Headlines

Dr G Parameshwar: ಹಣ ಕೊಟ್ಟರೆ ಮನೆ ಆರೋಪ; ದೂರು ಕೊಟ್ರೆ ಕ್ರಮ, ಇಡೀ ವಸತಿ ಇಲಾಖೆಯನ್ನೇ ದೂಷಣೆ ಮಾಡೋದು ಸರಿ ಅಲ್ಲ; ಪರಮೇಶ್ವರ್ | Karnataka Hm Parameshwar Reacts About Union Minister Pralhad Joshi Statent

Dr G Parameshwar: ಹಣ ಕೊಟ್ಟರೆ ಮನೆ ಆರೋಪ; ದೂರು ಕೊಟ್ರೆ ಕ್ರಮ, ಇಡೀ ವಸತಿ ಇಲಾಖೆಯನ್ನೇ ದೂಷಣೆ ಮಾಡೋದು ಸರಿ ಅಲ್ಲ; ಪರಮೇಶ್ವರ್ | Karnataka Hm Parameshwar Reacts About Union Minister Pralhad Joshi Statent



ಶಾಸಕರ ಖರೀದಿ ಆರೋಪವನ್ನು ಗೃಹ ಸಚಿವ ಪರಮೇಶ್ವರ ತಳ್ಳಿಹಾಕಿದ್ದಾರೆ. ಯಾವುದೇ ಖರೀದಿ ನಡೆದಿಲ್ಲ, ಹಾಗೇನಾದರೂ ಆದರೆ ಹೈಕಮಾಂಡ್‌ ಗಮನಿಸುತ್ತದೆ ಎಂದಿದ್ದಾರೆ. ಬಿ.ಆರ್‌. ಪಾಟೀಲ್‌ ಆಡಿಯೋದಿಂದ ಸರ್ಕಾರಕ್ಕೆ ಮುಜುಗರ ಆಗಿಲ್ಲ, ನಿರ್ದಿಷ್ಟ ಆರೋಪಗಳಿದ್ದರೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

ಬಾಗಲಕೋಟೆ (ಜೂ.24): ನಮ್ಮಲ್ಲಿ ಯಾವುದೇ ಖರೀದಿನೂ ನಡೆಯುದಿಲ್ಲ.ಅದರಲ್ಲಿ ನಮ್ಮದು ಯಾವುದೂ ಇಲ್ಲ. ಒಂದು ವೇಳೆ ಹಾಗೇನಾದರೂ ಆದರೆ ನಮ್ಮ ಹೈಕಮಾಂಡ್‌ನವರು ಗಮನಿಸುತ್ತಾರೆ. ಖರೀದಿ ಮಾಡಿದ್ದವರು ಯಾರು, ಮುಂಬೈಗೆ ಕರೆದುಕೊಂಡು ಹೋಗಿ ಖರೀದಿ ಮಾಡಿಕೊಂಡು ಬಂದವರು ಯಾರು ಎಂಬುವುದು ಎಲ್ಲರಿಗೂ ಗೊತ್ತಿದೆ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ ಹೇಳಿದರು.

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು. ರಾಜ್ಯದಲ್ಲಿ ಸಿಎಂ ಸ್ಥಾನದ ಪೈಪೋಟಿ ಹಿನ್ನೆಲೆಯಲ್ಲಿ ಕೈ ಶಾಸಕರ ಖರೀದಿ ನಡೆಯುತ್ತಿದೆ ಎಂಬ ಕೇಂದ್ರ ಸಚಿವ ಪ್ರಹ್ಲಾದ ಜೋಷಿ ಹೇಳಿಕೆಗೆ ಈ ರೀತಿ ಪ್ರತಿಕ್ರಿಯೆ ನೀಡಿದರು.

ದೂರು ಕೊಟ್ಟರೆ ಎಫ್ಐಆರ್ ಮಾಡಿ, ತನಿಖೆ:

