ಸಿಎಂ ಸಿದ್ದರಾಮಯ್ಯ ಹಾಗೂ ಬಾಲಿವುಡ್ ನಟ ಅಮೀರ್ ಖಾನ್ ದೆಹಲಿಯಲ್ಲಿ ಆಕಸ್ಮಿಕವಾಗಿ ಭೇಟಿ ಆಗಿದ್ದಾರೆ. ಸಿದ್ದರಾಮಯ್ಯ ಅವರು ರಾಷ್ಟ್ರಪತಿಗಳ ಭೇಟಿಗೆ ರಾಷ್ಟ್ರಪತಿ ಭವನಕ್ಕೆ ತೆರಳಿದ್ದರು. ಅದೇ ವೇಳೆ ಅಮೀರ್ ಖಾನ್ ಸಹ ಅಲ್ಲಿಯೇ ಹಾಜರಿದ್ರು. ಅಮೀರ್ ಖಾನ್ ಹಾಗೂ ಸಿದ್ದರಾಮಯ್ಯ ಕುಷಲೋಪರಿ ವಿಚಾರಿಸಿಕೊಂಡಿದ್ದಾರೆ. ಅಮೀರ್ ಖಾನ್ ನಿರ್ಮಿಸಿರುವ ‘ಸಿತಾರೆ ಜಮೀನ್ ಪರ್’ ಸಿನಿಮಾ ಇತ್ತೀಚೆಗಷ್ಟೆ ಬಿಡುಗಡೆ ಆಗಿದ್ದು, ಸಿನಿಮಾದ ಬಗ್ಗೆ ಅಮೀರ್ ಖಾನ್, ಸಿದ್ದರಾಮಯ್ಯ ಬಳಿ ಮಾಹಿತಿ ಹಂಚಿಕೊಂಡಿದ್ದಾರೆ.
ತೆರೆ ಮೇಲೆ ಬರಲಿದೆ ಸೌರವ್ ಗಂಗೂಲಿ ಜೀವನ ಕಥೆ: ಭಾರತ ಕ್ರಿಕೆಟ್ ಕಂಡ ಶ್ರೇಷ್ಠ ಆಟಗಾರ ಕಮ್ ನಾಯಕ ಸೌರವ್ ಗಂಗೂಲಿಯ ಜೀವನಾ ಗಾಥೆ ಈಗ ಸಿನಿಮಾ ಆಗುತ್ತಿದೆ. ಸ್ವತಹ ಸೌರವ್ ಗಂಗೂಲಿಯೇ ಈ ವಿಚಾರವನ್ನ ಖಚಿತಪಡಿಸಿದ್ದಾರೆ. ಸೌರವ್ ಗಂಗೂಲಿ ಪಾತ್ರದಲ್ಲಿ ನಟ ರಾಜಕುಮಾರ್ ರಾವ್ ನಟಿಸಲಿದ್ದಾರೆ. 2026ರ ಜನವರಿಯಲ್ಲಿ ಸಿನಿಮಾ ನಿರ್ಮಾಣದ ಶೂಟಿಂಗ್ ಆರಂಭವಾಗಲಿದೆ ಎಂದು ಸೌರವ್ ಗಂಗೂಲಿ ಹೇಳಿದ್ದಾರೆ.
ಸ್ಯಾಂಡಲ್ವುಡ್ನಲ್ಲಿ ಭರವಸೆ ಮೂಡಿಸಿದ ಹೊಸ ಸಿನಿಮಾ: ಕನ್ನಡ ಸಿನಿಮಾ ರಂಗಕ್ಕೆ ಈಗ ಭರವಸೆಯ ಸಿನಿಮಾಗಳು ಬೇಕಾಗಿದೆ. ಇದೀಗ ಅದೇ ಭರವಸೆ ಹೆಸರಿನಲ್ಲಿ ಸಿನಿಮಾ ಒಂದು ಸಿದ್ಧವಾಗಿದ್ದು ಚಿತ್ರದ ಟ್ರೇಲರ್ ಬಿಡುಗಡೆ ಆಗಿದೆ. ನಾಗರಾಜ್ ನಿರ್ಮಾಣದ ಭರವಸೆ ಸಿನಿಮಾವನ್ನ ಮುತ್ತು ಗಂಗೂರ ನಿರ್ದೇಶನ ಮಾಡಿದ್ದಾರೆ. ತಾರಾಗಣದಲ್ಲಿ ವಿನಾಯ ರಾಜ್, ಅಹಲ್ಯ ಸುರೇಶ್, ಹೊನ್ನವಳ್ಳಿ ಕೃಷ್ಣ, ಶೋಭ ರಾಜ್, ಮನಮೋಹನ್ ರೈ, ಕಿಲ್ಲರ್ ವೆಂಕಟೇಶ್, ಕೆಂಪೆಗೌಡ ನಟಿಸಿದ್ದಾರೆ. ಬೆಂಗಳೂರು, ಶಿವಮೊಗ್ಗ, ಮಂಗಳೂರು, ಉಡುಪಿ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ.
ನಟ ಪ್ರಕಾಶ್ ರಾಜ್ ಅವರ ನಿರ್ದಿಗಂತ 2ನೇ ವರ್ಷದ ವಾರ್ಷಿಕೋತ್ಸವ: ನಟ ಪ್ರಕಾಶ್ ರಾಜ್ ಅವರರ ರಂಗಶಾಲೆ ನಿರ್ದಿಗಂತಕ್ಕೆ ಎರಡನೇ ವರ್ಷದ ವಾರ್ಷಿಕೋತ್ಸವ. ಹೀಗಾಗಿ ಮೈಸೂರಿನ ಕಿರುರಂಗಮಂದಿರದಲ್ಲಿ ನಿರ್ದಿಗಂತದ ಹರ್ಷ, ಎರಡನೇ ವರ್ಷ ಅನ್ನೋ ಕಾರ್ಯಕ್ರಮ ನಡೆದಿದೆ. ಇದೇ ಸಮಯದಲ್ಲಿ ಸಾಹಿತಿ ಜಯಂತ್ ಕಾಯ್ಕಿಣಿ ವಾರ್ಷಿಕ ಸಂಚಿಕೆ ಬಿಡುಗಡೆ ಮಾಡಿದ್ದಾರೆ. ಕಾರ್ಯಕ್ರಮದಲ್ಲಿ ನಟ ಪ್ರಕಾಶ್ ರಾಜ್ ಲೇಖಕ ನಾರಾಯಣಸ್ವಾಮಿ ಸೇರಿದಂತೆ ನಟರು ರಂಗ ನಿರ್ದೇಶಕರು ಭಾಗಿ ಆಗಿದ್ರು. ಪ್ರಕಾಶ್ ರಾಜ್ ಹಾಗೂ ತಂಡದಿಂದ ಸಮತೆಯ ಹಾಡುಗಳು ಹಾಗೂ ಕುಹೂ ನಾಟಕ ಪ್ರದರ್ಶನ ಮಾಡಲಾಯ್ತು.