ಕಿಚ್ಚ ಸುದೀಪ್ ಬಗ್ಗೆ ಅಭಿಮಾನಿಗಳದ್ದು ಒಂದೇ ಕಂಪ್ಲೆಂಟ್. ಇತ್ತೀಚಿಗೆ ಸುದೀಪ್ ತುಂಬಾ ತಡವಾಗಿ ಸಿನಿಮಾ ಮಾಡ್ತಾ ಇದ್ದಾರೆ ಅನ್ನೋದು. ವಿಕ್ರಾಂತ್ ರೋಣ ಬಳಿಕ ಎರಡೂವರೇ ವರ್ಷದ ಗ್ಯಾಪ್ ಬಳಿಕ ಮ್ಯಾಕ್ಸ್ ರಿಲೀಸ್ ಆಗಿತ್ತು. ಮತ್ತೀಗ ಬಿಲ್ಲ ರಂಗ ಭಾಷ ಅನ್ನೋ ಮೆಗಾಪ್ರಾಜೆಕ್ಟ್ ಮಾಡ್ತಿರೋ ಸುದೀಪ್ ಇನ್ನೆಷ್ಟು ವರ್ಷ ಕಾಯಿಸ್ತಾರೋ ಗೊತ್ತಿಲ್ಲ ಅಂತ ಫ್ಯಾನ್ಸ್ ಬೇಸರಿಸಿಕೊಂಡಿದ್ದಾರೆ. ಹೀಗೆ ಬೇಸರ ಮಾಡಿಕೊಂಡಿರೋ ಫ್ಯಾನ್ಸ್ಗಾಗಿ ಸುದೀಪ್ ಒಂದು ಮೆಗಾಸರ್ಪ್ರೈಸ್ ಕೊಡ್ತಾ ಇದ್ದಾರೆ. ಕಿಚ್ಚ ಸುದೀಪ್ ಫ್ಯಾನ್ಸ್ಗೆ ಒಂದು ಖುಷಿಯ ಸುದ್ದಿ ಇಲ್ಲಿದೆ. ಸದ್ಯ ಸುದೀಪ್ ಬಿಲ್ಲ ರಂಗ ಬಾಷ ಅನ್ನೋ ಆಕ್ಷನ್ ಫ್ಯಾಂಟಸಿ ಮೂವಿ ಮಾಡ್ತಾ ಇರೋ ವಿಷ್ಯ ಗೊತ್ತೇ ಇದೆ. ವಿಕ್ರಾಂತ್ ರೋಣ ಡೈರೆಕ್ಟರ್ ಅನೂಪ್ ಭಂಡಾರಿ ಡೈರೆಕ್ಟ್ ಮಾಡ್ತಾ ಇರೋ ಸಿನಿಮಾದ ಶೂಟಿಂಗ್ ಭರದಿಂದ ನಡೀತಾ ಇದೆ.
ಇದೊಂದು ದೊಡ್ಡ ಕ್ಯಾನ್ವಾಸ್ನ ಸಿನಿಮಾ ಆಗಿದ್ದು ಇದಕ್ಕಾಗಿ ಭರ್ಜರಿ ಸೆಟ್ಗಳನ್ನ ಹಾಕಲಾಗಿದೆ. ಚಿತ್ರದಲ್ಲಿ ದೊಡ್ಡಮಟ್ಟದ ವಿಎಫ್ಎಕ್ಸ್ ಕೆಲಸ ಕೂಡ ಇದೆ. ಸೋ ಬಿಲ್ಲ ರಂಗ ಬಾಷ ಈ ವರ್ಷ ತೆರೆಗೆ ಬರೋದು ಅಸಾಧ್ಯ. ಕಿಚ್ಚನ ಈ ಮೆಗಾಪ್ರಾಜೆಕ್ಟ್ ತೆರೆ ಮೇಲೆ ನೋಡ್ಲಿಕ್ಕೆ ನೀವು ಕಾಯಲೇಬೇಕು. ಅಲ್ಲಿಗೆ ಕಿಚ್ಚ ಮತ್ತಷ್ಟು ಕಾಲ ಕಾಯಿಸ್ತಾರೋ ಅಂತ ಫ್ಯಾನ್ಸ್ ಬೇಸರ ಮಾಡಿಕೊಂಡಿದ್ರು. ಅಂಥವರಿಗಾಗೇ ಕಿಚ್ಚ ಒಂದು ಸರ್ಪ್ರೈಸ್ ಇಟ್ಟುಕೊಂಡಿದ್ದಾರೆ. ಬಿಲ್ಲ ರಂಗ ಭಾಷಾ ಜೊತೆ ಜೊತೆಗೆ ಇನ್ನೊಂದು ಸಿನಿಮಾವನ್ನ ಶರವೇಗದಲ್ಲಿ ಮಾಡಿ ತೆರೆ ಮೇಲೆ ತರಲಿಕ್ಕೆ ಪ್ಲಾನ್ ಮಾಡಿದ್ದಾರೆ. ಹೌದು ಕಳೆದ ವರ್ಷಾಂತ್ಯಕ್ಕೆ ಬಂದ ಮ್ಯಾಕ್ಸ್ ಮೂವಿ ಅದೆಂಥಾ ಸಕ್ಸಸ್ ಕಾಣ್ತು ಅನ್ನೋದು ಗೊತ್ತೇ ಇದೆ.
