Bharjari Bachelors:ರಕ್ಷಕ್​ಗೆ ಅದಿಲ್ಲ, ಅದಕ್ಕೇ ಹಗ್​ ಮಾಡಲ್ಲ ಎನ್ನೋದಾ ನಟಿ ರಮೋಲಾ? ವೇದಿಕೆ ಮೇಲೆ ಪೆಚ್ಚಾದ ಬುಲೆಟ್​ | Actress Ramola About Bullet Rakshak In Bharjari Bachelors Trolled In Social Media Suc

Bharjari Bachelors:ರಕ್ಷಕ್​ಗೆ ಅದಿಲ್ಲ, ಅದಕ್ಕೇ ಹಗ್​ ಮಾಡಲ್ಲ ಎನ್ನೋದಾ ನಟಿ ರಮೋಲಾ? ವೇದಿಕೆ ಮೇಲೆ ಪೆಚ್ಚಾದ ಬುಲೆಟ್​ | Actress Ramola About Bullet Rakshak In Bharjari Bachelors Trolled In Social Media Suc



ರಕ್ಷಕ್​ಗೆ ಅದಿಲ್ಲ, ಅದಕ್ಕೇ ಹಗ್​ ಮಾಡಲ್ಲ ಎಂದು ವೇದಿಕೆಯ ಮೇಲೆ ಹೇಳಿದ ನಟಿ ರಮೋಲಾ. ಇದರ ಪ್ರೊಮೋ ನೋಡಿ ನೆಟ್ಟಿಗರು ಹೇಳ್ತಿರೋದೇನು ನೋಡಿ! 

ಇದೀಗ ರಿಯಾಲಿಟಿ ಷೋಗಳಲ್ಲಿ ಕಾಮಿಡಿ ಎಂದರೆ ಡಬಲ್​ ಮೀನಿಂಗ್​ ಎನ್ನುವ ಸ್ಥಿತಿ ಇದೆ. ಕೆಲವು ಆ್ಯಂಕರ್​ಗಳು ಡಬಲ್​ ಮೀನಿಂಗ್​ಗಳನ್ನೇ ಹಾಸ್ಯ ಎಂದುಕೊಂಡಂತಿರುತ್ತದೆ. ಅದಕ್ಕೆ ತೀರ್ಪುಗಾರರಾಗಿ ಬರುವವರೂ ಸಾಥ್​ ನೀಡುತ್ತಲೇ ಆ ಡಬಲ್​ ಮೀನಿಂಗ್​ ಅನ್ನು ಮತ್ತಷ್ಟು ಅಶ್ಲೀಲ ಎಂಬಂತೆ ಬಿಂಬಿಸುತ್ತಿದ್ದಾರೆ. ಅದೂ ಸಾಲದು ಎನ್ನುವುದಕ್ಕೆ ಕೆಲವೊಂದು ಕಾರ್ಯಕ್ರಮಗಳಲ್ಲಿ ಕೂಡ ಹಾಸ್ಯದ ಹೆಸರಿನಲ್ಲಿ ರಿಯಾಲಿಟಿ ಷೋಗಳಲ್ಲಿ ಅಶ್ಲೀಲತೆಯೇ ತುಂಬಿ ಹೋಗಿದೆ. ಇಂದಿನ ಹಲವು ರಿಯಾಲಿಟಿ ಷೋಗಳಲ್ಲಿ ಅದರ ಮೂಲ ಉದ್ದೇಶ ಬಿಟ್ಟು ಅಸಭ್ಯ ಮಾತುಗಳು, ಜೋಕ್​ಗಳು, ಅಬ್ಬರದ ಕೂಗಾಟ, ಕಿರುಚಾಟಗಳೇ ಹೆಚ್ಚಾಗಿವೆ ಎಂದು ಬೈದುಕೊಳ್ಳುತ್ತಲೇ ಅದನ್ನು ಆಸ್ವಾದಿಸುವ ದೊಡ್ಡ ವರ್ಗವೇ ಇದೆ. ಮಕ್ಕಳ ಕಾರ್ಯಕ್ರಮಗಳಲ್ಲಿಯೂ ಮಕ್ಕಳ ಬಾಯಲ್ಲಿಯೇ ಡಬಲ್​ ಮೀನಿಂಗ್​ ಹೇಳಿಸಿ ಅದನ್ನು ಹಾಸ್ಯ ಎಂದುಕೊಳ್ಳುವ ಕಾರ್ಯಕ್ರಮಗಳು ಎಷ್ಟಿಲ್ಲ ಹೇಳಿ? ತಾವೇನು ಹೇಳುತ್ತಿದ್ದೇವೆ ಎನ್ನುವುದು ತಿಳಿಯದ ಮಕ್ಕಳು, ತಾವು ಹೇಳಿದ್ದನ್ನು ಕೇಳಿ ಜನರು ನಗುವಾಗ ಖುಷಿ ಪಡುವ ಅಸಭ್ಯ ಸಂಸ್ಕೃತಿಯನ್ನೂ ಇಂದಿನ ರಿಯಾಲಿಟಿ ಷೋಗಳು ಹುಟ್ಟುಹಾಕುತ್ತಿವೆ!

