Niveditha Gowda: ಕಮೆಂಟ್ ಸೆಕ್ಷನ್​ಗೆ ಸ್ವಾಗತ- ಸುಸ್ವಾಗತ; ಎಲ್ಲರಿಗೂ ಹಾಜರಾತಿ ಕಡ್ಡಾಯ!

Niveditha Gowda: ಕಮೆಂಟ್ ಸೆಕ್ಷನ್​ಗೆ ಸ್ವಾಗತ- ಸುಸ್ವಾಗತ; ಎಲ್ಲರಿಗೂ ಹಾಜರಾತಿ ಕಡ್ಡಾಯ!

Niveditha Gowda: ಕಮೆಂಟ್ ಸೆಕ್ಷನ್​ಗೆ ಸ್ವಾಗತ- ಸುಸ್ವಾಗತ; ಎಲ್ಲರಿಗೂ ಹಾಜರಾತಿ ಕಡ್ಡಾಯ!

ಬಿಗ್​ಬಾಸ್​ ಖ್ಯಾತಿಯ ನಿವೇದಿತಾ ಗೌಡ ರೀಲ್ಸ್​ ಹಾಕೋದನ್ನೇ ಕಾಯ್ತಿರೋ ನೆಟ್ಟಿಗರು ಈ ಬಾರಿ ಭರ್ಜರಿ ಕಮೆಂಟ್​ ಮಾಡಿದ್ದಾರೆ. ಕಮೆಂಟ್​ ಓದುವ ಸಲುವಾಗಿಯೇ ಬರೋ ಹಾಗಿದೆ ನೋಡಿ….

ಬಿಗ್​ಬಾಸ್​​ ಖ್ಯಾತಿಯ, ಚಂದನ್​ ಶೆಟ್ಟಿ ಮಾಜಿ ಪತ್ನಿ ನಟಿ ನಿವೇದಿತಾ ಗೌಡ ಇದೀಗ ಸಕತ್​ ಡಿಮಾಂಡ್​ನಲ್ಲಿ ಇರುವ ನಟಿ. ವಿವಿಧ ರಿಯಾಲಿಟಿ ಷೋಗಳಿಂದ ಹಿಡಿದು, ವಿದೇಶದಲ್ಲಿನ ಫಂಕ್ಷನ್​ಗಳಿಗೂ ಈಕೆಯನ್ನು ಅತಿಥಿಯಾಗಿ ಕರೆಯಲಾಗುತ್ತಿದೆ. ಕೆಲ ತಿಂಗಳ ಹಿಂದೆ ಶ್ರೀಲಂಕಾದ ಜೂಜು ಅಡ್ಡೆಗೂ ಹೋಗಿ ಬಂದಿದ್ದರು ನಟಿ. ಇದಾದ ಬಳಿಕವೂ ಸಕತ್​ ಫಾರಿನ್​ ಟ್ರಿಪ್​ ಮಾಡಿ, ತಮ್ಮ ಸ್ನೇಹಿತೆ ವಾಣಿ ಎನ್ನುವವರ ಜೊತೆ ರೀಲ್ಸ್​ ಮಾಡುತ್ತಾ ಎಂಜಾಯ್​ ಮಾಡುತ್ತಿದ್ದಾರೆ. ಕ್ವಾಟ್ಲೆ ಕಿಚನ್​ನಲ್ಲಿಯೂ ಅಭಿಮಾನಿಗಳ ಸಂಖ್ಯೆ ಹೆಚ್ಚಿಸಿಕೊಂಡಿದ್ದಾರೆ.

ಅಷ್ಟಕ್ಕೂ, ನಿವೇದಿತಾ ಗೌಡ ಸೋಷಿಯಲ್​ ಮೀಡಿಯಾದ ಸೆನ್ಸೇಷನಲ್​ ಆಗಿರುವುದು ಗೊತ್ತಿರುವ ವಿಷಯವೇ. ದಿನದಿಂದ ದಿನಕ್ಕೆ ಮೇಲಕ್ಕೆ ಹೋಗುತ್ತಿರುವ ಬಟ್ಟೆಗಳನ್ನು ಹಾಕುತ್ತಲೇ ಕಮೆಂಟಿಗರಿಗೆ ಉಗಿಯಲು ಸಾಕಷ್ಟು ಅವಕಾಶ ಕಲ್ಪಿಸುತ್ತಿದ್ದಾರೆ.

