ಗೋವಾದ ಬೀಚ್‌ವೊಂದರಲ್ಲಿ ವಿಷಕಾರಿ ಸಮುದ್ರ ಹಾವೊಂದು ಪತ್ತೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಪಣಜಿ: ಗೋವಾದ ಬೀಚೊಂದರಲ್ಲಿ(Goa Beach) ಅತ್ಯಂತ ವಿಷಕಾರಿಯಾದ ಸಮುದ್ರ ಹಾವೊಂದು (Sea Snake) ಪತ್ತೆಯಾಗಿದ್ದು, ಈ ವೀಡಿಯೋ ಅನೇಕರನ್ನು ಭಯಭೀತಗೊಳಿಸಿದೆ. ಜೀಬ್ರಾದಂತೆ ಕಪ್ಪು ಹಾಗೂ ಬಿಳಿ ಪಟ್ಟಿ ಇರುವ ಹಾವೊಂದು ಸಮುದ್ರ ತೀರದಲ್ಲಿ ಮರಳಿನಲ್ಲಿ ಹೊರಳಾಡುತ್ತಿದ್ದು, ಅದರ ದೇಹದ ಮಧ್ಯಭಾಗದಲ್ಲಿ ಏನು ಸಿಲುಕಿದಂತೆ ಕಾಣುತ್ತಿದ್ದು, ಅದು ಅಲ್ಲಿಂದ ಹೋಗಲು ಕಷ್ಟಪಡುವಂತೆ ಕಾಣುತ್ತಿದೆ. ಇದನ್ನು ಯಾರೋ ಪ್ರವಾಸಿಗರು ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದು ಸಾಮಾಜಿಕ ಜಾಲತಾಣದಲ್ಲಿ(Social Media) ಪೋಸ್ಟ್ ಮಾಡಿದ್ದಾರೆ.
ಗೋವಾ ಬೀಚ್‌ನಲ್ಲಿ ಪತ್ತೆಯಾದ ಸಮುದ್ರ ಹಾವು
ಸಾಮಾಜಿಕ ಜಾಲತಾಣವಾದ ರೆಡಿಟ್‌ನಲ್ಲಿ AdDazzling4067 ಎಂಬ ಇನ್ಸ್ಟಾಪೇಜ್‌ನಿಂದ ಈ ವೀಡಿಯೋ ಪೋಸ್ಟ್ ಮಾಡಲಾಗಿದೆ. ವೀಡಿಯೋ ನೋಡಿದ ಅನೇಕರು ಹೊಸದೊಂದು ಭಯ ಶುರುವಾಯ್ತು ಎಂದು ಕಾಮೆಂಟ್ ಮಾಡಿದ್ದಾರೆ. ವೀಡಿಯೋದಲ್ಲಿ ಸಣ್ಣಗಾತ್ರದ ದೇಹದ ಮೇಲೆ ಬಿಳಿ ಕಪ್ಪು ಪಟ್ಟಿ ಇರುವ ಹಾವೊಂದು ಏನನ್ನೋ ನುಂಗಿದ್ದು, ಚಲಿಸಲು ಕಷ್ಟಪಡುತ್ತಿದೆ. ಬಹುಶಃ ಅದು ಮೀನನ್ನು ನುಂಗಿದ್ದಿರಬಹುದು. ಇದನ್ನು ನೋಡಿದ ಅನೇಕರು ಇದು ಅತ್ಯಂತ ವಿಷಕಾರಿಯಾದ ಸಮುದ್ರ ಮೀನು ಎಂದು ಕಾಮೆಂಟ್ ಮಾಡಿದ್ದಾರೆ. ಅನೇಕರು ಇದನ್ನು ಮೊದಲ ಬಾರಿ ನೋಡಿದ್ದಾಗಿ ಹೇಳಿದ್ದು, ಇನ್ನು ಬೀಚ್‌ಗೆ ಹೋಗುವುದಕ್ಕೂ ಭಯಪಡಬೇಕು ಎಂದು ಕಾಮೆಂಟ್ ಮಾಡಿದ್ದಾರೆ. ಆದರೆ ಇದು ನಿಜವಾಗಿಯೂ ಗೋವಾ ಬೀಚ್‌ನಲ್ಲಿ ಪತ್ತೆಯಾಗಿದೆ ಎಂಬುದಕ್ಕೆ ಯಾವುದೇ ಸ್ಪಷ್ಟತೆ ಇಲ್ಲ, ಆದರೆ ಗೋವಾ ಬೀಚ್‌ನಲ್ಲಿ ಪತ್ತೆಯಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅನೇಕರು ಪ್ರತಿಕ್ರಿಯಿಸಿದ್ದಾರೆ.
