Headlines

IND vs ENG: ಗವಾಸ್ಕರ್ ಬೇಡಿಕೆಯನ್ನು ಈಡೇರಿಸದ ರಿಷಭ್ ಪಂತ್; ವಿಡಿಯೋ ನೋಡಿ

IND vs ENG: ಗವಾಸ್ಕರ್ ಬೇಡಿಕೆಯನ್ನು ಈಡೇರಿಸದ ರಿಷಭ್ ಪಂತ್; ವಿಡಿಯೋ ನೋಡಿ


IND vs ENG: ಗವಾಸ್ಕರ್ ಬೇಡಿಕೆಯನ್ನು ಈಡೇರಿಸದ ರಿಷಭ್ ಪಂತ್; ವಿಡಿಯೋ ನೋಡಿ

ಲೀಡ್ಸ್ ಟೆಸ್ಟ್‌ನ ಎರಡನೇ ಇನ್ನಿಂಗ್ಸ್‌ನಲ್ಲಿಯೂ ರಿಷಭ್ ಪಂತ್ ಶತಕ ಬಾರಿಸುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ. ಎರಡನೇ ಇನ್ನಿಂಗ್ಸ್‌ನಲ್ಲಿ, ಪಂತ್ ಕೇವಲ 130 ಎಸೆತಗಳಲ್ಲಿ ಶತಕ ಪೂರೈಸುವ ಮೂಲಕ ತಮ್ಮ ಹೆಸರಿನಲ್ಲಿ ಅನೇಕ ದಾಖಲೆಗಳನ್ನು ನಿರ್ಮಿಸಿದರು. ಆದಾಗ್ಯೂ ಪಂತ್ ಅವರ ಈ ಶತಕದ ನಂತರ ಯಾರೂ ನಿರೀಕ್ಷಿಸದ ಘಟನೆಯೊಂದು ನಡೆಯಿತು. ವಾಸ್ತವವಾಗಿ ಶತಕ ಬಾರಿಸಿದ ನಂತರ, ರಿಷಭ್ ಪಂತ್ ತಮ್ಮದೇ ಆದ ಶೈಲಿಯಲ್ಲಿ ಪಲ್ಟಿ ಹೊಡೆದು ಸಂಭ್ರಮಿಸುತ್ತಾರೆ. ಆದರೆ ಎರಡನೇ ಇನ್ನಿಂಗ್ಸ್‌ನಲ್ಲಿ ಶತಕ ಬಾರಿಸಿದ ನಂತರ ಅವರು ಹಾಗೆ ಮಾಡಲಿಲ್ಲ. ಇಲ್ಲಿ ಇನ್ನೊಂದು ಸಂಗತಿಯೆಂದರೆ ತಂಡದ ಮಾಜಿ ಲೆಜೆಂಡರಿ ಆಟಗಾರ ಸುನಿಲ್ ಗವಾಸ್ಕರ್, ಪಂತ್​ರನ್ನು ಪಲ್ಟಿ ಹೊಡೆಯುವಂತೆ ಹಲವು ಬಾರಿ ಕೇಳಿಕೊಂಡರು. ಆದರೆ ಶತಕದ ಇನ್ನಿಂಗ್ಸ್​ನಲ್ಲಿ ತುಂಬಾ ಸುಸ್ತಾದವರಂತೆ ಕಾಣುತ್ತಿದ್ದ ಪಂತ್, ಆ ನಂತರ ಪಲ್ಟಿ ಹೊಡೆಯುವುದಾಗಿ ಗವಾಸ್ಕರ್​ ಕಡೆಗೆ ಸನ್ನೆ ಮಾಡಿ ಹೇಳಿದರು. ಇದೀಗ ಅದರ ವಿಡಿಯೋ ವೈರಲ್ ಆಗುತ್ತಿದೆ.



Source link

Leave a Reply

Your email address will not be published. Required fields are marked *