Headlines

Hashtag Ban: ಇನ್ಮುಂದೆ ಹ್ಯಾಷ್​ಟ್ಯಾಗ್​ ಬಳಸುವಂತಿಲ್ಲ! ನಾಳೆಯಿಂದಲೇ ಜಾರಿ- ಎಲಾನ್​ ಮಸ್ಕ್​ ಮಾತು ಕೇಳಿ… | Elon Musk Says Hashtags Will Be Banned From Ads On X Starting Tomorrow Suc

Hashtag Ban: ಇನ್ಮುಂದೆ ಹ್ಯಾಷ್​ಟ್ಯಾಗ್​ ಬಳಸುವಂತಿಲ್ಲ! ನಾಳೆಯಿಂದಲೇ ಜಾರಿ- ಎಲಾನ್​ ಮಸ್ಕ್​ ಮಾತು ಕೇಳಿ… | Elon Musk Says Hashtags Will Be Banned From Ads On X Starting Tomorrow Suc



ಇನ್ಮುಂದೆ ಹ್ಯಾಷ್​ಟ್ಯಾಗ್​ ಬಳಸುವಂತಿಲ್ಲ ಎಂದಿರುವ ಎಕ್ಸ್ ಮೈಕ್ರೋಬ್ಲಾಗಿಂಗ್ ಪ್ಲಾಟ್‌ಫಾರ್ಮ್‌ನ ಸಿಇಒ ಎಲಾನ್​ ಮಸ್ಕ್​, ನಾಳೆಯಿಂದಲೇ ಅದು ಜಾರಿ ಎಂದಿದ್ದಾರೆ. ಯಾರಿಗೆ ಅನ್ವಯ? ಡಿಟೇಲ್ಸ್​ ಇಲ್ಲಿದೆ… 

ಸೋಷಿಯಲ್​ ಮೀಡಿಯಾ ಬಳಕೆದಾರರಿಗೆ ಹ್ಯಾಷ್​ಟ್ಯಾಗ್​ಗಳೇ ಬಂಡವಾಳ. ವಿಷಯವನ್ನು ಹುಡುಕಲು ಮತ್ತು ವರ್ಗೀಕರಿಸಲು ಹ್ಯಾಷ್​ಟ್ಯಾಗ್​ಗಳು ಬಹಳ ಪ್ರಮುಖ ಪಾತ್ರವನ್ನು ವಹಿಸುತ್ತವೆ. ಇದೇ ಕಾರಣಕ್ಕೆ ಇಂದು ಬಹುತೇಕ ಎಲ್ಲರೂ ಅವರು ಸೋಷಿಯಲ್​ ಮೀಡಿಯಾದಲ್ಲಿ ಹಾಕುವ ವಿಷಯಕ್ಕಿಂತಲೂ ಹೆಚ್ಚಿನದಾಗ ಹ್ಯಾಷ್​ಟ್ಯಾಗ್​ ಹಾಕುತ್ತಾರೆ, ಇನ್ನು ಕೆಲವರಂತೂ ಅವರು ಅಪ್​ಲೋಡ್​ ಮಾಡುವ ವಿಡಿಯೋಕ್ಕೂ, ಹ್ಯಾಷ್​ಟ್ಯಾಗ್​ಗೂ ಸಂಬಂಧವೇ ಇರುವುದಿಲ್ಲ. ಆದರೆ ನಟ, ನಟಿಯರ ಹೆಸರು ಸೇರಿದಂತೆ ಒಂದಿಷ್ಟು ಫೇಮಸ್​ ಹ್ಯಾಷ್​ಟ್ಯಾಗ್ ಹಾಕುವ ಮೂಲಕ, ಟ್ರೆಂಡ್​ನಲ್ಲಿ ಇರುವ ವಿಷಯ ಸರ್ಚ್​ ಮಾಡಿದಾಗ ತಮ್ಮದೂ ವಿಡಿಯೋ ಸಿಗಲಿ ಎಂದು ಕಿತಾಪತಿ ಮಾಡುತ್ತಾರೆ. ಅಲ್ಲಿ ಅವರು ಹಾಕಿರುವ ಹ್ಯಾಷ್​ಟ್ಯಾಗ್​ಗೂ, ಅವರ ವಿಡಿಯೋಕ್ಕೂ ತಾಳಮೇಳವೇ ಇರುವುದಿಲ್ಲ. ಒಟ್ಟಿನಲ್ಲಿ ಹ್ಯಾಷ್​ಟ್ಯಾಗ್​ ಎನ್ನುವುದು ಸೋಷಿಯಲ್​ ಮೀಡಿಯಾ ಬಳಕೆದಾರರಿಗೆ ಭಾರಿ ಬಂಡವಾಳ.

