Health Tips: ಹಣ್ಣು, ತರಕಾರಿಗಳನ್ನು ತೊಳೆಯುವುದು ಹೇಗೆ? ವಿವಿಧ ವಿಧಾನಗಳು ಇಲ್ಲಿವೆ

Health Tips: ಹಣ್ಣು, ತರಕಾರಿಗಳನ್ನು ತೊಳೆಯುವುದು ಹೇಗೆ? ವಿವಿಧ ವಿಧಾನಗಳು ಇಲ್ಲಿವೆ


ತರಕಾರಿಯ ಸಿಪ್ಪೆಗಳಲ್ಲಿ ಆ್ಯಂಟಿಆಕ್ಸಿಡೆಂಟ್‌ಗಳು ಮತ್ತು ಫೈಬರ್‌ನಂತಹ ಅನೇಕ ರೀತಿಯ ಪೋಷಕಾಂಶಗಳು ಕಂಡುಬರುತ್ತವೆ. ಇದು ದೇಹವನ್ನು ದೀರ್ಘಕಾಲದವರೆಗೆ ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ. ಈ ಕಾರಣದಿಂದಾಗಿ ಅನೇಕ ಜನರು ತರಕಾರಿಯ ಸಿಪ್ಪೆ ತೆಗೆಯದೇ ಉಪಯೋಗಿಸಲು ಇಚ್ಛಿಸುತ್ತಿದ್ದಾರೆ. ಆದರೆ ಸಿಪ್ಪೆ ತೆಗೆಯದೇ ಯಾವುದೇ ಹಣ್ಣು ತರಕಾರಿಯನ್ನು ನೀವು ತಿನ್ನಲು ಬಯಸಿದರೆ ಅವುಗಳಲ್ಲಿ ಇರುವ ಕೀಟನಾಶಕ ಗಳನ್ನು ಸರಿಯಾಗಿ ತೆಗೆದುಹಾಕುವುದು ಬಹಳ ಅಗತ್ಯ. ಏಕೆಂದರೆ ಈ ರಾಸಾಯನಿಕಗಳು ದೀರ್ಘಕಾಲಿಕವಾಗಿ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರುವ ಸಾಧ್ಯತೆಯಿದೆ.

ತೊಳೆಯುವ ವಿಧಾನಗಳು:

ತಣ್ಣೀರಿನಲ್ಲಿ ತೊಳೆಯುವುದು:

ಹೆಚ್ಚಿನ ಹಣ್ಣು-ತರಕಾರಿಗಳ ಮೇಲೆ ಇರುವ ಸುಮಾರು ಶೇ.75-80 ಕೀಟನಾಶಕದ ಅಂಶ ಸರಿಯಾಗಿ ತಣ್ಣೀರಿನಲ್ಲಿ ತೊಳೆಯುವ ಮೂಲಕವೇ ತೆಗೆದುಹೋಗುತ್ತವೆ. ಇದು ಪ್ರತಿ ಉಪಯೋಗದ ಮುಂಚೆಯೂ ಮಾಡಬೇಕಾದ ಪಾಠವಾಗಬೇಕು. ಇನ್ನಷ್ಟು ಪರಿಣಾಮಕಾರಿಯಾದ ವಿಧಾನವೆಂದರೆ ಉಪ್ಪು ನೀರಿನಲ್ಲಿ ತೊಳೆಯುವುದು. ಇದು ಕೆಲವೊಂದು ಕಠಿಣ ಕೀಟನಾಶಕಗಳ ಅಂಶವನ್ನು ಕಡಿಮೆ ಮಾಡಬಹುದು.

ಉಪ್ಪು ನೀರು ತಯಾರಿಸುವ ವಿಧಾನ:

  • 1 ಲೀಟರ್ ಕುಡಿಯುವ ನೀರನ್ನು ಬಾಟಲಿಯಲ್ಲಿ ತೆಗೆದುಕೊಳ್ಳಿ
  • ಅದರಲ್ಲಿ 4 ಸಮತಟ್ಟಾದ ಟೀಚಮಚ ಉಪ್ಪು ಸೇರಿಸಿ
  • ಉಪ್ಪು ಸಂಪೂರ್ಣವಾಗಿ ಕರಗುವ ತನಕ ಬಿಡಿ.

ಈ ರೀತಿಯಾಗಿ ತಯಾರಾದ ಉಪ್ಪು ನೀರಿನಲ್ಲಿ ನೀವು ಹಣ್ಣುಗಳು ಮತ್ತು ತರಕಾರಿಗಳನ್ನು 5 ರಿಂದ 10 ನಿಮಿಷಗಳವರೆಗೆ ಮುಳುಗಿಸಿ, ನಂತರ ತಣ್ಣೀರಿನಲ್ಲಿ ಮತ್ತೆ ತೊಳೆಯಿರಿ.

