ಇಂಗ್ಲೆಂಡ್ ವಿರುದ್ಧದ ಲೀಡ್ಸ್ ಟೆಸ್ಟ್ ಪಂದ್ಯದ (Leeds Test Match) ಮೊದಲ ಇನ್ನಿಂಗ್ಸ್‌ನಲ್ಲಿ ರಿಷಭ್ ಪಂತ್ (Rishabh Pant) ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಉಪನಾಯಕತ್ವದ ಜವಾಬ್ದಾರಿ ವಹಿಸಿಕೊಂಡ ಬಳಿಕ ಸ್ಮರಣೀಯ ಇನ್ನಿಂಗ್ಸ್ ಆಡಿದ ಪಂತ್ ಶತಕ ಬಾರಿಸಿ ಮಿಂಚಿದರು. ಆಂಗ್ಲರ ನೆಲದಲ್ಲಿ ಪಂತ್ ಅವರ ಶತಕದ ಇನ್ನಿಂಗ್ಸ್ಗೆ ಎಲ್ಲೆಡೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇದೆಲ್ಲದೆ ನಡುವೆ ಈ ಹಿಂದೆ ಪಂತ್ರನ್ನು ಮೂರ್ಖ ಎಂದು ಜರಿದಿದ್ದ ಟೀಂ ಇಂಡಿಯಾದ ಮಾಜಿ ನಾಯಕ ಸುನಿಲ್ ಗವಾಸ್ಕರ್ (Sunil Gavaskar) ಕೂಡ ಇದೀಗ ಪಂತ್ ಬ್ಯಾಟಿಂಗ್‌ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವಾಸ್ತವವಾಗಿ ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟೆಸ್ಟ್ ಪಂದ್ಯದಲ್ಲಿ ವೀಕ್ಷಕ ವಿವರಣೆ ನೀಡುತ್ತಿರುವ ಗವಾಸ್ಕರ್, ಪಂತ್ ಶತಕ ಸಿಡಿಸಿದ ಕೂಡಲೇ ಅದನ್ನು ಸೂಪರ್ಬ್ ಎಂದು ಬಣ್ಣಿಸಿದ್ದರು. ಇದೀಗ ಈ ಮೊದಲು ತೆಗಳಿದ್ದ ಗವಾಸ್ಕರ್ ಹೊಗಳಿಕೆಯ ಮಾತುಗಳನ್ನಾಡಿರುವ ಬಗ್ಗೆ ಪಂತ್ ಮೊದಲ ಬಾರಿಗೆ ಮೌನ ಮುರಿದಿದ್ದಾರೆ.
ಗವಾಸ್ಕರ್ ಹೇಳಿಕೆಗೆ ರಿಷಭ್ ಪಂತ್ ಪ್ರತಿಕ್ರಿಯೆ
ಲೀಡ್ಸ್ ಟೆಸ್ಟ್‌ನಲ್ಲಿ ಮೂರನೇ ದಿನದಾಟ ಆರಂಭವಾಗುವ ಮೊದಲು, ಚೇತೇಶ್ವರ ಪೂಜಾರ ರಿಷಭ್ ಪಂತ್ ಅವರೊಂದಿಗೆ ಮಾತನಾಡಿದರು. ಸಂಭಾಷಣೆಯ ಸಮಯದಲ್ಲಿ ಪೂಜಾರ, ಪಂತ್ ಅವರನ್ನು ಲೀಡ್ಸ್‌ನಲ್ಲಿ ನಿಮ್ಮ ಶತಕವನ್ನು ನೋಡಿದ ನಂತರ, ಗವಾಸ್ಕರ್ ಅವರು ಸೂಪರ್, ಸೂಪರ್, ಸೂಪರ್ ಎಂದು ನಿಮ್ಮನ್ನು ಹೊಗಳಿದ್ದಾರೆ. ಈ ಮೊದಲು ನಿಮ್ಮನ್ನು ಗವಾಸ್ಕರ್ ಮೂರ್ಖ ಎಂದು ಕರೆದಿದ್ದರು. ಈಗ ನಿಮ್ಮನ್ನು ಸೂಪರ್ ಎಂದು ಬಣ್ಣಿಸಿದ್ದಾರೆ. ಈ ಬಗ್ಗೆ ನೀವು ಏನು ಹೇಳುತ್ತೀರಿ? ಎಂಬ ಪ್ರಶ್ನೆ ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ಪಂತ್, ಮೊದಲು ನಕ್ಕಿದ್ದು ಮಾತ್ರವಲ್ಲದೆ ಸ್ವಲ್ಪ ವ್ಯಂಗ್ಯವಾಡಿದರು.