ವಿಜಯ್ ಕಾರ್ತಿಕೇಯ ಡೈರೆಕ್ಟ್ ಮಾಡಿದ್ದ ಈ ಮೂವಿನಲ್ಲಿ ಸುದೀಪ್ ಹಿಂದೆಂದಿಗಿಂತಲೂ ಸಖತ್ ಸ್ಟೈಲಿಶ್ ಅಂಡ್ ರಗಡ್ ಆಗಿ ಮಿಂಚಿದ್ರು. ಒಂದೇ ರಾತ್ರಿಯಲ್ಲಿ ನಡೆಯೋ ಈ ಆಕ್ಚನ್ ಥ್ರಿಲ್ಲರ್ ಕಥೆ ಫ್ಯಾನ್ಸ್ಗೆ ಮ್ಯಾಕ್ಸಿಮಮ್ ಥ್ರಿಲ್ ಕೊಟ್ಟಿತ್ತು. ಖುದ್ದು ಸುದೀಪ್ ಕೂಡ ಮ್ಯಾಕ್ಸ್ ಡೈರೆಕ್ಟರ್ ಕೆಲಸವನ್ನ ಮೆಚ್ಚಿಕೊಂಡಿದ್ರು. ಇದೀಗ ಮ್ಯಾಕ್ಸ್ ನಿರ್ದೇಶಕ ವಿಜಯ್ ಕಾರ್ತಿಕೇಯನ್ ಜೊತೆಗೆ ಇನ್ನೊಂದು ಸಿನಿಮಾ ಮಾಡ್ತಾ ಇದ್ದಾರೆ. ಅಸಲಿಗೆ ಮ್ಯಾಕ್ಸ್ ಸಕ್ಸಸ್ ಆದ ಮೇಲೆ ಇದರ ಪ್ರೀಕ್ವೆಲ್ ಮಾಡೋ ಮಾತುಕಥೆಗಳು ನಡೆದಿದ್ವು. ಅರ್ಜುನ್ ಮಹಾಕ್ಷಯ್ ಅಲಿಯಾಸ್ ಮ್ಯಾಕ್ಸ್ ಯಾರು..?
ಅವನ ಹಿನ್ನೆಲೆ ಏನು ಅನ್ನೋ ಎಳೆ ಇಟ್ಟುಕೊಂಡು ವಿಜಯ್ ಕಾರ್ತಿಕೇಯನ್ ಸ್ಕ್ರಿಪ್ಟ್ ಮಾಡೋದಕ್ಕೆ ಮುಂದಾಗಿದ್ರು. ಆದ್ರೆ ಈ ಸ್ಕ್ರಿಪ್ಟ್ ಮಾಡೋದಕ್ಕೂ ಒಂದಿಷ್ಟು ಸಮಯ ಬೇಕು. ಅದಕ್ಕೆ ಬದಲು ರೆಡಿ ಇರೋ ಒಂದು ಸ್ಕ್ರಿಪ್ಟ್ನ ಇಟ್ಟುಕೊಂಡು ಕಿಚ್ಚ-ವಿಜಯ್ ಕಾರ್ತಿಕೇಯನ್ ಸಿನಿಮಾ ಶುರು ಮಾಡಿದ್ದಾರಂತೆ. ಇದೂ ಕೂಡ ಮ್ಯಾಕ್ಸ್ ಮಾದರಿಯ ಥ್ರಿಲ್ಲರ್ ಸಬ್ಜೆಕ್ಟ್ ಆಗಿದ್ದು, ಬಿಲ್ಲ ರಂಗ ಬಾಷ ಶೂಟಿಂಗ್ ಜೊತೆ ಜೊತೆಗೆ ಇದರ ಶೂಟಿಂಗ್ ಕೂಡ ನಡೆಯಲಿದೆಯಂತೆ. ಸೋ ಬಿಲ್ಲ ರಂಗ ಬಾಷಗೂ ಮೊದಲೇ ಈ ಸಿನಿಮಾ ಬರಲಿದೆ. ಅಲ್ಲಿಗೆ ಫ್ಯಾನ್ಸ್ಗೆ ಕಿಚ್ಚನ ಕಡೆಯಿಂದ ಮನರಂಜನೆಯ ಡಬಲ್ ಡೋಸ್ ಸಿಗಲಿದೆ.