ಇತರ ತೊಳೆಯುವ ವಿಧಾನಗಳು:

ಬೇಕಿಂಗ್ ಸೋಡಾ ದ್ರಾವಣ:

  • 1 ಲೀಟರ್ ನೀರಿಗೆ 1 ಚಮಚೆ ಬೇಕಿಂಗ್ ಸೋಡಾ ಸೇರಿಸಿ
  • 12-15 ನಿಮಿಷ ನೆನೆಸಿಟ್ಟು ತಾಜಾ ನೀರಿನಲ್ಲಿ ತೊಳೆಯಿರಿ.
  • 3:1 ಅನುಪಾತದಲ್ಲಿ ನೀರು ಮತ್ತು ಬಿಳಿ ವಿನೆಗರ್ ಬೆರೆಸಿ
  • 5-10 ನಿಮಿಷ ನೆನೆಸಿಟ್ಟು ಚೆನ್ನಾಗಿ ತೊಳೆಯಿರಿ

ನಿರ್ದಿಷ್ಟ ತರಕಾರಿಗಳಿಗೆ ವಿಶೇಷ ಸಲಹೆಗಳು:

  • ಎಲೆಕೋಸು ತರಹದ ತರಕಾರಿಗಳು: ಹೊರಗಿನ 2-3 ಎಲೆಗಳನ್ನು ತೆಗೆದುಹಾಕಿ
  • ಬೇರು ತರಕಾರಿಗಳು: ಬ್ರಷ್ ಬಳಸಿ ಚೆನ್ನಾಗಿ ಉಜ್ಜಿ ತೊಳೆಯಿರಿ
  • ಹಣ್ಣುಗಳು: ಕೈಯಿಂದ ಉಜ್ಜಿ ತೊಳೆಯಿರಿ
  • ದ್ರಾಕ್ಷಿ ಮತ್ತು ಬೆರಿ ಹಣ್ಣುಗಳು:ಉಪ್ಪು ನೀರಿನ ವಿಧಾನ ವಿಶೇಷವಾಗಿ ಪರಿಣಾಮಕಾರಿ

ಇದನ್ನೂ ಓದಿ: Health Tips: ದಿನದಲ್ಲಿ ಹಲವು ಬಾರಿ ಮಲ ವಿಸರ್ಜನೆಯಾಗಲು ಕಾರಣವೇನು?

ಮುಖ್ಯ ಸೂಚನೆಗಳು ಮತ್ತು ಸಲಹೆಗಳು

ಮಾಡಬೇಕಾದವು:

  • ಸಮಯ: ತಿನ್ನುವ ಮುಂಚೆಯೇ ತೊಳೆಯಿರಿ, ಮುಂಚಿತವಾಗಿ ಅಲ್ಲ
  • ಒಣಗಿಸುವುದು: ಸ್ವಚ್ಛ ಬಟ್ಟೆಯಿಂದ ಮಾತ್ರ
  • ಹಣ್ಣು ತಿನ್ನುವ ಮುನ್ನ ತಾಜಾ ನೀರಿನಲ್ಲಿ ತೊಳೆಯುವುದನ್ನು ಮರೆಯಬೇಡಿ
  • ತಾಜಾ ದ್ರಾವಣ:* ಪ್ರತಿವೇಳೆ ಹೊಸ ದ್ರಾವಣ ತಯಾರಿಸಿ

ಮಾಡಬಾರದವು:

  • ಸಾಬೂನು ಅಥವಾ ಡಿಟರ್ಜೆಂಟ್ ಬಳಸಬೇಡಿ
  • ಉಪ್ಪು ನೀರು ಶೇಖರಿಸಬೇಡಿ
  • ಹೆಚ್ಚು ಸಮಯ ನೆನೆಸಿ ಇಡುವದರಿಂದ ಹಣ್ಣು ತರಕಾರಿಗಳಲ್ಲಿರುವ ಪೋಷಕಾಂಶಗಳು ಕಳೆದುಹೋಗಬಹುದು.

ಲೇಖನ: ಡಾ ರವಿಕಿರಣ ಪಟವರ್ಧನ ಶಿರಸಿ

ಆಯುರ್ವೇದ ವೈದ್ಯರು, ಶಿರಸಿ – 581401

ದೂರವಾಣಿ: 08384-225836

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 2:10 pm, Fri, 27 June 25



Source link

Leave a Reply

Your email address will not be published. Required fields are marked *