
ಅಡುಗೆ ರುಚಿ, ಪರಿಮಳ, ಮತ್ತು ಆಕರ್ಷಕವಾಗಿ ಮಾಡುವ ಸಲಹೆಗಳು. ಹಿಟ್ಟು ಹುಳಿ ಆದ್ರೆ? ಬಾಳೆಹಣ್ಣು ಕಪ್ಪಾಗುತ್ತಿದೆಯೇ? ಅಡುಗೆ ಸಮಯದ ಸ್ಮಾರ್ಟ್ ಟ್ರಿಕ್ಸ್ ಇಲ್ಲಿವೆ.<img>ದಿನಾ ಅಡುಗೆ ಮಾಡ್ತಿದ್ರೂ, ಸಣ್ಣಪುಟ್ಟ ಟಿಪ್ಸ್ ಅಡುಗೆ ರುಚಿ ಹೆಚ್ಚಿಸುತ್ತೆ. ಸ್ಮಾರ್ಟ್ ಟಚ್ ಅಡುಗೆಗೆ ವಿಶೇಷ ಮೆರುಗು ನೀಡುತ್ತೆ. ರುಚಿ, ಪರಿಮಳ ಮಾತ್ರವಲ್ಲ, ತಿಂದಮೇಲಿನ ಅನುಭವವೂ ಅದ್ಭುತ.<img>ರಸಂ ಮಾಡುವಾಗ ಚಿಟಿಕೆ ಬೆಲ್ಲ ಹಾಕಿದ್ರೆ ರುಚಿ ಹೆಚ್ಚುತ್ತೆ. ಪಾಲಕ್ ರುಬ್ಬಿದ ನಂತರ ಚಿಟಿಕೆ ಅರಿಶಿನ ಹಾಕಿದ್ರೆ ಸುವಾಸನೆ ಬರುತ್ತೆ, ಹಸಿವು ಹೆಚ್ಚಿಸುತ್ತೆ.<img>ಬಾಳೆಹಣ್ಣು ಕಪ್ಪಾಗದಿರಲು ತೇವ ಬಟ್ಟೆಯಲ್ಲಿ ಸುತ್ತಿಡಿ. ಹೆಚ್ಚಿದ ತರಕಾರಿ ಕಪ್ಪಾಗದಿರಲು ನೀರಿಗೆ ಸ್ವಲ್ಪ ಹಾಲು ಮಿಶ್ರಣ ಮಾಡಿ ಅದರಲ್ಲಿಡಿ.<img>ಆಲೂಗಡ್ಡೆ ಬೇಯಿಸುವಾಗ ಉಪ್ಪು, ಎಣ್ಣೆ ಹಾಕಿದರೆ ಒಡೆಯುವುದಿಲ್ಲ. ಮೆಂತ್ಯ ಸೂಪ್ ಮಾಡುವಾಗ ಮೊದಲೇ ಉಪ್ಪು ಹಾಕಿದರೆ ಕಹಿ ರುಚಿ ಬರುವುದಿಲ್ಲ.<img>ಕೊಬ್ಬರಿ ತುರಿಯನ್ನು ಗಾಳಿಯಾಡದ ಡಬ್ಬದಲ್ಲಿಡಿ. ಹುರಿದ ಪದಾರ್ಥಗಳ ಮೇಲೆ ಕೊಬ್ಬರಿ ಎಣ್ಣೆ ಚಿಮುಕಿಸಿದರೆ ರುಚಿ, ಪರಿಮಳ ಹೆಚ್ಚುತ್ತೆ.<img>ಪೂರಿ ಮೃದುವಾಗಿರಲು ಗೋಧಿ ಹಿಟ್ಟಿಗೆ ರವೆ ಸೇರಿಸಿ. ಇನ್ಸ್ಟಂಟ್ ದೋಸೆಗೆ ಅಕ್ಕಿಯನ್ನು ಮಜ್ಜಿಗೆಯಲ್ಲಿ ನೆನೆಸಿ ರುಬ್ಬಿ.<img>ದಿನನಿತ್ಯದ ಅಡುಗೆ ಟಿಪ್ಸ್. ಇವುಗಳಿಂದ ಸಮಯ ಉಳಿತಾಯ, ರುಚಿ ಹೆಚ್ಚಳ, ಆಕರ್ಷಕ ಪ್ರೆಸೆಂಟೇಶನ್. ಸುವಾಸನೆ, ದುರ್ವಾಸನೆ ನಿವಾರಣೆ, ಸಂಗ್ರಹ, ಹಿಟ್ಟಿನ ಸಾಂದ್ರತೆ – ಎಲ್ಲದಕ್ಕೂ ಸುಲಭ ಪರಿಹಾರ.
Source link
ಅಡುಗೆಮನೆ ಟಿಪ್ಸ್: ರುಚಿ ಹೆಚ್ಚಿಸುವ ಸೂತ್ರಗಳು