
ಅದೇನೇ ಇದ್ದರೂ, ಭರ್ಜರಿ ಬ್ಯಾಚುಲರ್ಸ್ನಲ್ಲಿ ಹವಾ ಸೃಷ್ಟಿಸಿದ ಜೋಡಿ ಸುನಿಲ್- ಅಮೃತಾ ಅವರದ್ದು. ಅದೊಮ್ಮೆ ಇಬ್ಬರೂ ದೇವಸ್ಥಾನದಲ್ಲಿ ಹಾರ ಬದಲಾಯಿಸಿಕೊಂಡಿದ್ದರಿಂದ ಇವರಿಬ್ಬರ ಮದ್ವೆಯಾಗಿಯೇ ಹೋಯ್ತು ಎನ್ನುವ ಸುದ್ದಿಯಾಗಿತ್ತು. ಅದರ ಬಗ್ಗೆ ಇದೀಗ ಮಾಧ್ಯಮದಲ್ಲಿ ಈ ಜೋಡಿ ಮಾತನಾಡಿದೆ. ಸನೀಲ್ ಅವರು, ನಾನು ಹಳ್ಳಿಯಲ್ಲಿ ಬೆಳೆದವ, ಈಕೆ ಬೆಂಗಳೂರಿನಲ್ಲಿಯೇ ಬೆಳೆದವಳು. ಹಳ್ಳಿಯ ಲೈಫ್ ಗೊತ್ತಿರಲಿಲ್ಲ. ಆದರೆ ಅಲ್ಲಿಗೆ ಕರೆದುಕೊಂಡು ಹೋದಾಗ, ಅದ್ಧೂರಿ ಸ್ವಾಗತ ಸಿಕ್ಕಿತು. ಇಡಿ ಹಳ್ಳಿಗೆ ಹಳ್ಳಿಯ ಜನರೇ ಸೇರಿದ್ದರು ಎಂದು ಅಂದು ನಡೆದ ಘಟನೆ ವಿವರಿಸಿದರು.