ಭಾಷಾ ಕದನದ ಬೆಂಕಿಗೆ ತುಪ್ಪ ಸುರಿದ ನಟಿ: ಬಾಲಿವುಡ್​ನಿಂದ ನಟಿ ಕಾಜೋಲ್ ಬ್ಯಾನ್? | Kajol Refuses To Speak In Hindi Gets Angry At Reporter Gvd

ಭಾಷಾ ಕದನದ ಬೆಂಕಿಗೆ ತುಪ್ಪ ಸುರಿದ ನಟಿ: ಬಾಲಿವುಡ್​ನಿಂದ ನಟಿ ಕಾಜೋಲ್ ಬ್ಯಾನ್? | Kajol Refuses To Speak In Hindi Gets Angry At Reporter Gvd


ಬಾಲಿವುಡ್ ಬೆಡಗಿ ಕಾಜೋಲ್ ಮೇಲೆ ಹಿಂದಿ ಭಾಷಿಕರು ಸಿಟ್ಟಾಗಿದ್ದಾರೆ. ಇನ್ಮೇಲೆ ಬಾಲಿವುಡ್ ಸಿನಿಮಾ ಮಾಡಬೇಡಿ ಅಂತಿದ್ದಾರೆ. ಅಷ್ಟಕ್ಕೂ ಕಾಜೋಲ್ ಅಂಥದ್ದೇನು ಎಡವಟ್ಟು ಮಾಡಿಕೊಂಡ್ರು ಅಂತೀರಾ..? ಈ ಸ್ಟೋರಿ ನೋಡಿ. ಬಾಲಿವುಡ್ ಬೆಡಗಿ ಕಾಜೋಲ್ ಮೇಲೆ ಹಿಂದಿ ಭಾಷಿಕರು ಸಿಟ್ಟಾಗದ್ದಾರೆ. ಮೂರು ದಶಕದಿಂದ ಹಿಂದಿ ಸಿನಿಮಾಗಳಲ್ಲಿ ನಟನೆ ಮಾಡ್ತಾ ಬಂದಿರೋ ಕಾಜೋಲ್​ಗೆ ಇನ್ಮೆಲೆ ಹಿಂದಿ ಸಿನಿಮಾ ಮಾಡಲೇಬೇಡಿ ಅಂತಿದ್ದಾರೆ. ಅದಕ್ಕೆ ಕಾರಣನೇ ಈ ವಿಡಿಯೋ. ಕಳೆದ ಆಗಸ್ಟ್ 5 ರಂದು ಮುಂಬೈನಲ್ಲಿ ಮಹಾರಾಷ್ಟ್ರ ರಾಜ್ಯ ಚಲನಚಿತ್ರ ಪ್ರಶಸ್ತಿ ಸಮಾರಂಭ ಇತ್ತು. ಕಾಜೋಲ್ ತನ್ನ ತಾಯಿ, ಹಿರಿಯ ನಟಿ ತನುಜಾ ಅವರೊಂದಿಗೆ ಅಲ್ಲಿಗೆ ಬಂದಿದ್ರು. ಸಮಾರಂಭದಲ್ಲಿ ಕಾಜೋಲ್​ಗೆ ಮಹಾರಾಷ್ಟ್ರ ಸಿಎಂ ಸನ್ಮಾನ ಕೂಡ ಮಾಡಿದ್ರು. ಆ ಬಳಿಕ ಮಾಧ್ಯಮಗಳ ಮುಂದೆ ಕಾಜೋಲ್ ಮಾತನಾಡಿದ್ರು.

ಇಂಗ್ಲೀಶ್ ಮತ್ತು ಮರಾಠಿಯಲ್ಲಿ ಮಾತನಾಡಿದ ನಟಿಗೆ , ಮಾಧ್ಯಮ ಪ್ರತಿನಿಧಿಯೊಬ್ರು ಹಿಂದಿಯಲ್ಲಿ ಹೇಳಿಕೆ ನೀಡಿ ಅಂತ ಕೇಳಿದ್ದಾರೆ. ಅದಕ್ಕೆ ಸಿಟ್ಟಾದ ಕಾಜೋಲ್ ‘ಮತ್ತೆ ನಾನು ಹಿಂದಿನಲ್ಲಿ ಮಾತನಾಡಬೇಕಾ , ಅರ್ಥಮಾಡಿಕೊಳ್ಳಲು ಬಯಸುವವರು ಅರ್ಥಮಾಡಿಕೊಳ್ಳುತ್ತಾರೆ. ಅಂತ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಕಾಜೋಲ್ ಮಾತನಾಡಿದ ರೀತಿ ಸಹಜವಾಗೇ ಹಿಂದಿ ಭಾಷಿಕರಿಗೆ ನೋವು ತಂದಿದೆ. ಕಾಜೋಲ್ ಸಿನಿಲೋಕಕ್ಕೆ ಬಂದಿದ್ದೇ ಹಿಂದಿ ಸಿನಿಮಾಗಳಿಂದ, ಹಣ ಕೀರ್ತಿ ಸಂಪಾದಿಸಿದ್ದು ಹಿಂದಿ ಸಿನಿಮಾಗಳಿಂದ. ಆದ್ರೆ ಈಗ ಇವರಿಗೆ ಹಿಂದಿ ಅಂದ್ರೆ ಇಷ್ಟು ಸಸಾರವಾಯ್ತಾ ಅಂತ ಜನ ಪ್ರಶ್ನೆ ಮಾಡ್ತಾ ಇದ್ದಾಗೆ. ಇನ್ಮೇಲೆ ಹಿಂದಿ ಸಿನಿಮಾ ಮಾಡಬೇಡಿ ಅಂತ ಕಾಮೆಂಟ್ ಮಾಡ್ತಾ ಇದ್ದಾರೆ. ಮಹಾರಾಷ್ಟ್ರದಲ್ಲಿ ಮರಾಠಿ vs ಹಿಂದಿ ವಾರ್ ನಡಿತಿರೋ ಟೈಂನಲ್ಲೇ ಕಾಜೋಲ್​ ಬೇರೆ ಈ ಭಾಷಾಬೆಂಕಿಗೆ  ತುಪ್ಪ ಸುರಿದಿದ್ದಾರೆ.



Source link

Leave a Reply

Your email address will not be published. Required fields are marked *