ಜಾನ್ವಿ ಕಪೂರ್ ಸಂಭಾವನೆ 6 ಕೋಟಿನಾ..? ಟಾಲಿವುಡ್‌ಗೆ ಬಂದು ಬಾಲಿವುಡ್‌ಗೆ ಟಾಟಾ ನಾ?

ಜಾನ್ವಿ ಕಪೂರ್ ಸಂಭಾವನೆ 6 ಕೋಟಿನಾ..? ಟಾಲಿವುಡ್‌ಗೆ ಬಂದು ಬಾಲಿವುಡ್‌ಗೆ ಟಾಟಾ ನಾ?

ಟಾಲಿವುಡ್‌ಗೆ ಹೊಸಬರಾದ ಜಾನ್ವಿ ಕಪೂರ್ ಒಂದೇ ಸಿನಿಮಾದಿಂದ ಸಂಭಾವನೆ ಭಾರಿ ಹೆಚ್ಚಿಸಿಕೊಂಡಿದ್ದಾರಂತೆ. ಜಾನ್ವಿ ಸಂಭಾವನೆ ಎಷ್ಟು ಅಂತ ಗೊತ್ತಾ?

ಟಾಲಿವುಡ್‌ನತ್ತ ಜಾನ್ವಿ ಕಣ್ಣು

ಬಾಲಿವುಡ್‌ನಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಜಾನ್ವಿ ಕಪೂರ್, ಈಗ ಟಾಲಿವುಡ್‌ನತ್ತ ಮುಖ ಮಾಡಿದ್ದಾರೆ. ನಟನೆ ಮತ್ತು ಗ್ಲಾಮರ್‌ನಲ್ಲಿ ಯಾವುದೇ ರಾಜಿಯಿಲ್ಲದ ಜಾನ್ವಿ, ಈಗ ಪ್ಯಾನ್ ಇಂಡಿಯಾ ಸ್ಟಾರ್ ಆಗುವತ್ತ ಹೆಜ್ಜೆ ಹಾಕಿದ್ದಾರೆ.

ಪ್ಯಾನ್ ಇಂಡಿಯಾ ಗುರಿ

ಪ್ಯಾನ್ ಇಂಡಿಯಾ ಮಟ್ಟದಲ್ಲಿ ಗುರುತಿಸಿಕೊಳ್ಳಲು ಯೋಜನೆ ರೂಪಿಸಿರುವ ಜಾನ್ವಿ, ಈಗಾಗಲೇ ಎನ್.ಟಿ.ಆರ್ ಜೊತೆ ‘ದೇವರ’ ಸಿನಿಮಾದಲ್ಲಿ ನಟಿಸಿದ್ದಾರೆ. ‘ದೇವರ’ ಯಶಸ್ಸಿನ ನಂತರ ಆಕೆಗೆ ಆಫರ್‌ಗಳ ಸುರಿಮಳೆಯೇ ಆಗಿದೆ.

ಸಂಭಾವನೆ ಏರಿಕೆ

’ದೇವರ’ ಚಿತ್ರಕ್ಕೆ 5 ಕೋಟಿ ಸಂಭಾವನೆ ಪಡೆದಿದ್ದ ಜಾನ್ವಿ, ಈಗ ಚರಣ್ ಜೊತೆಗಿನ ‘ಪೆದ್ದಿ’ ಚಿತ್ರಕ್ಕೆ 6 ಕೋಟಿ ಪಡೆಯುತ್ತಿದ್ದಾರೆ ಎನ್ನಲಾಗಿದೆ.

’ಪೆದ್ದಿ’ ಚಿತ್ರದ ತಾರಾಗಣ

’ಪೆದ್ದಿ’ ಚಿತ್ರವನ್ನು ಬುಚ್ಚಿಬಾಬು ಸನಾ ನಿರ್ದೇಶಿಸುತ್ತಿದ್ದು, ಶಿವರಾಜ್ ಕುಮಾರ್, ಜಗಪತಿ ಬಾಬು, ದಿವ್ಯೇಂದು ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಎ.ಆರ್. ರೆಹಮಾನ್ ಸಂಗೀತ ನೀಡುತ್ತಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲೂ ಜಾನ್ವಿ ಹವಾ

ಸಿನಿಮಾಗಳ ಜೊತೆಗೆ ಜಾಹೀರಾತು ಮತ್ತು ಸೋಶಿಯಲ್ ಮೀಡಿಯಾ ಮೂಲಕವೂ ಜಾನ್ವಿ ಗಳಿಕೆ ಮಾಡುತ್ತಿದ್ದಾರೆ. 2.6 ಕೋಟಿಗೂ ಹೆಚ್ಚು ಜನರು ಇನ್‌ಸ್ಟಾಗ್ರಾಮ್‌ನಲ್ಲಿ ಜಾನ್ವಿಯನ್ನು ಫಾಲೋ ಮಾಡುತ್ತಿದ್ದಾರೆ. ‘ಪೆದ್ದಿ’ ಚಿತ್ರ 2025 ರಲ್ಲಿ ತೆರೆಗೆ ಬರಲಿದೆ ಎನ್ನಲಾಗಿದೆ.

Source link

Leave a Reply

Your email address will not be published. Required fields are marked *