ಕಾರು ಪರ್ಚೇಸ್​ ಮಾಡಲು ರೀಲ್ಸ್​ ಮಾಡಲು ಹೋದ ‘ಮಹಾನಟಿ’ ಗಗನಾ ಸ್ಥಿತಿ ಏನಾಯ್ತು ನೋಡಿ!

ಕಾರು ಪರ್ಚೇಸ್​ ಮಾಡಲು ರೀಲ್ಸ್​ ಮಾಡಲು ಹೋದ ‘ಮಹಾನಟಿ’ ಗಗನಾ ಸ್ಥಿತಿ ಏನಾಯ್ತು ನೋಡಿ!

ಕಾರು ಪರ್ಚೇಸ್​ ಮಾಡಲು ರೀಲ್ಸ್​ ಮಾಡಲು ಹೋದ ‘ಮಹಾನಟಿ’ ಗಗನಾ ಸ್ಥಿತಿ ಏನಾಯ್ತು ನೋಡಿ!

ಕಾರು ಪರ್ಚೇಸ್​ ಮಾಡಲು ರೀಲ್ಸ್​ ಮಾಡಲು ಹೋದ ‘ಮಹಾನಟಿ’ ಗಗನಾ ಸ್ಥಿತಿ ಏನಾಯ್ತು ನೋಡಿ! ಈ ಬಗ್ಗೆ ನಟಿ ಹೇಳಿದ್ದೇನು? ಇಲ್ಲಿದೆ ಅದರ ವಿಡಿಯೋ…

ಇದಾಗಲೇ ಹಲವರು ಸೋಷಿಯಲ್​ ಮೀಡಿಯಾಗಳಿಂದ ಲಕ್ಷಾಧಿಪತಿ ಅಷ್ಟೇ ಏಕೆ ಕೋಟ್ಯಧಿಪತಿಗಳೂ ಆಗಿದ್ದಾರೆ. ಅದರಲ್ಲಿಯೂ ಸೆಲೆಬ್ರಿಟಿಗಳು ಸೋಷಿಯಲ್​ ಮೀಡಿಯಾಗಳಿಂದಲೇ ಕೋಟಿಗಟ್ಟಲೆ ಸಂಪಾದನೆಯನ್ನೂ ಮಾಡುತ್ತಿದ್ದಾರೆ. ಅದಕ್ಕೆ ಕಾರಣ, ಅವರು ಹಾಕುವ ರೀಲ್ಸ್​ಗಳಿಂದ, Youtube Videoಗಳಿಂದ ವ್ಯೂವ್ಸ್​ ಹೆಚ್ಚಾಗುತ್ತಿದ್ದಂತೆಯೇ ಜಾಹೀರಾತು ಕಂಪೆನಿಗಳು ತಮ್ಮ ಪ್ರಾಡಕ್ಟ್​ಗಳನ್ನು ಇವರ ಕೈಯಿಂದಲೇ ಪ್ರಚಾರ ಮಾಡಿ ಲಕ್ಷ ಲಕ್ಷ ದುಡ್ಡು ಕೊಡುತ್ತವೆ. ಆದ್ದರಿಂದ ಸೆಲೆಬ್ರಿಟಿಗಳು ಮಾತ್ರವಲ್ಲದೇ ರೀಲ್ಸ್​ ಮೂಲಕವೇ ಈ ರೀತಿಯ ಸಂಪಾದನೆ ಮಾಡುತ್ತಿರುವವರು ಹಲವರು ಇದ್ದಾರೆ.

ಚಿಕ್ಕಪುಟ್ಟ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ, ಫಾಲೋವರ್ಸ್​, ವ್ಯೂವರ್ಸ್​, ಲೈಕ್ಸ್​, ಕಮೆಂಟ್ಸ್ ಆಧಾರದ ಮೇಲೆ ಜಾಹೀರಾತು ಕಂಪೆನಿಗಳಿಂದ ಸಕತ್​ ಆದಾಯ ಮಾಡುವವರು ಇದ್ದಾರೆ. ಹಾಗೆಂದು ಇದು ಎಲ್ಲರಿಗೂ ಒಲಿಯುವ ಕಲೆಯಲ್ಲ. ಅದೃಷ್ಟ ಎನ್ನುವುದು ಇರಲೇಬೇಕು. ಇಲ್ಲದಿದ್ದರೆ ಎಷ್ಟು ಒಳ್ಳೆಯ ಕಂಟೆಂಟ್​ ಕೊಟ್ಟರೂ, ಕೈಕಾಲು ಹಿಡಿದರೂ ನೂರು ವ್ಯೂವ್ಸ್​ ಆಗುವುದಿಲ್ಲ, ಅದೇ ದೇಹ ಪ್ರದರ್ಶನ ಮಾಡಿ ಮೈಕೈ ಅಲ್ಲಾಡಿಸಿದರೆ ಕೋಟಿ ಕೋಟಿ ವ್ಯೂವ್ಸ್​ ಆಗುವುದೂ ಇದೆ. ಹೀಗೆಯೇ ಎಂದು ಹೇಳಲು ಆಗುವುದಿಲ್ಲ. ಎಲ್ಲಾ ನಟ-ನಟಿಯರ ಕೈಯನ್ನು ಇದು ಹಿಡಿಯುತ್ತದೆ ಎನ್ನುವುದೂ ಕಷ್ಟ.