ಶಾಸಕರಾದ ಬಿ.ಆರ್.ಪಾಟೀಲ್ ಅವರ ಆಡಿಯೋದಿಂದ ಸರ್ಕಾರಕ್ಕೆ ಮುಜುಗರ ಆಗಿರುವ ಕುರಿತು ಮಾತನಾಡಿ, ಇಡೀ ವಸತಿ ಇಲಾಖೆಯನ್ನೇ ದೂಷಣೆ ಮಾಡೋದು ಸರಿ ಅಲ್ಲ. ಯಾವ ಸ್ಪೆಷಿಫಿಕೇಶನ್‌ನಲ್ಲಿ ಭ್ರಷ್ಟಾಚಾರ ಆಗಿದೆ ಎಂದು ಹೇಳಿದರೆ ಕ್ರಮ ಕೈಗೊಳ್ಳಬಹುದು. ಒಂದು ವೇಳೆ ಪೊಲೀಸ್ ಕಂಪ್ಲೆಂಟ್ ಕೊಟ್ಟರೂ ಅದನ್ನು ಎಫ್ಐಆರ್ ಮಾಡಿ ತನಿಖೆ ಮಾಡುತ್ತೇವೆ. ಇಡೀ ಸರ್ಕಾರವನ್ನೇ ಆ ರೀತಿ ಹೇಳೋದು ತಪ್ಪು, ಸ್ವಪಕ್ಷದವರಾಗಿರಲಿ, ವಿರೋಧ ಪಕ್ಷದವರಾಗಿರಲಿ ನಾವು ಗಂಭೀರವಾಗಿ ತೆಗೆದುಕೊಳ್ಳುತ್ತೇವೆ. ಆದರೆ ಸ್ಷೆಷಿಫಿಕೇಶನ್ ಬದಲಾಗಿ ಇಡೀ ಸರ್ಕಾರವನ್ನು ದೂಷಣೆ ಮಾಡೋದು ಸರಿಯಲ್ಲ ಎಂದು ಅಭಿಪ್ರಾಯಪಟ್ಟರು.

ಬಿ.ಆರ್.ಪಾಟೀಲ್ ಹೇಳಿಕೆ ಇಟ್ಟುಕೊಂಡು ಶಾಸಕ ರಾಜು ಕಾಗೆ ರಾಜೀನಾಮೆ ಕೊಡ್ತಿನಿ ಎಂದಿರುವ ವಿಚಾರ ಪ್ರಸ್ತಾಪಿಸಿದ ಅವರು, ಅದನ್ನ ವೆರಿಫೈ ಮಾಡುತ್ತೇವೆ. ಯಾವ ಸಂದರ್ಭದಲ್ಲಿ ₹13 ಕೋಟಿ ಕಾಮಗಾರಿ ಇನ್ನೂ ಮಂಜೂರಾಗಿಲ್ಲ ಎಂದು ಹೇಳಿದ್ದಾರೆ, ಅದನ್ನು ನೋಡಿ ಶೀಘ್ರದಲ್ಲೇ ಮಾಡಿಕೊಡುತ್ತೇವೆ. ಎಲ್ಲದಕ್ಕೂ ಸ್ವಲ್ಪ ಸಮಯ ಹಿಡಿಯುತ್ತದೆ. ಯಾವುದೇ ಕಾಮಗಾರಿಗೆ ಎಷ್ಟಿಮೇಟ್, ಡಿಪಿಆರ್ ಆಗಬೇಕು. ಆರ್ಥಿಕ ಇಲಾಖೆಯವರು ಕ್ಲಿಯರೆನ್ಸ್‌ ಕೊಟ್ಟರೆ ಆಗುತ್ತದೆ ಎಂದು ತಿಳಿಸಿದರು.

ಸಂಪುಟದಲ್ಲಿ ಚರ್ಚೆ ಮಾಡಿ ತೀರ್ಮಾನ: ಗಣಿ ಹಗರಣ ವಿಚಾರಕ್ಕೆ ಸಚಿವ ಎಚ್‌.ಕೆ.ಪಾಟೀಲ ಅವರು ಸರ್ಕಾರಕ್ಕೆ ಪತ್ರ ಬರೆದ ಕುರಿತು ಪ್ರತಿಕ್ರಿಯಿಸಿ, ರಾಜ್ಯದಲ್ಲಾದ ಗಣಿ ಹಗರಣದಲ್ಲಿ ₹1.50 ಲಕ್ಷ ಕೋಟಿ ಕಬ್ಬಿಣ ಅದಿರು ರಫ್ತಾಗಿದೆ. ಇದರಿಂದ ಅನೇಕ ಆಸ್ತಿಗಳನ್ನು ಮಾಡಿದ್ದಾರೆ. ಆ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಸಚಿವ ಸಂಪುಟದಲ್ಲಿ ಚರ್ಚೆ ಮಾಡಿ ತೀರ್ಮಾನಿಸುತ್ತೇವೆ. ಅವರು ಬರೆದಿರೋದು ಕೇವಲ ನಮ್ಮ ಸರ್ಕಾರದಲ್ಲಿ ಅಂತಲ್ಲ. ಹಿಂದಿನ ಸರ್ಕಾರದಲ್ಲಿ ಹೀಗೆ ಮುಂದುವರಿದುಕೊಂಡು ಬಂದಿದೆ. ನಮ್ಮ ಸರ್ಕಾರದಲ್ಲಿರುವಾಗ ನಾವು ಒಂದು ಕ್ರಮ ತೆಗೆದುಕೊಳ್ಳೋಣ ಅಂತ ಬರೆದಿದ್ದಾರೆ ಎಂದರು.



Source link

Leave a Reply

Your email address will not be published. Required fields are marked *