ಕೆಲ ದಿನಗಳ ಹಿಂದೆ ರಿಯಾಲಿಟಿ ಷೋಗಳಲ್ಲಿನ ಇದೇ ಡಬಲ್​ ಮೀನಿಂಗ್​ಗಳ ಬಗ್ಗೆ ಅಸಮಾಧಾನ ಹೊರಹಾಕಿದ್ದರು ನಟ ರವಿಚಂದ್ರನ್​. ಈಗಲೂ ತೀರ್ಪುಗಾರರಾಗಿರುವ ರವಿಚಂದ್ರನ್​ ಅವರು ಇದೀಗ ಇಂಥ ಷೋಗಳಲ್ಲಿನ ಅಸಭ್ಯ, ಅಶ್ಲೀಲ ಮಾತುಗಳ ಬಗ್ಗೆ ಖೇದ ವ್ಯಕ್ತಪಡಿಸಿದ್ದರು. ಆದರೆ ಅವರ ಸಮ್ಮುಖದಲ್ಲಿಯೇ ನಟಿ ರಮೋಲಾ ಡಬಲ್​ ಮೀನಿಂಗ್​ ಮಾತನಾಡಿದ್ದು, ಅದಕ್ಕೆ ಆ್ಯಂಕರ್​ ಉಪ್ಪು-ಖಾರ ಹಾಕಿದ್ದು, ಅದನ್ನು ನೋಡಿ ಖುದ್ದು ರವಿಚಂದ್ರನ್​ ಅವರು ನಕ್ಕಿದ್ದು ವಿಡಿಯೋ ವೈರಲ್​ ಆಗಿದೆ. ಇದಕ್ಕೆ ಬಗ್ಗೆ ಟೀಕೆಗಳ ಮಹಾಪೂರವೇ ಹರಿದುಬರುತ್ತಿದೆ. ಇದೇನು ರಿಯಾಲಿಟಿ ಷೋನಾ ಅಥ್ವಾ… ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ.

