ಇತ್ತೀಚೆಗೆ ಆರ್ಸಿಬಿ ವಿಜಯೋತ್ಸವ ಸಂದರ್ಭದಲ್ಲಿ ಉಂಟಾದ ಕಾಲ್ತುಳಿತದ ಬಳಿಕ ಚಿನ್ನಸ್ವಾಮಿ ಸ್ಟೇಡಿಯಂ ಬೆಂಗಳೂರಿನಿಂದ ಹೊರವಲಯಕ್ಕೆ ಸ್ಥಳಾಂತರಿಸುವ ಬಗ್ಗೆ ಚರ್ಚೆಯಾಗುತ್ತಿದೆ. ಇದರ ಬೆನ್ನಲ್ಲೇ ಹೊಸ ಸ್ಟೇಡಿಯಂ ನಿರ್ಮಾಣಕ್ಕೆ ಕರ್ನಾಟಕ ಸಿಎಂ ಸಿದ್ದರಾಮಯ್ಯ ಸಮ್ಮತಿ ನೀಡಿದ್ದಾರೆ. ಈ ಸ್ಟೇಡಿಯಂ ವಿಶೇಷತೆ ಏನು?

ಬೆಂಗಳೂರಿನ ಹೊರವಲಯದ ಬೊಮ್ಮಸಂದ್ರದ ಬಳಿ ಸೂರ್ಯ ನಗರದಲ್ಲಿ 100 ಎಕರೆ ಜಾಗದಲ್ಲಿ 1650 ಕೋಟಿ ರುಪಾಯಿ ವೆಚ್ಚದಲ್ಲಿ ಅಂತಾರಾಷ್ಟ್ರೀಯ ಸ್ಟೇಡಿಯಂ ನಿರ್ಮಾಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಮ್ಮತಿ ಸೂಚಿಸಿದ್ದಾರೆ.

ಈ ಕ್ರೀಡಾಂಗಣವನ್ನು ಕರ್ನಾಟಕ ಗೃಹ ಮಂಡಳಿಯಿಂದ ನಿರ್ಮಿಸಲಾಗುತ್ತದೆ. ಇದಕ್ಕೆ ರಾಜ್ಯ ಸರ್ಕಾರ ಆರ್ಥಿಕ ನೆರವು ನೀಡುವುದಿಲ್ಲ. ಎಲ್ಲಾ ಖರ್ಚನ್ನು ಗೃಹ ಮಂಡಳಿಯೇ ನೋಡಿಕೊಳ್ಳಲಿದೆ. ಇದರ ಜತೆಗೆ ನಿರ್ವಹಣೆಯನ್ನೂ ಗೃಹ ಮಂಡಳಿಯೇ ಮಾಡಲಿದೆ.

ಈ ಹೊಸ ಸ್ಟೇಡಿಯಂ 80,000 ಆಸನ ಸಾಮರ್ಥ್ಯವನ್ನು ಹೊಂದಿದ್ದು, ಭಾರತದ ಎರಡನೇ ಅತಿದೊಡ್ಡ, ಒಟ್ಟಾರೆ ಮೂರನೇ ದೊಡ್ಡ ಆಸನ ಸಾಮರ್ಥ್ಯ ಹೊಂದಿದ ಸ್ಟೇಡಿಯಂ ಇದಾಗಲಿದೆ.

ಸದ್ಯ ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂ(1,32,000), ಮೆಲ್ಬರ್ನ್ ಕ್ರಿಕೆಟ್ ಸ್ಟೇಡಿಯಂ(1,00,000) ಬಳಿಕ ಬೆಂಗಳೂರಿನ ಸ್ಟೇಡಿಯಂ(80,000) ಮೂರನೇ ಸ್ಥಾನ ಪಡೆಯಲಿದೆ.

100 ಎಕರೆ ವಿಸ್ತೀರ್ಣದಲ್ಲಿ ತಲೆ ಎತ್ತಲಿರುವ ನೂತನ ಸ್ಪೋರ್ಟ್ಸ್ ಕಾಂಪ್ಲೆಕ್ಸ್ನಲ್ಲಿ 8 ಹೊರಾಂಗಣ ಸ್ಟೇಡಿಯಂ ಹಾಗೂ 8 ಒಳಾಂಗಣ ಕ್ರೀಡೆಗಳ ಸ್ಟೇಡಿಯಂ ಇರಲಿದೆ.

ಅಂತಾರಾಷ್ಟ್ರೀಯ ಕ್ರೀಡಾಪಟುಗಳಿಗೆ ಅತಿಥಿಗೃಹ, ಜಿಮ್, ಈಜುಕೊಳ, ರೆಸ್ಟೋರೆಂಟ್ ಹಾಗೂ ಇಂಟರ್ನ್ಯಾಷನಲ್ ಸೆಮಿನಾರ್ ಹಾಲ್ಗಳನ್ನು ಒಳಗೊಂಡಿರಲಿದೆ.

ಬೆಂಗಳೂರಿನ ಹೊರವಲಯದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಈ ಹೊಸ ಕ್ರಿಕೆಟ್ ಸ್ಟೇಡಿಯಂ, ಸದ್ಯ ಚಿನ್ನಸ್ವಾಮಿ ಸ್ಟೇಡಿಯಂನಿಂದ 28 ಕಿಲೋಮೀಟರ್ ದೂರದಲ್ಲಿದೆ.

Source link
ಬೆಂಗಳೂರಲ್ಲಿ ವಿಶ್ವದ 3ನೇ ಅತಿದೊಡ್ಡ ಸ್ಟೇಡಿಯಂ ನಿರ್ಮಾಣಕ್ಕೆ ಸಿದ್ದರಾಮಯ್ಯ ಒಪ್ಪಿಗೆ! ಏನಿದರ ವಿಶೇಷತೆ?