Hombale Films’ Ambition: ವಿಷ್ಣು ದಶಾವತಾರ ಕಥೆಯನ್ನು ತೆರೆ ಮೇಲೆ ತರಲು ರೆಡಿಯಾದ ಹೊಂಬಾಳೆ ಫಿಲ್ಮ್ಸ್ | Hombale Films Presents Mahavatar Cinematic Universe Between 2025 And 2037

Hombale Films’ Ambition: ವಿಷ್ಣು ದಶಾವತಾರ ಕಥೆಯನ್ನು ತೆರೆ ಮೇಲೆ ತರಲು ರೆಡಿಯಾದ ಹೊಂಬಾಳೆ ಫಿಲ್ಮ್ಸ್ | Hombale Films Presents Mahavatar Cinematic Universe Between 2025 And 2037



ಈಗಾಗಲೇ ಸೂಪರ್‌ ಹಿಟ್ ಸಿನಿಮಾ ನೀಡಿರುವ ಹೊಂಬಾಳೆ ಫಿಲ್ಮ್ಸ್‌ ಈಗ ಇನ್ನೊಂದು ಗುಡ್‌ ನ್ಯೂಸ್‌ ನೀಡಿದೆ. ಭಗವಾನ್ ವಿಷ್ಣುವಿನ ದಶಾವತಾರಗಳನ್ನು ತೆರೆ ಮೇಲೆ ತರಲಿದೆಯಂತೆ. 

ಮುಂದಿನ ಹನ್ನೆರಡು ವರ್ಷಗಳಲ್ಲಿ ಭಗವಾನ್ ವಿಷ್ಣುವಿನ ದಶಾವತಾರಗಳನ್ನು ಆಧರಿಸಿದ ಏಳು 3D ಸಿನಿಮಾಗಳು ಭಾರತೀಯ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿವೆ ಎಂದು ಹೊಂಬಾಳೆ ಫಿಲ್ಮ್ಸ್ ಬುಧವಾರ ಘೋಷಿಸಿದೆ, ಮಹಾವತಾರ ಸಿನಿಮಾಟಿಕ್ ಯೂನಿವರ್ಸ್‌ನ ಚಿತ್ರಗಳ ಸರಣಿಯನ್ನು ಬಹಿರಂಗಪಡಿಸಿತು.

ಏಳು ಸಿನಿಮಾಗಳು ರಿಲೀಸ್

ಮೊದಲ ಸಿನಿಮಾ, ʼಮಹಾವತಾರ ನರಸಿಂಹʼ, ಈ ವರ್ಷ ಜುಲೈ 25 ರಂದು ಥಿಯೇಟರ್‌ನಲ್ಲಿ ಬಿಡುಗಡೆಯಾಗಲಿದೆ. ಈ ಪೌರಾಣಿಕ ಮಹಾಕಾವ್ಯದ ಸಿರೀಸ್‌ ಆಗಿರುವ ʼಮಹಾವತಾರ ಪರಶುರಾಮʼ ಸಿನಿಮಾವು 2027ರಲ್ಲಿ, ʼಮಹಾವತಾರ ರಘುನಂದನʼ ಸಿನಿಮಾವು 2029ರಲ್ಲಿ, ʼಮಹಾವತಾರ ಧವಕಾದೇಶʼ ಸಿನಿಮಾವು 2031ರಲ್ಲಿ, ʼಮಹಾವತಾರ ಗೋಕುಲಾನಂದʼ ಸಿನಿಮಾವು 2033ರಲ್ಲಿ, ʼಮಹಾವತಾರ ಕಲ್ಕಿ ಭಾಗ 1ʼ ಸಿನಿಮಾವು 2035ರಲ್ಲಿ ಮತ್ತು ʼಮಹಾವತಾರ ಕಲ್ಕಿ ಭಾಗ 2ʼ ಸಿನಿಮಾವು 2037ರಲ್ಲಿ ಅನುಸರಿಸಲಿವೆ.

ನಿರ್ಮಾಪಕರು ಏನು ಹೇಳಿದ್ರು?