ಆದರೆ ಅದನ್ನೇ ಬಳಸದಂತೆ ನಿರ್ಬಂಧ ಹೇರಿಬಿಟ್ಟರೆ? ಇದನ್ನು ಊಹಿಸಿಕೊಳ್ಳುವುದೂ ಕಷ್ಟವೇ. ಆದರೆ ಇದೀಗ ನಾಳೆಯಿಂದಲೇ ಅಂದ್ರೆ ಜೂನ್​ 27ರಂದು ಹ್ಯಾಷ್​ಟ್ಯಾಗ್​ ಬ್ಯಾನ್​ ಮಾಡಿದ್ದಾರೆ ಎಕ್ಸ್​ (ಹಿಂದಿನ ಟ್ವಿಟರ್​) ಮೈಕ್ರೋಬ್ಲಾಗಿಂಗ್ ಪ್ಲಾಟ್‌ಫಾರ್ಮ್‌ನ ಸಿಇಒ ಎಲಾನ್​ ಮಸ್ಕ್​. ಅವರು ಎಕ್ಸ್​ ಖಾತೆಯಲ್ಲಿ ಹ್ಯಾಷ್​ಟ್ಯಾಗ್​ ಹಾಕುವುದಕ್ಕೆ ನಿರ್ಬಂಧ ವಿಧಿಸಿದ್ದಾರೆ. ಹಾಗೆಂದು ಎಕ್ಸ್​ ಖಾತೆದಾರರೆಲ್ಲಾ ಭಯಪಡುವ ಅಗತ್ಯವಿಲ್ಲ. ಸದ್ಯ ಈ ರೀತಿ ಬ್ಯಾನ್​ ಆಗಿರುವುದು ಜಾಹೀರಾತು ನೀಡುವವರಿಗೆ ಮಾತ್ರ. X ನಲ್ಲಿರುವ ಖಾತೆಗಳು ನಾಳೆಯಿಂದ ತಮ್ಮ ಜಾಹೀರಾತುಗಳಲ್ಲಿ ಹ್ಯಾಷ್​ಟ್ಯಾಗ್‌ಗಳನ್ನು ಬಳಸಲು ಸಾಧ್ಯವಾಗುವುದಿಲ್ಲ ಎಂದು ಎಲಾನ್ ಮಸ್ಕ್ ಗುರುವಾರ ತಿಳಿಸಿದ್ದಾರೆ. ಹ್ಯಾಷ್​ಟ್ಯಾಗ್‌ಗಳನ್ನು ‘ಸೌಂದರ್ಯದ ದುಃಸ್ವಪ್ನ’ ಎಂದು ಕರೆದಿರುವ ಅವರು, ಶುಕ್ರವಾರದಿಂದ ನಿಷೇಧವನ್ನು ಜಾರಿಗೆ ತರಲಾಗುವುದು ಎಂದು ಹೇಳಿದ್ದಾರೆ.

