ಖಗೋಳದಲ್ಲಿ ಕ್ರಮಬದ್ಧವಾದ ಚಲನೆಯಿಂದ ಕೆಲವು ಯೋಗಗಳು . ಯೋಗಗಳು ಯೋಗಗಳು ಜನ್ಮಕಾಲದಲ್ಲಿಯೂ ಅಥವಾ ವರ್ತಮಾನ ಕಾಲದಲ್ಲಿಯೂ ಅದು. ಹರ್ಷ ಕುಂಡಲಿಯಲ್ಲಿ ಉಂಟಾದಾಗ ಪರಿಣಾಮಗಳು. ಈ ಹೇಗಾಗುತ್ತದೆ, ಏನಾಗುತ್ತದೆ ಎನ್ನುವುದನ್ನು.
ಆರನೇ ರಾಶಿಯಲ್ಲಿ, ಶನಿ, ರವಿ ಇದ್ದು, ಈ ಮೂರೂ ಗ್ರಹಗಳು ಯಾವುದಾದರೂ ಒಂದು ನೋಡಿದರೆ ಹರ್ಷ ಯೋಗ. ಆರನೇ ರಾಶಿಯ ಅಧಿಪತಿ, ಅಷ್ಟಮ, ದ್ವಾದಶ ಮೊದಲಾದ ದುಃಸ್ಥಾನದಲ್ಲಿ ಈ ಯೋಗ ಸಂಭವಿಸುವುದು ಸಂಭವಿಸುವುದು.
ಇದನ್ನೂ
ಸುಖಭೋಗಭಾಗ್ಯ:
ಈ ಯೋಗದಲ್ಲಿ ಅನೇಕ ರೀತಿ ಸುಖಭೋಗಗಳು ನಿಮ್ಮದಾಗಲಿದೆ. ಆರೋಗ್ಯ ಸರಿಯಾಗಲಿದೆ. ಶತ್ರುಗಳ ಕಾಟವೂ ಕಡಿಮೆಯಾಗುವುದು. ಯಾವುದೇ ಪೀಡೆ ಇಲ್ಲವಾಗಿದ್ದು ಸುಖದಿಂದ ಕಳೆಯುವರು. ಕೆಟ್ಟಸ್ಥಾನವಾದರೂ ಒಳ್ಳೆಯ ಫಲವನ್ನೇ ನೀಡುವರು.
ದೃಢಗಾತ್ರ:
ಈ ಯೋಗದವರ ಶರೀರ ದೃಢವಾಗಿರುವುದು. ಹೊರಗಿನಿಂದ ದಷ್ಟಪುಷ್ಟವೂ ರೋಗವೂ ದೇಹದೊಳಗೆ ಬಾಧಿಸದೇ ಸ್ತಸ್ಥವಾಗಿರುವರು.
ಪಾಪಭೀತಿ:
ಆರೆನೇ ಸ್ಥಾನದಲ್ಲಿ ಪಾಪ ಗ್ರಹರಿದ್ದರೆ ಪಾಪ ಕಾರ್ಯಕ್ಕೆ ಭೀತಿಯುಂಟಾಗಲಿದೆ. ಪಾಪಾಸ್ಥಾನದಲ್ಲಿ ಪಾಪಗ್ರಹರಿದ್ದರೆ, ಪಾಪದ ಕಾರ್ಯಕ್ಕೆ ಅವಕಾಶ ಕೊಡಲಾರದು.
ಜನವಲ್ಲಭ:
ಕೀರ್ತಿವಂತರಾಗಿದ್ದು ಎಲ್ಲ ಜನರಿಗೂ ಪ್ರಿಯರಾಗಿ, ಗೌರವಕ್ಕೂ ಪಾತ್ರರಾಗುವರು. ಜನರ ಬಳಕೆಯನ್ನು ಹೆಚ್ಚು ಮಾಡಿಕೊಳ್ಳುವರು. ಜನಸೇವೆಯಲ್ಲಿ ಹೆಚ್ಚು ಕಾಲ ಕಳೆಯುವರು.
ಧನಲಾಭ:
ಧನಲಾಭವಿಲ್ಲದೇ ಇರುವಲ್ಲಿ ಯಾವುದಾದರೂ ಒಂದು ರೀತಿಯಲ್ಲಿ ಲಾಭವಾಗಲಿದೆ. ಶತ್ರುವಿನಿಂದಲೂ ದೈಹಿಕ ಶ್ರಮದಿಂದಲೂ ಲಾಭವಾಗಲಿದೆ. ಮಿತ್ರರ ಲಾಭವೂ ಆಗಲಿದೆ. ಕೀರ್ತಿಯೂ ಸಿಗುವುದು.
ಸುತಪ್ರಾಪ್ತಿ:
ಈ ಯೋಗದವರು ವಿವಾಹದ ಅನಂತರ ಸಂತಾನವನ್ನು ಬೇಗ ಪಡೆಯುವರು ಮತ್ತು ಹೆಚ್ಚು ಸಂತಾನ ಪ್ರಾಪ್ತಿಯು ಈ ಯೋಗದಿಂದ ಸಿಗುವುದು.
ಯಾರಿಗೆಲ್ಲ ಯೋಗ?
ಸದ್ಯದ ಗ್ರಹಸ್ಥಿತಿತಿಯಲ್ಲಿ ಯಾರಿಗೆ ಈ ಯೋಗವಿದೆ ಎಂದು ನೋಡುವುದಾದರೆ, ಮೇಷ, ವೃಷಭ, ಮಿಥುನ, ಕರ್ಕಾಟಕ, ಸಿಂಹ, ಕನ್ಯಾ, ತುಲಾ, ಧನು, ಮೀನ ಇವಿಷ್ಟೂ ರಾಶಿಗಳಿಗೆ ಇರಲಿದ್ದು, ಪ್ರಮಾಣ ಭೇದದಿಂದ ಪರಿಣಾಮವೂ ವ್ಯತ್ಯಾಸವಾಗಲಿದೆ. ದುಸ್ಥಾನದಲ್ಲಿ ಇದ್ದು, ದುಷ್ಟಗ್ರಹರಿಂದ ನೋಡಲ್ಪಟ್ಟರೆ ಪೂರ್ಣ ಪ್ರಮಾಣದ ಯೋಗವಾಗಲಿದೆ.
ಇದು ಆಗಾಗ ಸಂಭವಿಸುವ ಕಾರಣ ವ್ಯಕ್ತಿಯ ಜೀವನದಲ್ಲಿ ಆಗಬೇಕಾದ ಕೆಲವಾರು ಅಂಶಗಳು ಆಗುವುದು. ಯೋಗ ಬಂದಾಗ ಪಡೆಯಬೇಕಾದುದನ್ನು ಪಡೆಯಬಹುದು ಅಥವಾ ನಿರೀಕ್ಷೆ ಇಲ್ಲದಿದ್ದರೂ ಅದಾಗಿಯೇ ಕೊಟ್ಟು ಹೋಗುತ್ತದೆ. ಅದೃಷ್ಟ ಎನ್ನುವುದು ಒಂದಲ್ಲ ಒಂದು ರೀತಿಯಲ್ಲಿ ಹೀಗೆ ಕೆಲಸಮಾಡುತ್ತಲೇ ಇರುತ್ತದೆ.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಇಲ್ಲಿ ಕ್ಲಿಕ್ ಮಾಡಿ
ಪ್ರಕಟಿಸಲಾಗಿದೆ – 11:48 ಎಎಮ್, ಬುಧ, 16 ಜುಲೈ 25