ವಿಮಾನ ಲ್ಯಾಂಡಿಂಗ್‍ಗೆ 200 ಅಡಿ ಎತ್ತರದಲ್ಲಿದ್ದಾಗ ಪಕ್ಷಿ ಡಿಕ್ಕಿ ಹೊಡೆದಿದೆ
ತಿರುವನಂತಪುರ: ತಿರುವನಂತಪುರ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ವೇಳೆ ಏರ್ ಇಂಡಿಯಾ ವಿಮಾನಕ್ಕೆ ಪಕ್ಷಿ ಡಿಕ್ಕಿ ಹೊಡೆದಿದೆ. ದೆಹಲಿ – ತಿರುವನಂತಪುರ ಏರ್ ಇಂಡಿಯಾ ವಿಮಾನ ಲ್ಯಾಂಡಿಂಗ್‍ಗೆ 200 ಅಡಿ ಎತ್ತರದಲ್ಲಿದ್ದಾಗ ಈ ಘಟನೆ ಸಂಭವಿಸಿದೆ. ಸುರಕ್ಷಿತವಾಗಿ ಲ್ಯಾಂಡ್ ಆದ ವಿಮಾನದ ಪೈಲಟ್ ಈ ಬಗ್ಗೆ ವರದಿ ಮಾಡಿದ್ದಾರೆ.
ಪ್ರಾಥಮಿಕ ತಪಾಸಣೆಯಲ್ಲಿ ವಿಮಾನಕ್ಕೆ ಹಾನಿಯಾಗಿಲ್ಲ. ಆದರೆ ವಿವರವಾದ ತಪಾಸಣೆ ಅಗತ್ಯವಿರುವುದರಿಂದ ದೆಹಲಿಗೆ ಇಂದಿನ ಹಿಂತಿರುಗುವ ಪ್ರಯಾಣ ರದ್ದುಗೊಂಡಿದೆ. ಪ್ರಯಾಣಿಕರನ್ನು ಹೋಟೆಲ್‍ಗೆ ಸ್ಥಳಾಂತರಿಸಲಾಗಿದೆ. ನಾಳೆ ವಿವರವಾದ ತಪಾಸಣೆ ನಂತರ ವಿಮಾನವು ದೆಹಲಿಗೆ ಹಿಂತಿರುಗಲಿದೆ.
ಇದೇ ವೇಳೆ, ಮಳೆಯಿಂದಾಗಿ ಕೊಚ್ಚಿ ವಿಮಾನ ನಿಲ್ದಾಣದಲ್ಲಿ ಇಳಿಯಲು ಸಾಧ್ಯವಾಗದ ಎರಡು ವಿಮಾನಗಳನ್ನು ತಿರುವನಂತಪುರಕ್ಕೆ ತಿರುಗಿಸಲಾಗಿದೆ. ಇಂದು ರಾತ್ರಿ 8.42 ಕ್ಕೆ ಬೆಂಗಳೂರಿನಿಂದ ಬಂದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ ಮತ್ತು 8.52 ಕ್ಕೆ ಹೈದರಾಬಾದ್‌ನಿಂದ ಬಂದ ಇಂಡಿಗೋ ವಿಮಾನವನ್ನು ತಿರುಗಿಸಲಾಗಿದೆ.