Headlines

IND vs ENG: ಲೀಡ್ಸ್‌ ಟೆಸ್ಟ್‌ನಲ್ಲಿ ಸತತ ಎರಡನೇ ಶತಕ ಸಿಡಿಸಿದ ರಿಷಭ್ ಪಂತ್

IND vs ENG: ಲೀಡ್ಸ್‌ ಟೆಸ್ಟ್‌ನಲ್ಲಿ ಸತತ ಎರಡನೇ ಶತಕ ಸಿಡಿಸಿದ ರಿಷಭ್ ಪಂತ್


ಲೀಡ್ಸ್‌ನಲ್ಲಿ ನಡೆಯುತ್ತಿರುವ ಭಾರತ ಹಾಗೂ ಇಂಗ್ಲೆಂಡ್‌ ನಡುವಿನ ಮೊದಲ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್​ನಲ್ಲಿ ಭರ್ಜರಿ ಶತಕ ಸಿಡಿಸಿದ್ದ ವಿಕಿಟ್​ಕೀಪರ್ ಬ್ಯಾಟ್ಸ್‌ಮನ್ ರಿಷಭ್ ಪಂತ್ ಇದೀಗ ಎರಡನೇ ಇನ್ನಿಂಗ್ಸ್​ನಲ್ಲೂ ಸ್ಫೋಟಕ ಶತಕ ಸಿಡಿಸಿದ್ದಾರೆ. ತಂಡ ಸಂಕಷ್ಟದಲ್ಲಿದ್ದ ಸಮಯದಲ್ಲಿ ಕ್ರೀಸ್​ಗೆ ಬಂದ ಪಂತ್, ರಾಹುಲ್ ಜೊತೆಗೆ ತಾಳ್ಮೆಯ ಇನ್ನಿಂಗ್ಸ್ ಕಟ್ಟಿದರು. 83 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಪಂತ್, ಆ ಬಳಿಕ ತಮ್ಮ ಗೇರ್ ಬದಲಿಸಿ ಉಳಿದ 50 ರನ್​ಗಳನ್ನು ಕೇವಲ 47 ಎಸೆತಗಳಲ್ಲಿ ಕಲೆಹಾಕಿ ತಮ್ಮ ಟೆಸ್ಟ್ ವೃತ್ತಿಜೀವನದ 8ನೇ ಶತಕವನ್ನು ಪೂರೈಸಿದರು. ಪಂತ್ ತಮ್ಮ ಶತಕದ ಇನ್ನಿಂಗ್ಸ್​ನಲ್ಲಿ 13 ಬೌಂಡರಿ ಹಾಗೂ 2 ಭರ್ಜರಿ ಸಿಕ್ಸರ್​ಗಳನ್ನು ಸಿಡಿಸಿದರು.

Published On – 7:47 pm, Mon, 23 June 25



Source link

Leave a Reply

Your email address will not be published. Required fields are marked *