ಆ ಕ್ಷಣದಲ್ಲಿ ಏನೋ ಒಂದು ಹೇಳಿ ನಟಿ ಅನುಶ್ರೀ ಅವರು ಜಾರಿಕೊಳ್ಳುತ್ತಿದ್ದರು. ಹಲವು ವರ್ಷಗಳನ್ನು ಈ ಆಂಕರ್ ಹೀಗೆಯೇ ಕಳೆದಿದ್ದರು. ಆದರೆ ಈ ವರ್ಷದ ಪ್ರಾರಂಭದಿಂದಲೇ ಅನುಶ್ರೀ ಅವರು ತಾವು ಮದುವೆಯಾಗುವ ಮುನ್ಸೂಚನೆ ಕೊಟ್ಟಿದ್ದರು.

ಕನ್ನಡದ ಖ್ಯಾತ ನಿರೂಪಕಿ ಅನುಶ್ರೀ (Anchor Anushree) ಅವರ ಮದುವೆ ಆಮಂತ್ರಣ ಪತ್ರಿಕೆ ಹೊರಬಿದ್ದಿದೆ. ಈಗಾಗಲೇ ಈ ನ್ಯೂಸ್ ಕರ್ನಾಟಕದ ಮನೆಮನೆಗಳಲ್ಲೂ ಹರಡಿ ಒಂಥರಾ ಹಬ್ಬದ ಸಂಭ್ರಮ ಸೃಷ್ಟಿಸಿದೆ.

ಆದರೆ, ಅನುಶ್ರೀ ಅಭಿಮಾನಿಗಳಿಗೆ ಮದುವೆ ಆಮಂತ್ರಣ ಪತ್ರ ನೋಡುವ ಭಾಗ್ಯ ಸಿಕ್ಕಿದೆಯೋ ಇಲ್ಲವೋ ಗೊತ್ತಿಲ್ಲ. ಆದರೆ, ಅನುಶ್ರೀ ಇನ್ವಿಟೇಶನ್ ಹೊರಜಗತ್ತಿಗೆ ಅನಾವರಣವಂತೂ ಆಗಿದೆ.

ನೀವೇನಾದ್ರೂ ಆಂಕರ್ ಅನುಶ್ರೀ ಫ್ಯಾನ್ ಆಗಿದ್ರೆ ಇಲ್ಲಿದೆ ನೋಡಿ ಆಮಂತ್ರಣ ಪತ್ರಿಕೆ! ಸಿಂಪಲ್ ಆಗಿ ಕಾಣುವ ಮದುವೆ ಆಮಂತ್ರಣ ಪತ್ರಿಕೆ ತುಂಬಾ ಆಕರ್ಷಕವಾಗಿದೆ.

ಹೌದು, ನಟಿ, ನರೂಪಕಿ ಅನುಶ್ರೀ ಮದುವೆ ಬಗ್ಗೆ ಅವರಿಗಿಂತಲೂ ಹೆಚ್ಚಾಗಿ ಬೇರೆ ಹಲವರಿಗೆ ತಲೆಬಿಸಿ ಆಗಿತ್ತು ಎನ್ನಬಹುದು. ಅನುಶ್ರೀ ಅವರು ಹೋದಲ್ಲಿ ಬಂದಲ್ಲಿ, ಕುಂತಲ್ಲಿ ನಿಂತಲ್ಲಿ ಎಲ್ಲೇ ಹೋದ್ರೂ ಅವರ ಮದುವೆ ಬಗ್ಗೆಯೇ ಪ್ರಶ್ನೆಯೇ ಎದುರಾಗುತ್ತಿತ್ತು.

ಆ ಕ್ಷಣದಲ್ಲಿ ಏನೋ ಒಂದು ಹೇಳಿ ನಟಿ ಅನುಶ್ರೀ ಅವರು ಜಾರಿಕೊಳ್ಳುತ್ತಿದ್ದರು. ಹಲವು ವರ್ಷಗಳನ್ನು ಈ ಆಂಕರ್ ಹೀಗೆಯೇ ಕಳೆದಿದ್ದರು. ಆದರೆ ಈ ವರ್ಷದ ಪ್ರಾರಂಭದಿಂದಲೇ ಅನುಶ್ರೀ ಅವರು ತಾವು ಮದುವೆಯಾಗುವ ಮುನ್ಸೂಚನೆ ಕೊಟ್ಟಿದ್ದರು.

ಆ ಬಳಿಕ, ಅಂದರೆ ಕಳೆದ ತಿಂಗಳು ಆಂಕರ್ ಅನುಶ್ರೀ ಮದುವೆ ಸುದ್ದಿ ಮೊದಲು ಗಾಸಿಪ್ ರೂಪ ಪಡೆದು ಹೊರಬಿತ್ತು. ಆ ಬಳಿಕ ಸ್ವತಃ ಅನುಶ್ರೀ ಅವರೇ ತಮ್ಮ ಮದುವೆ ಫಿಕ್ಸ್ ಆಗಿರೋ ಬಗ್ಗೆ ಅಧೀಕೃತವಾಗಿ ಮಾಹಿತಿ ನೀಡಿದ್ದಾರೆ.

ಇದೀಗ ನಟಿ ನಿರೂಪಕಿ ಅನುಶ್ರೀ ಸುದ್ದಿ ಆಮಂತ್ರಣ ಪತ್ರಿಕೆ ಮೂಲಕವೇ ಮಾಧ್ಯಮಗಳಿಗೆ ತಲುಪಿವೆ. ಇದೇ ತಿಂಗಳು 28ಕ್ಕೆ ಅನುಶ್ರೀ ಮದುವೆ ಬೆಂಗಳೂರಿನ ಕಗ್ಗಲಿಪುರದಲ್ಲಿ ನಡೆಯಲಿದೆ. ಅನುಶ್ರೀ ಕೈಹಿಡಯಲಿರುವ ವರ ಕೊಡಗು ಮೂಲದ ರೋಶನ್.

ಒಟ್ಟಿನಲ್ಲಿ, ತಮ್ಮ ಮದುವೆ ಟೈಂನಲ್ಲಿ ಅನುಶ್ರೀ ಅವರು ಬಣ್ಣಬಣ್ಣದ ಬಟ್ಟೆ ತೊಟ್ಟು ಅಂದಚೆಂದದ ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ. ಇಲ್ಲಿವೆ ಅನುಶ್ರೀಯವರ ಮುದ್ದುಮುದ್ದಾದ ಚೆಂದದ ಫೋಟೋಗಳು, ನೋಡಿ…

Source link
ಅನುಶ್ರೀಗೆ ‘ಭಲೆ ಭಲೆ ಚೆಂದದ ಚೆಂದುಳ್ಳಿ ಹೆಣ್ಣು ನೀನು’ ಎಂದು ರೋಶನ್ ಹೇಳಿದ್ದು ಇದ್ರಲ್ಲಿ ಯಾವ ಫೋಟೋ ನೋಡಿ?