Suvarna Special: ಒಗ್ಗಟ್ಟಾ? ಬಿಕ್ಕಟ್ಟಾ? ಸುಭದ್ರ ಸರ್ಕಾರ.. ಸಿಎಂ ಸಿಂಹಾಸನ.. ಸಿದ್ದು ಸೈಲೆಂಟ್ ಸೀಕ್ರೆಟ್! | Cm Siddaramaiah Strategy Gives New Turn To Congress Politics Gvd

Suvarna Special: ಒಗ್ಗಟ್ಟಾ? ಬಿಕ್ಕಟ್ಟಾ? ಸುಭದ್ರ ಸರ್ಕಾರ.. ಸಿಎಂ ಸಿಂಹಾಸನ.. ಸಿದ್ದು ಸೈಲೆಂಟ್ ಸೀಕ್ರೆಟ್! | Cm Siddaramaiah Strategy Gives New Turn To Congress Politics Gvd


ಕೈ ಜೋಡಿಸಿ ‘ಕೈ’ ಕದನದಲ್ಲಿ ಟ್ವಿಸ್ಟ್ ಕೊಟ್ಟ ಟಗರು..! ಅಂತರ್ಯುದ್ಧದ ಬೆಂಕಿ ಮಧ್ಯೆ ಬಂಡೆ ಬಲದ ಒಗ್ಗಟ್ಟಿನ ಮಂತ್ರ..! ಸುಭದ್ರ ಸರ್ಕಾರ.. ಸಿಎಂ ಸಿಂಹಾಸನ.. ಸಿದ್ದು ಸೈಲೆಂಟ್ ಸೀಕ್ರೆಟ್..! ಸೆಪ್ಟಂಬರ್ ಕ್ರಾಂತಿ.. ನವೆಂಬರ್ ಗಡುವು.. ಟೈಂ ಬಾಂಬ್ ಟೆನ್ಷನ್..! ಇದುವೇ ಇವತ್ತಿನ ಸುವರ್ಣ ಸ್ಪೆಷಲ್ ಒಗ್ಗಟ್ಟಾ..? ಬಿಕ್ಕಟ್ಟಾ..? ಇಷ್ಟು ದಿನ ಕಾಂಗ್ರೆಸ್​ನಲ್ಲಿ ಇದ್ದದ್ದು ನವೆಂಬರ್ ಟೈಂ ಬಾಂಬ್​.. ಆದ್ರೆ ಮೊನ್ನೆ  ಮೊನ್ನೆಯಷ್ಟೆ ಹೊಸದಾಗಿ ಸೆಪ್ಟಂಬರ್​ ಟೈಂ ಬಾಂಬ್​​ ಸುಳಿವು ಕೊಟ್ಟಿದ್ರು ಕೆ.ಎನ್.ರಾಜಣ್ಣ..  ಕೈ ಸಾಮ್ರಾಜದಲ್ಲಿ ಏನೋ ದೊಡ್ಡದಾಗಿ ಸಂಭವಿಸುತ್ತೆ.. ಸಿದ್ದು ಪಟ್ಟ ಕಳೆದುಕೊಳ್ತಾರಾ..? ಡಿಕೆ ಪಟ್ಟಾಭಿಷೇಕವೇನಾದ್ರೂ ಆಗುತ್ತಾ ಅನ್ನೋ ಚರ್ಚೆ ಶುರುವಾಗ್ತಾ ಇದ್ಹಾಗೆ, ಕದನ ಕಣದಲ್ಲಿ ಹೊಸ ಟ್ವಿಸ್ಟ್ ಕೊಟ್ಟಿದ್ದಾರೆ ಸಿದ್ದರಾಮಯ್ಯ. ಹಾಗಿದ್ರೆ ಆ ಟ್ವಿಸ್ಟ್ ಏನು ಅಂತ ನೋಡೋಕು ಮೊದಲು, ಅದ್ರ ಹಿಂದಿನ ಫ್ಲ್ಯಾಶ್ ಬ್ಯಾಕ್​ನ ನೋಡ್ಲೇಬೇಕು.

ಸಿಎಂ ಸಿಂಹಾಸನದ ವಿಚಾರವಾಗಿ ಏನೇ ಸಂಘರ್ಷ, ಜಟಾಪಟಿಗಳು ನಡೆದ್ರೂ ಡಿಕೆಗೆ ಅದೊಂದು ನಂಬಿಕೆ ಇದೆ.. ಹಾಗಿದ್ರೆ, ಆ ನಂಬಿಕೆ ಏನು.? ಸಿಎಂ ಪಟ್ಟದ ಮೇಲೆ ಕೂರ್ಬೇಕು ಅನ್ನೋದು ಡಿಕೆ ಕನಸು.. ಆ ಕನಸು ನನಸಾಗಿಸಿಕೊಳ್ಳೋಕೆ ಡಿಕೆ ಪ್ರಯತ್ನ ಶುರುವಾಗಿದೆ.. ಈ ಪ್ರಯತ್ನದಲ್ಲಿ ಡಿಕೆ ಯಾರನ್ನ ನಂಬಿದ್ದಾರೋ ಇಲ್ವೋ ಗೊತ್ತಿಲ್ಲಾ. ಅದ್ರೆ ಅವರು ಮಾತ್ರ ತಮ್ಮ ಕೈ ಬಿಡಲ್ಲ ಅಂತ ಬಲವಾಗಿ ನಂಬಿದ್ದಾರೆ. ಡಿಕೆಶಿ ಸಿಎಂ ಪಟ್ಟಕ್ಕೆ ಪಟ್ಟು ಹಾಕ್ತಿದ್ದಾರೆ ಡಿಕೆ. ಆ ಪಟ್ಟ ಇರೋದು ಸಿದ್ದು ಬಳಿ. ಹೀಗಿದ್ರೂ ಅದನ್ನ ಪಡೆದುಕೊಳ್ಳೋಕೆ ಸಿದ್ದು ಸಹಮತ ಡಿಕೆಗೆ  ಬೇಕೇ ಬೇಕು. ಮುಖ್ಯಮಂತ್ರಿ ಆಗ್ಬೇಕು ಅನ್ನೋ ಆಸೆ ಇಟ್ಕೊಂಡಿರೋ  ಡಿ.ಕೆ.ಶಿವಕುಮಾರ್ ಅವರದ್ದು ಎಚ್ಚರಿಕೆಯ ಹೆಜ್ಜೆ.. ಚಾಣಾಕ್ಷ್ಯ ನಡೆ. ಅದಕ್ಕೆ ಕಾರಣ, ಸಿದ್ದು ಸಹಮತದಲ್ಲಿಯೇ ಪಟ್ಟ ಪಡೆಯೋ ಸವಾಲು ಡಿಕೆ ಮುಂದಿರೋದು.



Source link

Leave a Reply

Your email address will not be published. Required fields are marked *