Headlines

ಸೆನ್ಸಾರ್ ಬೋರ್ಡ್ ನಲ್ಲೇ ವಿವಾದ ಸೃಷ್ಟಿಸಿದ ಈ ಸಿನಿಮಾ… ಸದ್ಯ OTTಯಲ್ಲಿ ಸೆನ್ಸೇಶನ್ ಸೃಷ್ಟಿಸಿದೆ

ಸೆನ್ಸಾರ್ ಬೋರ್ಡ್ ನಲ್ಲೇ ವಿವಾದ ಸೃಷ್ಟಿಸಿದ ಈ ಸಿನಿಮಾ… ಸದ್ಯ OTTಯಲ್ಲಿ ಸೆನ್ಸೇಶನ್ ಸೃಷ್ಟಿಸಿದೆ

ಸೆನ್ಸಾರ್ ಬೋರ್ಡ್ ನಲ್ಲೇ ವಿವಾದ ಸೃಷ್ಟಿಸಿದ ಈ ಸಿನಿಮಾ… ಸದ್ಯ OTTಯಲ್ಲಿ ಸೆನ್ಸೇಶನ್ ಸೃಷ್ಟಿಸಿದೆ

ಸಾಕಷ್ಟು ವಿವಾದಗಳನ್ನು ಸೃಷ್ಟಿಸಿ, ಸೆನ್ಸಾರ್ ಮಂಡಳಿಯಿಂದ 96 ಜಾಗಗಳಲ್ಲಿ ಕತ್ತರಿ ಹಾಕಿತ್ತು ಮತ್ತು ಹೆಸರು ಬದಲಾವಣೆಗೂ ಕೂಡ ತಿಳಿಸಲಾಗಿತ್ತು. ಸದ್ಯ ಒಟಿಟಿಯಲ್ಲಿ ರಿಲೀಸ್ ಆಗಿರುವ ಸಿನಿಮಾ ಕುರಿತು ಮಾಹಿತಿ ಇಲ್ಲಿದೆ.

ಜಾನಕಿ vs ಸ್ಟೇಟ್ ಆಫ್ ಕೇರಳ OTT ಯಲ್ಲಿ ಈಗಾಗಲೇ ರಿಲೀಸ್ ಆಗಿ ಸದ್ದು ಮಾಡುತ್ತಿದೆ. ಈ ಚಿತ್ರವು ಈಗಾಗಲೇ ಥಿಯೇಟ್ರಿಕಲ್ ಬಿಡುಗಡೆಯಾಗಿ ಹಲವಾರು ವಿವಾದಗಳು, ಕಾನೂನು ಹೋರಾಟಗಳು ಮತ್ತು ಕಾನೂನು ಜಗಳಗಳಲ್ಲಿ ಸಿಲುಕಿಕೊಂಡಿತ್ತು . ಕೊನೆಗೆ ಒಟ್ಟಿಯಲ್ಲಿ ರಿಲೀಸ್ ಆಗಿದೆ.

ಈ ಚಿತ್ರದ ದೃಶ್ಯಗಳು ಎಷ್ಟು ವಿವಾದ ಸೃಷ್ಟಿಸಿತ್ತು ಅಂದ್ರೆ, ಸೆನ್ಸಾರ್ ಮಂಡಲಿ, ಈ ಸಿನಿಮಾದ 96 ದೃಶ್ಯಗಳಿಗೆ ಕತ್ತರಿ ಹಾಕಲು ನಿರ್ಧರಿಸಿತ್ತು. ಆದರೆ ಅದನ್ನು ಚಿತ್ರತಂಡ ಒಪ್ಪಿಗೆ ನೀಡಿರಲಿಲ್ಲ.

ಕೊನೆಗೆ ತನ್ನ ಹಳೆಯ ನಿರ್ಧಾರವನ್ನು ಹಿಂತೆಗೆದುಕೊಂಡಿರುವ ಮಂಡಳಿಯು ಕೇವಲ ಎರಡು ಸಣ್ಣ ಬದಲಾವಣೆಗಳೊಂದಿಗೆ ಚಿತ್ರವನ್ನು ಅಂಗೀಕರಿಸಲು ನಿರ್ಧರಿಸಿದೆ.