ವೀಡಿಯೋ ವೈರಲ್ : ನೆಟ್ಟಿಗರಿಂದ ಹಲವು ಕಾಮೆಂಟ್:
ಇದು ಸಮುದ್ರ ಹಾವು… ಬಹುಶಃ ಮೀನನ್ನು ತಿಂದಿರಬಹುದು. ತುಂಬಾ ವಿಷಕಾರಿ ಹಾವು ಇದು ಎಂದು ಒಬ್ಬ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ. ಇದು ಬ್ಯಾಂಡೆಡ್ ಸೀ ಕ್ರೈಟ್ ನೋಡುವುದಕ್ಕೆ ತುಂಬಾ ಕೂಲಾಗಿದೆ. ಆದರೆ ಅವು ತುಂಬಾ ವಿಷಕಾರಿ ಆದರೆ ಸಾಮಾನ್ಯವಾಗಿ ಇವು ಮನುಷ್ಯರನ್ನು ಕಚ್ಚುವುದಿಲ್ಲ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಇದು ನೋಡುವುದಕ್ಕೆ ಭಯಾನಕವಾಗಿದೆ ಎಂದು ಮತ್ತೆ ಕೆಲವರು ಕಾಮೆಂಟ್ ಮಾಡಿದ್ದಾರೆ. ಈ ಹಾವು ತನ್ನ ಬೇಟೆಯನ್ನು ನುಂಗಿದೆ ಮತ್ತು ಅದನ್ನು ಜೀರ್ಣಾಂಗವ್ಯೂಹದ ಉದ್ದಕ್ಕೂ ಹಾದು ಹೋಗುತ್ತಿದೆ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ. ಇದನ್ನು ಕನ್ನಡದಲ್ಲಿ ಕಟ್ಟಿಗೆ ಹಾವು ಎಂದು ಕರೆಯಲಾಗುತ್ತದೆ. ತುಂಬಾ ವಿಷಕಾರಿ ಸಮುದ್ರ ಹಾವು. ಅದನ್ನು ಬಿಟ್ಟು ನಿಮ್ಮ ಸ್ವಂತ ವ್ಯವಹಾರವನ್ನು ನೋಡಿಕೊಳ್ಳುವುದು ಉತ್ತಮ ಎಂದು ಮತ್ತೊಬ್ಬರು ಸಲಹೆ ನೀಡಿದ್ದಾರೆ.
ಬ್ರೂವ್, ಎಚ್ಚರಿಕೆಯಿಂದಿರಿ, ಸಮುದ್ರ ಹಾವುಗಳು ತುಂಬಾ ವಿಷಕಾರಿ, ಈ ಹಾವು ತುಂಬಾ ಆಸಕ್ತಿದಾಯಕವಾಗಿದೆ. ಈ ಹಾವಿನ ಫೋಟೋ ಸೆರೆ ಹಿಡಿದಿದ್ದಕ್ಕೆ ಧನ್ಯವಾದಗಳು. ಸಮುದ್ರದಲ್ಲಿ ಯಾವಾಗಲೂ ಈಜುತ್ತಿರುವ ವ್ಯಕ್ತಿಗಳಿಗೆ ಏನಾಗುತ್ತದೆ ಎಂದು ಕೇಳುತ್ತಾರೆ. ಒಂದು ವೇಳೆ ಇವು ಕಚ್ಚಿದರು ಅವರಿಗೆ ತಿಳಿಯುತ್ತದೆಯೇ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.