂಸ್ಥೆ ಯಾಗಿದ್ದು, ತಕರಾರು ಬಂದಾಗ ಉದ್ದೇಶಿತ ರಾಷ್ಟ್ರೀಯ ಕ್ರೀಡಾ ನ್ಯಾಯಮಂಡಳಿ ಪರಿಹಾರದ ವೇದಿಕೆ ಆಗಲಿದೆ
ಮಸೂದೆಯಲ್ಲಿ, ಆಡಳಿತಗಾರರ ವಯಸ್ಸಿನ ಮಿತಿಯನ್ನು 70 ರಿಂದ 75 ಕ್ಕೆ ಹೆಚ್ಚಿಸುವ ನಿಬಂಧನೆಯಿದೆ. ರೋಜರ್ ಬಿನ್ನಿ ಅವರು 70 ವರ್ಷ ತುಂಬಿದ್ದು, ಈ ಹೊಸ ನಿಯಮ ಅವರಿಗೆ ಅನುಕೂಲವಾಗಲಿದೆ.