ಚಿತ್ರದ ಹೆಸರಿಗೆ ‘ಜಾನಕಿ’ ಎಂದು ಹೆಸರಿಸಿದ್ದಕ್ಕೆ ದೊಡ್ಡ ಆಕ್ಷೇಪ ವ್ಯಕ್ತವಾಗಿತ್ತು, ಏಕೆಂದರೆ ಈ ಹೆಸರು ಸೀತಾ ದೇವಿಯ ಹೆಸರಿನೊಂದಿಗೆ ಸಂಬಂಧ ಹೊಂದಿದೆ. ಲೈಂಗಿಕ ಕಿರುಕುಳ ಎದುರಿಸುತ್ತಿರುವ ಮಹಿಳೆಯ ಪಾತ್ರಕ್ಕೆ ‘ಜಾನಕಿ’ ಎಂಬ ಹೆಸರನ್ನು ಬಳಸುವುದು ಸೂಕ್ತವಲ್ಲ ಎಂದು ಸೆನ್ಸಾರ್ ಮಂಡಳಿ ಆಕ್ಷೇಪ ವ್ಯಕ್ತಪಡಿಸಿತು. ಈ ವಿಷಯಕ್ಕೆ ಸಂಬಂಧಿಸಿದಂತೆ ವಿಷಯವು ಕೇರಳ ಹೈಕೋರ್ಟ್‌ಗೆ ತಲುಪಿತು.

ಈ ಇಡೀ ವಿವಾದದಲ್ಲಿ, ಮುಂಬೈ ವಿಭಾಗವು ಚಿತ್ರಕ್ಕೆ ಆಕ್ಷೇಪ ವ್ಯಕ್ತಪಡಿಸಿದರೂ, ಕೇರಳ ವಿಭಾಗವು ಯಾವುದೇ ಬದಲಾವಣೆಗಳಿಲ್ಲದೆ ಚಿತ್ರವನ್ನು ಅಂಗೀಕರಿಸಿತು ಎನ್ನಲಾಗಿದೆ.

ಈ ಮಲಯಾಳಂ ಚಿತ್ರವನ್ನು ಪ್ರವೀಣ್ ನಾರಾಯಣನ್ ಬರೆದು ನಿರ್ದೇಶಿಸಿದ್ದಾರೆ ಮತ್ತು ಸುರೇಶ್ ಗೋಪಿ ಮತ್ತು ಅನುಪಮಾ ಪರಮೇಶ್ವರನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಈ ಚಿತ್ರದ ಕಥೆಯ ಬಗ್ಗೆ ಹೇಳುವುದಾದರೆ, ಕಾನೂನು ವಾದಗಳು ಮತ್ತು ಜೀವನದ ಜಂಜಾಟದಲ್ಲಿ ಸಿಲುಕಿರುವ ಜಾನಕಿಯ ಹೋರಾಟವು ಭಾರತೀಯ ನ್ಯಾಯ ವ್ಯವಸ್ಥೆಯ ನೈತಿಕ ಸಂದಿಗ್ಧತೆಗಳನ್ನು ಎದುರಿಸುತ್ತದೆ. ರೇಪ್ ಸಂತ್ರಸ್ತೆಯಾಗಿರುವ ಜಾನಕಿಗೆ ನ್ಯಾಯ ಸಿಗುತ್ತಾ ಅನ್ನೋದು ಕಥೆ.

ಜಾನಕಿ ವರ್ಸಸ್ ಕೇರಳ ಸ್ಟೇಟ್ ಸಿನಿಮಾ ಸದ್ಯ ಒಟಿಟಿಯಲ್ಲಿ ಲಭ್ಯವಿದೆ. ನೀವು ಇದನ್ನು ಝೀ 5 ನಲ್ಲಿ ಸುಲಭವಾಗಿ ನೋಡಬಹುದು. ಈಗಾಗಲೇ ನೋಡಿದ ಜನರಿಂದ ಉತ್ತಮ ಅಭಿಪ್ರಾಯ ಕೂಡ ಬಂದಿದೆ.

Source link

Leave a Reply

Your email address will not be published. Required fields are marked *