“ನಮ್ಮ ಕಥೆಗಳು ಪರದೆ ಮೇಲೆ ಜೀವಂತವಾಗಿ ರಾರಾಜಿಸುವುದನ್ನು ಕಾಣಲು ನಾವು ಉತ್ಸುಕರಾಗಿದ್ದೇವೆ. ಈ ಸಾಧ್ಯತೆಗಳು ಅಪಾರವಾಗಿವೆ. ಒಂದು ಅದ್ಭುತ ಸಿನಿಮಾ ಪಯಣಕ್ಕೆ ಸಿದ್ಧರಾಗಿ! #HombaleFilms #KleemProductions ರಿಂದ ನಿರ್ಮಿತವಾದ ಬೆರಗುಗೊಳಿಸುವ ಚಿತ್ರಾನಿಮೇಷನ್‌ನೊಂದಿಗೆ #MahavatarCinematicUniverse ಅನ್ನು ಗೌರವದಿಂದ ಪ್ರಸ್ತುತಪಡಿಸುತ್ತದೆ,” ಎಂದು ನಿರ್ಮಾಪಕರು X ನಲ್ಲಿ ಹಂಚಿಕೊಂಡಿದ್ದಾರೆ. Kleem Productions

Kleemproductions ಈ ಸಿನಿಮಾ ನಿರ್ಮಾಣ ಮಾಡುತ್ತಿದ್ದು, ಹೊಂಬಾಳೆ ವಿತರಿಸುತ್ತಿದೆ.

ಒಂದು ದಶಕಕ್ಕಿಂತಲೂ ಹೆಚ್ಚಿನ ಕಾಲಮಾನದಲ್ಲಿ ಈ ಸಿನಿಮಾ ಸಿರೀಸ್ ಬಿಡುಗಡೆಯಾಗಲಿದೆ. ಈ ಸಿನಿಮಾಗಳ ಬಗ್ಗೆ ಟೀಸರ್ ವೀಡಿಯೋ ಹಂಚಿಕೊಂಡಿದೆ. “ನಿಮ್ಮನ್ನು ಉಸಿರಾಡದಂತೆ ಮಾಡುವ ಸಿನಿಮಾ ಅದ್ಭುತಕ್ಕೆ ಸಿದ್ಧರಾಗಿ! ರೋಮಾಂಚಕ ಸಾಹಸಕ್ಕಾಗಿ ಕಾಯಿರಿ” ಎಂದು ನಿರ್ಮಾಪಕರು ಹೇಳಿಕೊಂಡಿದ್ದಾರೆ.

ಹೊಂಬಾಳೆ ಫಿಲ್ಮ್ಸ್‌ ನಿರ್ಮಾಣದ ಸಿನಿಮಾಗಳು!

2012 ರಲ್ಲಿ ವಿಜಯ್ ಕಿರಗಂದೂರ್, ಚಲುವೆ ಗೌಡರಿಂದ ಹೊಂಬಾಳೆ ಫಿಲ್ಮ್ಸ್ ಸ್ಥಾಪಿತವಾಗಿದೆ, 2014 ರಲ್ಲಿ ಕನ್ನಡ ಚಿತ್ರ ʼನಿನ್ನಿಂದಲʼ ಸಿನಿಮಾದೊಂದಿಗೆ ನಿರ್ಮಾಣ ಕ್ಷೇತ್ರಕ್ಕೆ ಕಾಲಿಟ್ಟಿತು. ಅಂದಿನಿಂದ ಅವರು ಕೆ.ಜಿ.ಎಫ್: ಚಾಪ್ಟರ್ 1, ಮತ್ತು ಕೆ.ಜಿ.ಎಫ್: ಚಾಪ್ಟರ್ 2, ಉಗ್ರಂ ಮುಂತಾದ ಸಿನಿಮಾಗಳನ್ನು ನಿರ್ಮಿಸಿದರು, ಈ ಸಿನಿಮಾಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೂಡ ಹೆಸರು ಮಾಡಿದೆ. ನಟ ರಿಷಭ್ ಶೆಟ್ಟಿ ಬರೆದು, ನಿರ್ದೇಶಿಸಿ, ನಾಯಕನಾಗಿ ನಟಿಸಿದ ʼಕಾಂತಾರʼ (2022) ಸಿನಿಮಾ ಕೂಡ ರಾಷ್ಟ್ರ ಮಟ್ಟದ ಗೌರವ ಪಡೆದಿದೆ. ನಟ ಹೃತಿಕ್‌ ರೋಶನ್‌ ಜೊತೆಯೂ ಹೊಂಬಾಳೆ ಸಿನಿಮಾ ಮಾಡ್ತಿದೆ. ಅಂದಹಾಗೆ ರಕ್ಷಿತ್‌ ಶೆಟ್ಟಿಯ ʼರಿಚರ್ಡ್‌ ಆಂಟನಿʼ ಸಿನಿಮಾ ಬಗ್ಗೆ ಇನ್ನೂ ಮಾಹಿತಿ ಹೊರಬಂದಿಲ್ಲ.

 



Source link

Leave a Reply

Your email address will not be published. Required fields are marked *