ತಮ್ಮ ಡಿಕ್ಷನರಿಯಲ್ಲಿ ಇದ್ದ ಬೈಗುಳಗಳನ್ನೆಲ್ಲಾ ಕಮೆಂಟ್​ ಬಾಕ್ಸ್​ನಲ್ಲಿ ತುಂಬುತ್ತಲೇ, ಈಕೆಯ ವಿಡಿಯೋ ಮಾತ್ರ ನೋಡಲು ಬಿಡುವುದಿಲ್ಲ ಒಂದಿಷ್ಟು ಕಮೆಂಟಿಗ ಅಭಿಮಾನಿಗಳು. ಇದೀಗ ಹಾಟ್ ವಿಡಿಯೋ ನೋಡಿ ನಾವೆಲ್ಲಾ ಬಂದಿರೋದೇ ಕಮೆಂಟ್​ ಓದಲಿಕ್ಕೆ ಅಂದಿರೋ ನೆಟ್ಟಿಗರು, ಕಮೆಂಟ್ ಸೆಕ್ಷನ್​ಗೆ ಸ್ವಾಗತ- ಸುಸ್ವಾಗತ; ಎಲ್ಲರಿಗೂ ಹಾಜರಾತಿ ಕಡ್ಡಾಯ ಎಂದು ತಮಾಷೆ ಮಾಡಿದ್ದಾರೆ!

ಅದೇ ನಿವೇದಿತಾಗೆ ವರದಾನ. ಆಕೆಗೂ ಗೊತ್ತು, ಎಷ್ಟು ಹಾಟ್​ ಆಗಿ ರೀಲ್ಸ್​ ಮಾಡುತ್ತೇನೋ, ಅಷ್ಟು ಬೈಯುತ್ತಲೇ ತಮ್ಮ ವಿಡಿಯೋ, ರೀಲ್ಸ್​ ನೋಡುತ್ತಾರೆ ಎನ್ನುವುದು. ಹಾಟ್​ ಆದಷ್ಟೂ ವ್ಯೂಸ್​ ಜಾಸ್ತಿಯಾಗುತ್ತದೆ ಎನ್ನುವುದು ಇಂಥ ಹಲವು ನಟಿಯರು ಇದಾಗಲೇ ಅರಿತುಕೊಂಡಿದ್ದಾರೆ. ಏಕೆಂದರೆ, ಸಭ್ಯತೆ, ಸಂಸ್ಕೃತಿ, ಸನ್ನಡತೆ… ಹೀಗೆ ಕಮೆಂಟ್​ಗಳಲ್ಲಿ ಭಾಷಣ ಬಿಗಿಯುವ ಕಮೆಂಟಿಗರು ಯಾವುದೇ ಸಭ್ಯತೆಯ ರೀಲ್ಸ್​ಗಳನ್ನು, ಉತ್ತಮ ಸಂದೇಶ ನೀಡುವ ವಿಷಯಗಳನ್ನು ವೀಕ್ಷಿಸುವುದು ಎಷ್ಟು ಎಂದು ಅವರಿಗೇ ಗೊತ್ತು.

ಇದೀಗ ನಿವೇದಿತಾ ಗೌಡ ಮಾಮೂಲಿನಂತೆಯೇ ತುಂಡುಡುಗೆ ತೊಟ್ಟು ಪೋಸ್​ ಕೊಟ್ಟಿದ್ದಾರೆ. ಹಾಟ್​ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಹೀಗೆ ದಿನದಿಂದ ದಿನಕ್ಕೆ ಈಕೆಯ ರೀಲ್ಸ್​ ಹೆಚ್ಚುತ್ತಲೇ ಇದೆ. ಸಿನಿಮಾಗಳಲ್ಲಿ ನಟಿಸದಿದ್ದರೂ, ಧಾರಾಳ ದೇಹ ಪ್ರದರ್ಶನ ಮಾಡಿಕೊಂಡಿರುವ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ಹರಿಬಿಡುತ್ತಲೇ ಫೇಮಸ್​ ಆಗ್ತಿರೋ ನಟಿಯರು ಒಂದಿಷ್ಟು ಮಂದಿ ಇದ್ದಾರೆ. ಅಂಗಾಂಗಗಳ ಪ್ರದರ್ಶನ ಹೆಚ್ಚಾದಷ್ಟೂ ಅವರಿಗೆ ಡಿಮಾಂಡ್​ ಜಾಸ್ತಿಯಾಗ್ತಿರೋದು ಈಗಿನ ಟ್ರೆಂಡ್​.

