Headlines

ಅಮಿತಾಭ್ ಸಿನಿಮಾದಿಂದ ಹೊರನಡೆದ ದೀಪಿಕಾ ಪಡುಕೋಣೆ: ನಟನೆ ಬದಲು ನಿರ್ಮಾಣಕ್ಕಿಳಿದ ಸ್ಟಾರ್ ನಟಿ

ಅಮಿತಾಭ್ ಸಿನಿಮಾದಿಂದ ಹೊರನಡೆದ ದೀಪಿಕಾ ಪಡುಕೋಣೆ: ನಟನೆ ಬದಲು ನಿರ್ಮಾಣಕ್ಕಿಳಿದ ಸ್ಟಾರ್ ನಟಿ

ಅಮಿತಾಭ್ ಸಿನಿಮಾದಿಂದ ಹೊರನಡೆದ ದೀಪಿಕಾ ಪಡುಕೋಣೆ: ನಟನೆ ಬದಲು ನಿರ್ಮಾಣಕ್ಕಿಳಿದ ಸ್ಟಾರ್ ನಟಿ

ಅಮಿತಾಭ್ ಬಚ್ಚನ್ ನಟನೆಯ ‘ದಿ ಇಂಟರ್ನ್‌’ ಸಿನಿಮಾದಿಂದ ದೀಪಿಕಾ ಹೊರಬಂದಿದ್ದಾರೆ. ಆದರೆ ಅವರು ಈ ಸಿನಿಮಾದಲ್ಲಿ ನಟಿಸುವುದರ ಬದಲು ನಿರ್ಮಾಣ ಮಾಡಲು ಮುಂದಾಗಿದ್ದಾರೆ ಎನ್ನಲಾಗಿದೆ.

ಬಹು ಬೇಡಿಕೆಯ ಸ್ಟಾರ್‌ ನಟಿ ದೀಪಿಕಾ ಪಡುಕೋಣೆ ಅಮಿತಾಭ್ ಬಚ್ಚನ್ ನಟನೆಯ ‘ದಿ ಇಂಟರ್ನ್‌’ ಸಿನಿಮಾದಿಂದ ಹೊರಬಂದಿದ್ದಾರೆ. ಆದರೆ ಅವರು ಈ ಸಿನಿಮಾದಲ್ಲಿ ನಟಿಸುವುದರ ಬದಲು ನಿರ್ಮಾಣ ಮಾಡಲು ಮುಂದಾಗಿದ್ದಾರೆ ಎನ್ನಲಾಗಿದೆ.

2021ರಲ್ಲೇ ಹಾಲಿವುಡ್‌ನ ಸೂಪರ್‌ ಹಿಟ್‌ ಸಿನಿಮಾ ‘ದಿ ಇಂಟರ್ನ್‌’ ನ ಹಿಂದಿ ರಿಮೇಕ್ ಘೋಷಣೆಯಾಗಿತ್ತು. ಅದರೆ ಅನೇಕ ಕಾರಣಗಳಿಗೆ ಈ ಪ್ರಾಜೆಕ್ಟ್ ಮುಂದಕ್ಕೆ ಹೋಗಿರಲಿಲ್ಲ. ಇದೀಗ ನಿರ್ಮಾಣದ ಹೊಣೆಗಾರಿಕೆಯನ್ನು ದೀಪಿಕಾ ಹೆಗಲಿಗೇರಿಸಿಕೊಂಡಿದ್ದು, ಹೊಸ ನಾಯಕಿಯ ಶೋಧದಲ್ಲಿ ಚಿತ್ರತಂಡವಿದೆ.

ಇನ್ನು ದೀಪಿಕಾ ಮಗುವಿನ ಆರೈಕೆಯ ನಡುವೆಯೇ, ದೀಪಿಕಾ ಪಡುಕೋಣೆ ಮತ್ತೆ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಶಾರುಖ್ ಖಾನ್ ಜೊತೆಗೆ ‘ಕಿಂಗ್’ ಸಿನಿಮಾನಲ್ಲಿ ನಾಯಕಿಯಾಗಿ ದೀಪಿಕಾ ನಟಿಸುತ್ತಿದ್ದಾರೆ.

ಮಾತ್ರವಲ್ಲದೇ ಅಟ್ಲಿ ನಿರ್ದೇಶನದ ಮತ್ತೊಂದು ಸಿನಿಮಾಕ್ಕೂ ಇವರೇ ನಾಯಕಿ. ಅದರಲ್ಲಿ ನಟ ಅಲ್ಲು ಅರ್ಜುನ್ ನಾಯಕನಾಗಿ ನಟಿಸುತ್ತಿದ್ದಾರೆ. ಅದಾದ ಬಳಿಕ ‘ಕಲ್ಕಿ 2898 ಎಡಿ’ ಸಿನಿಮಾದ ಎರಡನೇ ಭಾಗದಲ್ಲಿ ದೀಪಿಕಾ ಪಡುಕೋಣೆ ನಟಿಸಲಿದ್ದಾರೆ.

ಇತ್ತೀಚೆಗೆ, ದೀಪಿಕಾ ಪಡುಕೋಣೆ ಹಾಲಿವುಡ್ ‘ವಾಕ್ ಆಫ್ ಫೇಮ್ ಸ್ಟಾರ್ 2026’ ಪಟ್ಟಿಯಲ್ಲಿ ಸ್ಥಾನ ಪಡೆದ ಮೊದಲ ಭಾರತೀಯ ನಟಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

Source link

Leave a Reply

Your email address will not be published. Required fields are marked *