ಲೀಡ್ಸ್‌ನಲ್ಲಿ ನಡೆಯುತ್ತಿರುವ ಭಾರತ ಹಾಗೂ ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್ನಲ್ಲಿ ಟೀಂ ಇಂಡಿಯಾದ ಆರಂಭಿಕ ಆಟಗಾರ ಕೆಎಲ್ ರಾಹುಲ್ ಭರ್ಜರಿ ಶತಕ ಸಿಡಿಸಿದ್ದಾರೆ. ತಮ್ಮ ತಾಳ್ಮೆಯ ಆಟದ ಮೂಲಕವೇ ಆಂಗ್ಲ ಬೌಲರ್‌ಗಳನ್ನು ಹೈರಾಣಾಗಿಸಿದ ರಾಹುಲ್ 202 ಎಸೆತಗಳಲ್ಲಿ 13 ಬೌಂಡರಿಗಳ ಸಹಿತ ತಮ್ಮ ಟೆಸ್ಟ್ ವೃತ್ತಿಜೀವನದ 9ನೇ ಶತಕವನ್ನು ಪೂರೈಸಿದರು. ರಾಹುಲ್ ಅವರ ಈ ಬಲಿಷ್ಠ ಇನ್ನಿಂಗ್ಸ್ನಿಂದಾಗಿ ಟೀಂ ಇಂಡಿಯಾ 2ನೇ ಇನ್ನಿಂಗ್ಸ್ನಲ್ಲಿ ಬಲಿಷ್ಠ ಸ್ಥಿತಿಯಲ್ಲಿದ್ದು, 200 ಕ್ಕೂ ಅಧಿಕ ರನ್ ಕಲೆಹಾಕಿದೆ. ಎರಡನೇ ಇನ್ನಿಂಗ್ಸ್ನಲ್ಲಿ ರಾಹುಲ್ ಮಾತ್ರವಲ್ಲದೆ ಉಪನಾಯಕ ರಿಷಬ್ ಪಂತ್ ಕೂಡ ಶತಕದ ಸಮೀಪದಲ್ಲಿದ್ದಾರೆ. ಇವರಿಬ್ಬರ ನಡುವೆ ಶತಕದ ಜೊತೆಯಾಟವೂ ಮೂಡಿದೆ.