ಅದೇ ರೀತಿಯ ಮಾತನ್ನಾಡಿದ್ದಾರೆ ಮಹಾನಟಿ, ಭರ್ಜರಿ ಬ್ಯಾಚುಲರ್ಸ್​ ಮೂಲಕ ಮನೆಮಾತಾಗಿರುವ ನಟಿ ಗಗನಾ. ಅಷ್ಟಕ್ಕೂ ಗಗನಾ ಎಂದರೆ ಟಿವಿ ಪ್ರಿಯರಿಗೆ ಹೊಸ ಹೆಸರೇನಲ್ಲ. ‘ಭರ್ಜರಿ ಬ್ಯಾಚುಲರ್ಸ್ ಸೀಸನ್‌ 2’ನಲ್ಲಿ ಡ್ರೋನ್​ ಪ್ರತಾಪ್​ ಮತ್ತು ಗಗನಾ ಸಕತ್​ ಹವಾ ಸೃಷ್ಟಿಸಿದ್ದರು. ಆದರೆ ಕೊನೆಗೆ ಗೆಲುವು ಸುನೀಲ್ ಹಾಗೂ ಅಮ್ರಿಟಾ ಜೋಡಿಯದ್ದಾಯಿತು. ಮೂರನೇ ಸ್ಥಾನವನ್ನು ಅಂದರೆ ಎರಡನೆಯ ರನ್ನರ್​ ಅಪ್​ ಆಗಿದೆ ಡ್ರೋನ್‌ ಪ್ರತಾಪ್‌ ಮತ್ತು ಗಗನಾ ಜೋಡಿ. ಈ ಜೋಡಿಯ ಅಭಿಮಾನಿಗಳಿಗೆ ಇದು ಸಹಜವಾಗಿ ದುಃಖ ತರಿಸಿದೆ.

ಅದೇನೇ ಇದ್ದರೂ ಇದೀಗ ಗಗನಾರ ಯೂಟ್ಯೂಬ್​ ಚಾನೆಲ್​ ಸ್ಟೋರಿ ಸಕತ್​ ಇಂಟರೆಸ್ಟಿಂಗ್​ ಆಗಿದೆ. ಹಲವಾರು ಸೆಲೆಬ್ರಿಟಿಗಳು ಇನ್​ಸ್ಟಾಗ್ರಾಮ್​ ರೀಲ್ಸ್​, ಯೂಟ್ಯೂಬ್​ ಚಾನೆಲ್​ ಮಾಡಿ ಕಾರು ಖರೀದಿ ಮಾಡಿದ್ದನ್ನು ನೋಡಿ, ನಾನೂ ಕಾರು ಪರ್ಚೇಸ್​ ಮಾಡಬೇಕು ಎನ್ನೋ ಕಾರಣಕ್ಕೆ ರೀಲ್ಸ್​ ಮಾಡಿದೆ. ಇನ್​ಸ್ಟಾಗ್ರಾಮ್​ನಲ್ಲಿ ಸಾವಿರ ವ್ಯೂವ್ಸೂ ಬರಲಿಲ್ಲ. ಕಾರು ಸಾಯಲಿ, ಸೈಕಲ್ಲೂ ಬರದ ಸ್ಥಿತಿ ನನ್ನದಾಗಿದೆ ಎಂದು ಗಗನಾ ಹಾಸ್ಯದ ರೀತಿಯಲ್ಲಿ ಹೇಳಿರುವ ವಿಡಿಯೋ ಒಂದು ಇದೀಗ ವೈರಲ್​ ಆಗ್ತಿದೆ.

ಇನ್ನು ಗಗನಾ ಕುರಿತು ಹೇಳುವುದಾದರೆ, ಮಹಾನಟಿಯ ಮೊದಲ ಸೀಸನ್​ ಮೂಲಕ ಮನೆಮಾತಾದವರು ಚಿತ್ರದುರ್ಗದ ಗಗನಾ. ಇದೀಗ ಅವರಿಗೆ ರಿಯಾಲಿಟಿ ಷೋಗಳಲ್ಲಿ ಭಾರಿ ಬೇಡಿಕೆ ಇದೆ. ಭರ್ಜರಿ ಬ್ಯಾಚುಲರ್ಸ್​ ರಿಯಾಲಿಟಿ ಷೋನಲ್ಲಿ ಡ್ರೋನ್​​ ಪ್ರತಾಪ್​ಗೆ ಜೋಡಿಯಾಗಿದ್ದ ಗಗನಾ ಪೈಪೋಟಿಗೆ ಬಿದ್ದವರಂತೆ ಸ್ಪರ್ಧಾ ಜೋಡಿಗಳು ರೊಮಾನ್ಸ್​ನಲ್ಲಿ ತೊಡಗಿಸಿಕೊಂಡಿತ್ತು.

ಎಲ್ಲವೂ ಟಾಸ್ಕ್​ ಆಗಿದ್ದರಿಂದ ಎಲ್ಲಾ ಜೋಡಿಗಳೂ ಹೀಗೆಯೇ ಮಾಡಿದ್ದರೆ, ಡ್ರೋನ್​ ಪ್ರತಾಪ್​ ಗಗನಾಳಿಗಾಗಿ ಒಂದು ಹೆಜ್ಜೆ ಮುಂದೆಯೇ ಹೋಗಿದ್ದರು. ಪ್ರಪೋಸಲ್​ ರೌಂಡ್, ಆ ರೌಂಡ್​, ಈ ರೌಂಡ್​ ಎನ್ನುತ್ತಲೇ ರಿಯಲ್​ ಪ್ರೇಮಿಗಳನ್ನೂ ನಾಚಿಸುವಂತೆ ಈ ಜೋಡಿಗಳು ಕಾಣಿಸಿಕೊಂಡಿದ್ದವು. shabari_sathish ಚಾನೆಲ್​ಗೆ ನಟಿ ಮಾತನಾಡಿರುವ ವಿಡಿಯೋ ಇಲ್ಲಿದೆ…
View this post on Instagram
A post shared by Shabari Sathish (@shabari_sathish27)

Source link

Leave a Reply

Your email address will not be published. Required fields are marked *