ಟ್ರೋಲ್​ ಮಾಡುವುದಕ್ಕಾಗಿಯೇ ಒಂದಿಷ್ಟು ಜನ ಇಂಥ ನಟಿಯರ ವಿಡಿಯೋ ಕಾಯುತ್ತಲೇ ಇರುತ್ತಾರೆ. ಅವರು ಟ್ರೋಲ್​ ಮಾಡಿ ಖುಷಿ ಪಟ್ಟುಕೊಂಡರೆ, ದೇಹ ಪ್ರದರ್ಶನ ಧಾರಾಳವಾಗಿ ಮಾಡುವ ನಟಿಯರೂ ಫುಲ್​ ಖುಷ್​. ಒಟ್ಟಿನಲ್ಲಿ ಪ್ರಚಾರ ಬೇಕು ಅಷ್ಟೇ, ಪಾಸಿಟಿವ್​, ನೆಗೆಟಿವ್​ ಅದೆಲ್ಲಾ ಯಾರಿಗೆ ಬೇಕು ಎನ್ನುವ ಜಾಯಮಾನ ಇವರದ್ದು. ಅವರ ಸಾಲಿಗೆ ನಿವೇದಿತಾ ಸೇರಿ ವರ್ಷಗಳೇ ಕಳೆದು ಹೋಗಿವೆ.

ಇಂತಿಪ್ಪ ನಿವೇದಿತಾ ಗೌಡ, ಇದೀಗ ಬಿಗ್​ಬಾಸ್​ ಸ್ಪರ್ಧಿಗಳಾಗಿದ್ದ ರಜತ್, ಧನರಾಜ್ ಹಾಗೂ ನಟಿ ಅಖಿಲಾ ಪ್ರಕಾಶ್ ಜೊತೆ ಭರ್ಜರಿ ರೀಲ್ಸ್​ ಮಾಡಿದ್ದರು. ಮಾಮೂಲಿನಂತೆ ತುಂಡುಡುಗೆಯಲ್ಲಿಯೇ ಕಾಣಿಸಿಕೊಂಡಿದ್ದಾರೆ.

ಇವರೆಲ್ಲರೂ ರಜನಿಕಾಂತ್ ಅಭಿನಯದ ಕೂಲಿ ಸಿನಿಮಾದ ಮೋನಿಕಾ ಹಾಡು ಮೊನಿಕಾಕ್ಕೆ ಸ್ಟೆಪ್​ ಹಾಕಿದ್ದಾರೆ. ಕೂಲಿ ಸಿನಿಮಾದಲ್ಲಿ ಮೋನಿಕಾ ಆಗಿ ಸೊಂಟ ಬಳುಕಿಸಿದ್ದಾರೆ ಪೂಜಾ ಹೆಗ್ಡೆ. ಅದೇ ಹಾಡಿಗೆ ನಿವೇದಿತಾ ಗೌಡ ಹಾಗೂ ಸ್ನೇಹಿತರು ಭರ್ಜರಿ ಸ್ಟೆಪ್​ ಹಾಕಿದ್ದು ಅದೀಗ ಭಾರಿ ವೈರಲ್​ ಆಗ್ತಿದೆ.

ನಿವೇದಿತಾ ಗೌಡ ಕುರಿತು ಹೇಳುವುದಾದರೆ, ಸದ್ಯ ಕ್ವಾಟ್ಲೆ ಕಿಚನ್​ ಷೋನಲ್ಲಿ ಕಾಣಿಸಿಕೊಳ್ತಿದ್ದಾರೆ. ಅವರಿಗೆ ಕೆಲ ವಾರಗಳ ಹಿಂದೆ ಹಸುವಿನ ಹಾಲು ಕರೆಯುವ ಟಾಸ್ಕ್​ ಕೊಡಲಾಗಿತ್ತು. ಇದನ್ನು ಕೇಳಿ ನಿವೇದಿತಾ ಸುಸ್ತಾಗಿ ಹೋಗಿದ್ದರು. ಇವರಿಗೆ ಈ ಟಾಸ್ಕ್​ ಕೊಟ್ಟಿರೋದಕ್ಕೆ ಇನ್ನಿಲ್ಲದ ತಮಾಷೆಯ ಕಮೆಂಟ್ಸ್​ಗಳು ಬಂದಿದ್ದವು.
View this post on Instagram
A post shared by Niveditha Gowda 👑 (@niveditha__gowda)

Source link

Leave a Reply

Your email address will not be published. Required fields are marked *