
ಹೊಸಪೇಟೆ: ಖಾಸಗಿ ಆಸ್ಪತ್ರೆ ವೈದ್ಯೆಯ ಎಡವಟ್ಟು, 13 ಜನ ಬಾಣಂತಿಯರಿಗೆ ನರಕಯಾತನೆ
ವಿಜಯನಗರ, ಜೂನ್ 22: ಹೊಸಪೇಟೆಯ (Hospete) ಶ್ರೀಕರಿ ಖಾಸಗಿ ಆಸ್ಪತ್ರೆಗೆ ಬಳ್ಳಾರಿ (Ballari) ಸೇರಿದಂತೆ ವಿವಿಧಡೆಯಿಂದ ರೋಗಿಗಳು ಬರುತ್ತಾರೆ. ಕಳೆದ ಮೂರು ವರ್ಷಗಳಿಂದ ಈ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸಿಕೊಂಡ ಬಾಣಂತಿಯರಿಗೆ (Maternal) ಸಿಜರಿಯನ್ ಆದ ಜಾಗದಲ್ಲಿ ಕೀವು ಬರುತ್ತಿದೆ. ಇದರಿಂದ ಹೊಟ್ಟೆಯ ಒಳ ಭಾಗದಲ್ಲಿ ಸಾಕಷ್ಟು ಇನ್ಫೆಕ್ಷನ್ ಆಗಿದೆ. ಜೊತೆಗೆ ಗರ್ಭಚೀಲವನ್ನೇ ತಗಿಸಿಕೊಳ್ಳುವಂತಹ ಪರಿಸ್ಥಿತಿ ಉಂಟಾಗಿದೆ. ಹೀಗಾಗಿ ವೈದ್ಯರ ನಿರ್ಲಕ್ಷ್ಯಕ್ಕೆ ಬಾಣಂತಿಯರು ಪಡಬಾರದ ಕಷ್ಟ ಪಡುತ್ತಿದ್ದಾರೆ. ಈ ವೈದ್ಯಯ ವಿರುದ್ಧ ಕ್ರಮ ಆಗಬೇಕು ಅಂತ ನೊಂದವರು ಆಗ್ರಹಿಸಿದ್ದಾರೆ….