ಇದಕ್ಕೆ ರಮೋಲಾ, ಬುಲೆಟ್​ ರಕ್ಷಕ್​ ಕುರಿತು ಈ ಡಾನ್ಸ್​ ಹೇಳಿಕೊಡುವುದು ನನಗೆ ತುಂಬಾ ಕಷ್ಟವಾಯಿತು. ಏಕೆಂದರೆ ಬುಲೆಟ್​ಗೆ ಇದಿಲ್ಲ ಎಂದರು. ಆಗ ಅಲ್ಲಿದ್ದವರು ಎಲ್ಲಾ ಗೊಳ್ಳೆಂದು ನಕ್ಕರೆ, ರಕ್ಷಕ್​ ಮುಖ ಮಾತ್ರ ಸಪ್ಪಗಾಗಿತ್ತು. ನಂತರ ಆ್ಯಂಕರ್​ ನಿರಂಜನ್​ ಏನದು ಎಂದು ಕೇಳಿದಾಗ, ನಿಮಗೆ ಇದೆಯಲ್ಲ, ಇದು ರಕ್ಷಕ್​ಗೆ ಇಲ್ಲ ಎನ್ನುತ್ತಲೇ ನೀವು ಸಮಯ ಸಿಕ್ಕಾಗ ಹಗ್​ ಮಾಡಿಕೊಳ್ಳುತ್ತೀರಲ್ಲ, ರಕ್ಷಕ್​ ಹಾಗೆ ಮಾಡಿಕೊಳ್ಳುವುದಿಲ್ಲ. ನಾನೇ ಅವರ ಕೈಹಿಡಿಯಬೇಕು ಎಂದೆಲ್ಲಾ ಆ್ಯಕ್ಷನ್​ ಮಾಡಿ ತೋರಿಸಿದಾಗ, ನಿರಂಜನ್​ ಅವರು ಇವರ್ಯಾಕೋ ಏನೇನೋ ಹೇಳ್ತಿದ್ದಾರೆ ಎಂದರು. ಅಲ್ಲಿದ್ದ ಇತರ ಸ್ಪರ್ಧಿಗಳು ಇದು ಸಭ್ಯ ಜೋಕ್​ ಎನ್ನುವಂತೆ ಜೋರಾಗಿ ನಕ್ಕರು. ಇದರ ಪ್ರೊಮೋ ಸೋಷಿಯಲ್​ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಭಾರಿ ಟೀಕೆ ವ್ಯಕ್ತವಾಗಿದೆ. ಈ ವಿಡಿಯೋ ಅನ್ನು ಕ್ವೀನ್​ಡೇಂಜರ್ ಎನ್ನುವ ಇನ್​ಸ್ಟಾದಲ್ಲಿ ಶೇರ್​ ಮಾಡಲಾಗಿದೆ. 

ಅಂದಹಾಗೆ ಇದು ಭರ್ಜರಿ ಬ್ಯಾಚುಲರ್ಸ್​ ಷೋದಲ್ಲಿ ನಡೆದಿರುವ ಘಟನೆ. ಇದರಲ್ಲಿ ಇರುವ ಜೋಡಿಗಳೆಲ್ಲಾ ತುಂಬಾ ಚೆನ್ನಾಗಿ ಪರ್ಫಾಮೆನ್ಸ್​ ಮಾಡುತ್ತಿದ್ದು, ಅವರ ಪೈಕಿ ಒಂದು ಜೋಡಿ ರಮೋಲಾ ಮತ್ತು ಬುಲೆಟ್​ ರಕ್ಷಕ್​ ಅವರದ್ದು. ಹಾಸ್ಯ ನಟ ಬುಲೆಟ್ ಪ್ರಕಾಶ್ ಅವರ ಮಗ ರಕ್ಷಕ್ ಬುಲೆಟ್ ಬಿಗ್​ಬಾಸ್​ ಬಳಿಕ ಸಕತ್ ಫೇಮಸ್​ ಆದವರು. ಬಿಗ್​ಬಾಸ್​ ಬಗ್ಗೆ ಹೇಳಿಕೆ ನೀಡಿ ಕಾಂಟ್ರವರ್ಸಿಗೆ ಒಳಗಾಗಿದ್ದರೂ ಇದೀಗ ಅವರಿಗೆ ಸಕತ್​ ಡಿಮಾಂಡ್​ ಕೂಡ ಇದೆ. ಇದೀಗ ಅವರು, ಜೀ ಕನ್ನಡದಲ್ಲಿ ಪ್ರಸಾರ ಆಗ್ತಿರೋ ಭರ್ಜರಿ ಬ್ಯಾಚುಲರ್ಸ್​ಗೆ ಎಂಟ್ರಿ ಕೊಟ್ಟಿದ್ದಾರೆ. ಇದರಲ್ಲಿ ಅವರಿಗೆ, ಸೀತಾರಾಮ ವಿಲನ್​ ಚಾಂದನಿ ಅರ್ಥಾತ್​ ನಟಿ ರಮೋಲಾ ಜೋಡಿಯಾಗಿದ್ದಾರೆ. ಇದಾಗಲೇ ಇವರಿಬ್ಬರೂ ಸಾಕಷ್ಟು ಲವ್​ಸಾಂಗ್​ಗಳನ್ನೂ ಮಾಡಿದ್ದಾರೆ.



Source link

Leave a Reply

Your email address will not be published. Required fields are marked *