ಕಣ್ಣಪ್ಪ.. ಈ ಮಲ್ಟಿಸ್ಟಾರರ್ ಮೈಥಾಲಾಜಿಕಲ್ ಸಿನಿಮಾ ಇವತ್ತು ಪ್ಯಾನ್ ಇಂಡಿಯಾ ತೆರೆಗೆ ಬಂದಿದೆ. ವಿಷ್ಣು ಮಂಚು ಕಣ್ಣಪ್ಪನಾಗಿ ಮಿಂಚಿರೋ ಈ ಸಿನಿಮಾದಲ್ಲಿ ಮೋಹನ್ ಲಾಲ್, ಅಕ್ಷಯ್ ಕುಮಾರ್, ಪ್ರಭಾಸ್ ಸೇರಿದಂತೆ ದೊಡ್ಡ ತಾರಾಬಳಗ ಇದೆ. ಆಂಧ್ರ, ತೆಲಂಗಾಣ ಸೇರಿದಂತೆ ಚಿತ್ರಕ್ಕೆ ಎಲ್ಲೆಡೆ ಒಳ್ಳೆ ಓಪನಿಂಗ್ ಸಿಕ್ಕಿದ್ದು, ಚಿತ್ರ ನೋಡಿದ ಫ್ಯಾನ್ಸ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕಣ್ಣಪ್ಪನಾಗಿ ವಿಷ್ಣು ಆಕ್ಟಿಂಗ್, ರುದ್ರನಾಗಿ ಫ್ರಬಾಸ್ ಎಂಟ್ರಿ ಸಿನಿಮಾದ ಹೈಲೈಟ್ ಅಂತಿದ್ದಾರೆ.
ರಜನಿಕಾಂತ್ ಭೇಟಿ ಮಾಡಿದ ಡಾ.ರಾಜ್ ಮೊಮ್ಮಗಳು: ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ ಜೈಲರ್-2 ಸಿನಿಮಾದ ಶೂಟಿಂಗ್ ಮೈಸೂರಿನಲ್ಲಿ ನಡೀತಾ ಇರೋ ವಿಷ್ಯ ಗೊತ್ತೇ ಇದೆ. ಸದ್ಯ ಮೈಸೂರಿನಲ್ಲಿ ಬೀಡು ಬಿಟ್ಟಿರೋ ರಜನಿಕಾಂತ್ರನ್ನ ಡಾ.ರಾಜ್ ಮೊಮ್ಮಗಳಾದ ನಟಿ ಧನ್ಯಾ ರಾಮ್ಕುಮಾರ್ ಭೇಟಿ ಮಾಡಿದ್ದಾರೆ. ತಾಯಿ ಪೂರ್ಣಿಮಾ ಅವರ ಜೊತೆಗೆ ಜೈಲರ್-2 ಸೆಟ್ಗೆ ವಿಸಿಟ್ ಕೊಟ್ಟಿರೋ ಧನ್ಯಾ ತಲೈವಾ ಜೊತೆಗೆ ಫೋಟೋ ಕ್ಲಿಕ್ಕಿಸಿಕೊಂಡು ಧನ್ಯರಾಗಿದ್ದಾರೆ.
ಗೆಲುವಿನ ಖುಷಿಯಲ್ಲಿ ಯುವನಟ ಭರತ್ ಸಾಗರ್: ಯುವನಟ ಭರತ್ ಸಾಗರ್ ತಮ್ಮ ಸಿನಿಮಾಗೆ ಸಿಕ್ತಾ ಇರೋ ರೆಸ್ಪಾನ್ಸ್ನಿಂದ ಖುಷಿಯಲ್ಲಿದ್ದಾರೆ. ರಂಗಭೂಮಿ ಪ್ರತಿಭೆಯಾದ ಭರತ್ ಸಾಗರ್ ಈ ಹಿಂದೆ ಆಟಕ್ಕುಂಟು ಲೆಕ್ಕಕ್ಕಿಲ್ಲ, ಮಾಯಾನಗರಿ ಚಿತ್ರಗಳಲ್ಲಿ ಗಮನ ಸೆಳೆಯೋ ಪಾತ್ರಗಳಲ್ಲಿ ಮಿಂಚಿದ್ರು. ಇದೀಗ ನಾಯಕನಟನಾಗಿ ಅಭಿನಯಿಸಿರೋ ಕಾಲವೇ ಮೋಸಗಾರ ಚಿತ್ರ ಯಶಸ್ವಿ ಪ್ರದರ್ಶನ ಕಾಣ್ತಾ ಇದ್ದು, ಮತ್ತಷ್ಟು ಪ್ರೇಕ್ಷಕರನ್ನ ಸೆಳೆಯೋ ನಿಟ್ಟಿನಲ್ಲಿ ವಿಧ್ಯಾರ್ಥಿಗಳನ್ನ ಭೇಟಿ ಮಾಡ್ತಾ ಸಿನಿಮಾಗೆ ಪ್ರಚಾರ ಮಾಡ್ತಾ ಇದ್ದಾರೆ. ಭರತ್ ಸಾಗರ್ ಮೊದಲ ಬಾರಿ ಹೀರೋ ಆಗಿ ನಟಿಸಿರೋ ಈ ಚಿತ್ರಕ್ಕೆ ಸಂಜಯ್ ಪುರಾಣಿಕ್ ನಿರ್ದೇಶನ ಮಾಡಿದ್ದಾರೆ.
ಶಿವಣ್ಣನ ಮನೆ ಗೇಟ್ ಕಾದಿದ್ದೇಕೆ ಮನು ಫ್ಯಾಮಿಲಿ?: ಇತ್ತೀಚಿಗೆ ಮಡೆನೂರು ಮನು ತಮ್ಮ ತಾಯಿ, ಪತ್ನಿ, ಮಗು ಸಮೇತ ಶಿವಣ್ಣನ ಮನೆ ಗೇಟ್ ಬಳಿ ಕಾಯ್ತಿರೋ ವಿಡಿಯೋ ವೈರಲ್ ಆಗಿತ್ತು. ಈಗ ಇದರ ಬಗ್ಗೆ ಮತ್ತೊಂದು ವಿಡಿಯೋ ಮಾಡಿ ಮನು ಸ್ಪಷ್ಟನೆ ಕೊಟ್ಟಿದ್ದಾನೆ. ಶಿವಣ್ಣ ವಿದೇಶದಕ್ಕೆ ಹೋಗಿದ್ದು ಗೊತ್ತಿಲ್ಲದೇ ಅವರ ಮನೆಗೆ ಹೋಗಿದ್ದೆ, ಅದಕ್ಕೆ ಹಾಗೆ ಕಾಯಬೇಕಾಯ್ತು ಅಂದಿದ್ದಾನೆ. ಶಿವಣ್ಣ ಮನೆಯಲ್ಲಿ ಇದ್ರೆ ಇವನನ್ನ ಕರೆಸಿ ಸನ್ಮಾನ ಮಾಡ್ತಾ ಇದ್ರಾ ಅಂತ ಫ್ಯಾನ್ಸ್ ಕ್ಲಾಸ್ ತೆಗೆದುಕೊಳ್ತಾ ಇದ್ದಾರೆ. ಸುದ್ದಿಯಲ್ಲಿರೋದಕ್ಕೆ ಎಂತೆಂಥಾ ಗಿಮಿಕ್ ಮಾಡ್ತಿಯಾ ಅಂತ ರಾಂಗ್ ಆಗಿದ್ದಾರೆ.