
ನಟಿಯರು ಎಂದರೆ ಹೀಗೆಯೇ ಇರಬೇಕು ಎಂಬ ಸಿದ್ಧಾಂತವಿದೆ. ತೆಳ್ಳಗೆ ಬೆಳ್ಳಗೆ ಇರಬೇಕು, ಜೀರೋ ಸೈಜ್ ಆಗಿರಬೇಕು. ನೋಡಲು ಸುಂದರವಾಗಿರಬೇಕು ಹೀಗೆ ಏನೇನೋ ಕಲ್ಪನೆಗಳು ಇರುತ್ತವೆ. ಇದೇ ಕಾರಣಕ್ಕೆ ಎಷ್ಟೋ ಮಂದಿ ಯುವತಿಯರು ಸಾಕಷ್ಟು ಪ್ರತಿಭೆ ಹೊಂದಿದ್ದರೂ ಬಣ್ಣದ ಲೋಕಕ್ಕೆ ಆಯ್ಕೆಯಾಗುವುದು ಕಷ್ಟ. ಅಲ್ಲೊಂದು ಇಲ್ಲೊಂದು ಪ್ರಕರಣಗಳನ್ನು ಹೊರತುಪಡಿಸಿದರೆ, ಸಿನಿಮಾ ಆಗಿರಲಿ ಇಲ್ಲವೇ ಧಾರಾವಾಹಿ (Serial) ಪ್ರಪಂಚವೇ ಆಗಿರಲಿ, ಬೆಳ್ಳಿ ತೆರೆ, ಕಿರುತೆರೆ ಎಲ್ಲಾ ಕಡೆಗಳಲ್ಲಿ ಇದೇ ರೀತಿ ಇದೆ.