ಕಾಜಲ್ ನಟನೆಯ ‘ಮಾ’ ಚಿತ್ರದ ಬಾಕ್ಸ್ ಆಫೀಸ್ ಕಲೆಕ್ಷನ್ ಎಷ್ಟು..? ಕ್ರೇಜ್ ಹೇಗಿದೆ..?

ಕಾಜಲ್ ನಟನೆಯ ‘ಮಾ’ ಚಿತ್ರದ ಬಾಕ್ಸ್ ಆಫೀಸ್ ಕಲೆಕ್ಷನ್ ಎಷ್ಟು..? ಕ್ರೇಜ್ ಹೇಗಿದೆ..?




ಕಾಜಲ್ ನಟಿಸಿರೋ ‘ಮಾ’ ಹಾರರ್ ಸಿನಿಮಾ ಮೊದಲ ವಾರಾಂತ್ಯದಲ್ಲಿ ಚೆನ್ನಾಗಿ ದುಡ್ಡು ಮಾಡಿದೆ. ಮೊದಲ ದಿನ 4.65 ಕೋಟಿ ಗಳಿಸಿದ ಈ ಚಿತ್ರ, ಶನಿವಾರ 6 ಕೋಟಿ ಗಳಿಸಿತು. ಭಾನುವಾರದ ಗಳಿಕೆ ಸುಮಾರು 6.75 ಕೋಟಿ ಇದೆ. ಹೀಗಾಗಿ ಒಟ್ಟು ವಾರಾಂತ್ಯದ ಗಳಿಕೆ 17.40 ಕೋಟಿ ಆಗಿದೆ.<img>ಕಾಜಲ್ ನಟಿಸಿರೋ ‘ಮಾ’ ಹಾರರ್ ಸಿನಿಮಾಕ್ಕೆ ವಿಮರ್ಶಕರಿಂದ ಮತ್ತು ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಚಿತ್ರ ‘ಕಣ್ಣಪ್ಪ’, ‘ಸಿತಾರೆ ಜಮೀನ್ ಪರ್’ ಮತ್ತು ‘ಹೌಸ್ ಫುಲ್ 5’ ಚಿತ್ರಗಳ ಜೊತೆ ಸ್ಪರ್ಧೆ ಎದುರಿಸುತ್ತಿದೆ.<img>ಕಡಿಮೆ ಬಜೆಟ್ ನ ಸಿನಿಮಾ ಆಗಿರೋದ್ರಿಂದ ಈ ಚಿತ್ರಕ್ಕೆ ಮೊದಲ ದಿನ ಕಡಿಮೆ ಓಪನಿಂಗ್ ಸಿಕ್ಕಿದೆ. ಮೊದಲ ದಿನ 4.65 ಕೋಟಿ ಗಳಿಸಿದೆ. ಆದ್ರೆ ಕಡಿಮೆ ಬಜೆಟ್ ಸಿನಿಮಾಗಳಿಗೆ ಇದು ಚೆನ್ನಾಗಿ ಗಳಿಸಿದೆ ಅಂತಾನೆ ಹೇಳ್ಬಹುದು.<img>ಶನಿವಾರ, ಜೂನ್ 28 ರಂದು ಭಾರತದಲ್ಲಿ ₹6 ಕೋಟಿ ಗಳಿಸುವ ಮೂಲಕ 29.03% ಏರಿಕೆ ಕಂಡಿದೆ.<img>ಮೂರನೇ ದಿನ, ಅಂದ್ರೆ ಜೂನ್ 29 ರಂದು ಚಿತ್ರದ ಬೆಳಗಿನ ಪ್ರದರ್ಶನಗಳಲ್ಲಿ ಕಡಿಮೆ ಪ್ರೇಕ್ಷಕರಿದ್ದರು. ಇದರಿಂದ ವಾರಾಂತ್ಯದ ಗಳಿಕೆಯ ಮೇಲೆ ಪರಿಣಾಮ ಬೀರಬಹುದು. ಜೂನ್ 29, 2025 ರಂದು ‘ಮಾ’ ಚಿತ್ರದ ಒಟ್ಟು ಹಿಂದಿ ಪ್ರೇಕ್ಷಕರ ಪ್ರಮಾಣ 30.99% ದಾಖಲಾಗಿದೆ.<img>ಸ್ಯಾಕ್ನಿಲ್ಕ್ ಪ್ರಕಾರ, ಕಾಜಲ್ ಚಿತ್ರ ಮೂರನೇ ದಿನ ₹ 6.75 ಕೋಟಿ ಗಳಿಸಿದೆ (ಆರಂಭಿಕ ಅಂದಾಜು). ವೇಗ ಕಡಿಮೆ ಇದ್ದರೂ, ಭಾನುವಾರ ಆಗಿರೋದ್ರಿಂದ ಚಿತ್ರದಿಂದ ನಿರೀಕ್ಷೆ ಹೆಚ್ಚಿದೆ.<img>’ಮಾ’ ಹಾರರ್ ಚಿತ್ರದ 3 ದಿನಗಳ ಗಳಿಕೆ ₹ 17.40 ಕೋಟಿ.



Source link

Leave a Reply

Your email address will not be published. Required fields are marked *