 

ಜಾಹೀರಾತುಗಳು ಎಂದು ಮಸ್ಕ್​ ಸ್ಪಷ್ಟವಾಗಿ ಹೇಳಿರುವುದಿರಂದ, X ನಲ್ಲಿನ ಸಾಮಾನ್ಯ ಪೋಸ್ಟ್‌ಗಳು ಇನ್ನೂ ಹ್ಯಾಷ್​ಟ್ಯಾಗ್‌ಗಳನ್ನು ಬಳಸಲು ಸಾಧ್ಯವಾಗುತ್ತದೆ ಎಂದು ತಿಳಿದುಬರುತ್ತದೆ. ಹೊಸ ನಿಯಮವು ಮೈಕ್ರೋಬ್ಲಾಗಿಂಗ್ ಪ್ಲಾಟ್‌ಫಾರ್ಮ್‌ನಲ್ಲಿನ ಜಾಹೀರಾತುಗಳಿಗೆ ಮಾತ್ರ ಅನ್ವಯಿಸುತ್ತದೆ ಎಂದು ಮಸ್ಕ್ ನಿರ್ದಿಷ್ಟವಾಗಿ ಉಲ್ಲೇಖಿಸಿದ್ದಾರೆ. ಡಿಸೆಂಬರ್ 2024 ರಲ್ಲಿ ಎಲಾನ್ ಮಸ್ಕ್ ಹ್ಯಾಷ್​ಟ್ಯಾಗ್​ಗಳನ್ನು ‘ಕೊಳಕು’ ಎಂದು ಕರೆದ ತಿಂಗಳುಗಳ ನಂತರ X ಜಾಹೀರಾತುಗಳ ಮೇಲಿನ ಅವುಗಲ ನಿಷೇಧ ಬಂದಿದೆ ಮತ್ತು ಜನರು ಅದನ್ನು ಇನ್ನು ಮುಂದೆ ಬಳಸದಂತೆ ಒತ್ತಾಯಿಸಿದ್ದಾರೆಎ.

“ದಯವಿಟ್ಟು ಹ್ಯಾಶ್‌ಟ್ಯಾಗ್‌ಗಳನ್ನು ಬಳಸುವುದನ್ನು ನಿಲ್ಲಿಸಿ. ಈ ವ್ಯವಸ್ಥೆಗೆ ಇನ್ನು ಮುಂದೆ ಅವುಗಳ ಅಗತ್ಯವಿಲ್ಲ, ಮತ್ತು ಅವು ಕೊಳಕು ಕಾಣುತ್ತವೆ” ಎಂದು ಅವರು ಪೋಸ್ಟ್‌ಗೆ ಉತ್ತರಿಸಿದ್ದಾರೆ. ಅಷ್ಟಕ್ಕೂ ಹ್ಯಾಶ್‌ಟ್ಯಾಗ್‌ಗಳನ್ನು ಮೊದಲು 2007 ರಲ್ಲಿ ಟ್ವಿಟರ್, ಈಗ X ಎಂದು ಕರೆಯಲ್ಪಡುತ್ತದೆ, ಜನಪ್ರಿಯಗೊಳಿಸಿತು. X ನಲ್ಲಿ ಜಾಹೀರಾತುಗಳಿಗಾಗಿ ಹ್ಯಾಶ್‌ಟ್ಯಾಗ್‌ಗಳನ್ನು ನಿಷೇಧಿಸುವ ಎಲೋನ್ ಮಸ್ಕ್ ಅವರ ಕ್ರಮವನ್ನು X ನಲ್ಲಿ ಬಳಕೆದಾರರು ಶ್ಲಾಘಿಸಿದ್ದಾರೆ. ಜಾಹೀರಾತುಗಳ ಕಿರಿಕಿರಿ ಒಂದೆಡೆಯಾದರೆ, ಈ ಹ್ಯಾಷ್​ಟ್ಯಾಗ್​ಗಳೂ ಕಿರಿಕಿರಿ ಮಾಡುತ್ತಿದ್ದವು, ಇದು ತುಂಬಾ ಒಳ್ಳೆಯ ನಡೆ ಎಂದು ಪ್ರಶಂಸಿಸಿದ್ದಾರೆ. ಆದರೆ ಇದನ್ನೇ ಮುಂದೊಂದು ದಿನ ಸಾಮಾನ್ಯ ಬಳಕೆದಾರರ ಮೇಲೆ ಹೇರಬೇಡಿ ಎಂದೂ ಮನವಿ ಮಾಡಿಕೊಂಡಿದ್ದಾರೆ.



Source link

Leave a Reply

Your email address will not be published. Required fields are marked *