ನಿಜಕ್ಕೂ ಸಂತೋಷ ತಂದಿದೆ
ಆ ಬಳಿಕ ಪ್ರತಿಕ್ರಿಯಿಸಿದ ಪಂತ್, ನನ್ನ ನ್ಯೂನತೆಗಳನ್ನು ನಿವಾರಿಸಿಕೊಳ್ಳಲು ಮತ್ತು ಅವುಗಳಿಂದ ಹೊರಗೆ ಬರಲು ನನಗೆ ಸಾಧ್ಯವಾಗಿರುವುದು ನಿಜಕ್ಕೂ ಸಂತೋಷ ತಂದಿದೆ. ಅದು ಯಾವಾಗಲೂ ನನ್ನ ಆಲೋಚನಾ ಪ್ರಕ್ರಿಯೆಯಾಗಿತ್ತು. ಒಂದು ನಿರ್ದಿಷ್ಟ ಅಂಶದಲ್ಲಿ ನಾನು ಗುರಿಯನ್ನು ತಲುಪಿಲ್ಲ ಎಂದು ನನಗೆ ಅನಿಸಿತು ಆದರೆ ಅದೃಷ್ಟವಶಾತ್ ನಾನು ಅದನ್ನು ಬದಲಾಯಿಸಲು ಸಾಧ್ಯವಾಯಿತು. ಕಷ್ಟಪಟ್ಟು ಕೆಲಸ ಮಾಡುವ ಮೂಲಕ, ಚೆನ್ನಾಗಿ ಗಮನಹರಿಸುವ ಮೂಲಕ ಮತ್ತು ನನ್ನ ಆಟಕ್ಕೆ ಶಿಸ್ತಿನ ಪದರವನ್ನು ಸೇರಿಸುವ ಮೂಲಕ ಇದನ್ನು ಸಾಧಿಸಿದ್ದೇನೆ. ಆದ್ದರಿಂದ ಅದು ನನಗೆ ರೋಮಾಂಚನಕಾರಿಯಾಗಿದೆ ಎಂದಿದ್ದಾರೆ.
IND vs ENG: ‘ಸ್ಟುಪಿಡ್ ಟು ಸೂಪರ್ಬ್’..; ತೆಗಳಿದವರಿಂದಲೇ ಹೊಗಳಿಸಿಕೊಂಡ ರಿಷಭ್ ಪಂತ್; ವಿಡಿಯೋ
ಆಸ್ಟ್ರೇಲಿಯಾ ಪ್ರವಾಸದ ವೇಳೆ ಪಂತ್ ವಿರುದ್ಧ ಟೀಕೆ
ಇದೀಗ ಲೀಡ್ಸ್‌ನಲ್ಲಿ ಶತಕ ಬಾರಿಸಿರುವ ಪಂತ್, ಈ ಹಿಂದೆ ಆಸ್ಟ್ರೇಲಿಯಾ ಪ್ರವಾಸದಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಲಿಲ್ಲ. ಆ ಪ್ರವಾಸದಲ್ಲಿ ಪಂತ್ ಹಲವು ಬಾರಿ ಕೆಟ್ಟ ಶಾಟ್ ಆಡಿ ಔಟಾಗಿದ್ದರು. ಆ ಸಮಯದಲ್ಲಿ ಗವಾಸ್ಕರ್, ಪಂತ್ ಅವರನ್ನು ‘ಮೂರ್ಖ, ಮೂರ್ಖ, ಮೂರ್ಖ’ ಎಂದು ಜರಿದಿದ್ದರು. ಆ ಸಮಯದಲ್ಲಿ, ಪಂತ್ ಬಗ್ಗೆ ಗವಾಸ್ಕರ್ ಅವರ ಹೇಳಿಕೆ ಹೆಚ್ಚು ಚರ್ಚೆಯಾಗಿತ್ತು.
ಇಂಗ್ಲೆಂಡ್‌ನಲ್ಲಿ ಪಂತ್ ಬ್ಯಾಟಿಂಗ್‌ಗೆ ಮೆಚ್ಚುಗೆ
ಆದರೆ ಇಂಗ್ಲೆಂಡ್‌ನಲ್ಲಿ ಪಂತ್ ಅವರ ಬ್ಯಾಟಿಂಗ್ ನೋಡಿದ ಸುನಿಲ್ ಗವಾಸ್ಕರ್ ಅವರು ‘ಸೂಪರ್ಬ್, ಸೂಪರ್ಬ್, ಸೂಪರ್ಬ್’ ಎಂಬ ಹೊಗಳಿಕೆಯ ಮಾತುಗಳನ್ನಾಡಿದ್ದಾರೆ. ಲೀಡ್ಸ್ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ, ರಿಷಭ್ ಪಂತ್ ಒಟ್ಟು 134 ರನ್ ಗಳಿಸಿದರು, ಇದರಲ್ಲಿ 12 ಬೌಂಡರಿಗಳು ಮತ್ತು 6 ಸಿಕ್ಸರ್‌ಗಳು ಸೇರಿದ್ದವು. ಇದು ಟೆಸ್ಟ್‌ನಲ್ಲಿ ಪಂತ್ ಅವರ 7 ನೇ ಶತಕವಾಗಿದ್ದು, ಅದರಲ್ಲಿ ಅವರು ಇಂಗ್ಲೆಂಡ್ ವಿರುದ್ಧವೇ 4 ಶತಕಗಳನ್ನು ಬಾರಿಸಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