
ಐವಿಎಫ್ ಮೂಲಕ ಅವಳಿ ಮಕ್ಕಳನ್ನು ಹೆರಲಿರುವ ನಟಿ ಭಾವನಾ ರಾಮಣ್ಣ (Bhavana Ramanna) ಸದ್ಯ ಸಕತ್ ಸುದ್ದಿಯಲ್ಲಿದ್ದಾರೆ. ಮೊನ್ನೆಯಷ್ಟೇ ನಟಿ ಅದ್ಧೂರಿಯ ಸೀಮಂತ ಮಾಡಿಕೊಂಡಿದ್ದಾರೆ. ಇನ್ನೇನು ಮಕ್ಕಳ ಆಗಮನಕ್ಕೆ ನಟಿ ಸೇರಿದಂತೆ ಅವರ ಅಭಿಮಾನಿಗಳು ಕೂಡ ಕಾತರದಿಂದ ಕಾಯುತ್ತಿದ್ದಾರೆ. ಅಷ್ಟಕ್ಕೂ ಐವಿಎಫ್ ಮೂಲಕ ಹಲವಾರು ಮಂದಿ ಮಕ್ಕಳನ್ನು ಪಡೆಯುತ್ತಿದ್ದರೂ, ಭಾವನಾ ಸುದ್ದಿ ಮಾತ್ರ ಸಕತ್ ಸದ್ದು ಮಾಡುತ್ತಿರಲು ಕೆಲವು ಕಾರಣಗಳು ಇವೆ. ಮೊದಲನೆಯದ್ದು ಆಕೆ ಸೆಲೆಬ್ರಿಟಿ, ಇನ್ನೊಂದು ಆಕೆ ಅವಿವಾಹಿತೆ, ಮತ್ತೊಂದು ಮದುವೆಯಾಗಲು ಆಕೆ ಒಪ್ಪದೇ ಮಕ್ಕಳನ್ನು ಪಡೆಯಲು ಚಿಂತಿಸಿರುವುದು… ಇವೆಲ್ಲವೂ ಸೇರಿ ನಟಿ ಭಾವನಾ ಆರು ತಿಂಗಳ ಗರ್ಭಿಣಿ ಎನ್ನುವ ಸುದ್ದಿ ತಿಳಿದಾಗಿನಿಂದಲೂ ಇದರ ಬಗ್ಗೆ ಪರ-ವಿರೋಧಗಳ ದೊಡ್ಡ ಚರ್ಚೆಯೇ ಶುರುವಾಗಿದೆ. In Vitro Fertilization (IVF) ಮೂಲಕ ಮಗು ಪಡೆಯುತ್ತಿರುವುದಕ್ಕೆ ಹಲವರು ಅಭಿನಂದನೆ ಸಲ್ಲಿಸಿದರೆ, ಮತ್ತಷ್ಟು ಮಂದಿ ಈ ಕ್ರಮ ಸರಿಯಲ್ಲ ಎನ್ನುತ್ತಿದ್ದಾರೆ.