Headlines

ಮಹೇಶ್ ಬಾಬು ‘ಪೋಕಿರಿ’ ಹಿಟ್​ ಆಗಿದ್ದು ಹೇಗೆ? ಪ್ರಿನ್ಸ್-ಪುರಿ ಹೇಳಿರೋದೇ ಬೇರೆ!

ಮಹೇಶ್ ಬಾಬು ‘ಪೋಕಿರಿ’ ಹಿಟ್​ ಆಗಿದ್ದು ಹೇಗೆ? ಪ್ರಿನ್ಸ್-ಪುರಿ ಹೇಳಿರೋದೇ ಬೇರೆ!




ಡ್ಯಾಶಿಂಗ್​ ಡೈರೆಕ್ಟರ್​ ಪೂರಿ ಜಗನ್ನಾಥ್​, ಸೂಪರ್​ ಸ್ಟಾರ್​ ಮಹೇಶ್​ ಬಾಬು ಕಾಂಬಿನೇಷನ್​ನ ‘ಪೋಕಿರಿ’ ಸಿನಿಮಾ, ಸಾಮಾನ್ಯ ನಿರೀಕ್ಷೆಯೊಂದಿಗೆ ಬಿಡುಗಡೆಯಾಗಿ, ಅಸಾಧಾರಣ ಗೆಲುವು ಸಾಧಿಸಿತ್ತು.<img>ಡ್ಯಾಶಿಂಗ್​ ಡೈರೆಕ್ಟರ್​ ಪೂರಿ ಜಗನ್ನಾಥ್​, ಸೂಪರ್​ ಸ್ಟಾರ್​ ಮಹೇಶ್​ ಬಾಬು ಕಾಂಬಿನೇಷನ್​ನ ‘ಪೋಕಿರಿ’ ಸಿನಿಮಾ, ಸಾಮಾನ್ಯ ನಿರೀಕ್ಷೆಯೊಂದಿಗೆ ಬಿಡುಗಡೆಯಾಗಿ, ಅಸಾಧಾರಣ ಗೆಲುವು ಸಾಧಿಸಿತ್ತು. ಯಾರೂ ಊಹಿಸದ ರೀತಿಯಲ್ಲಿ ಈ ಚಿತ್ರ ಇಂಡಸ್ಟ್ರೀ&nbsp;ರೆಕಾರ್ಡ್​ಗಳನ್ನೇ&nbsp;ಮರುಬರೆದಿತ್ತು. ಮಹೇಶ್​ ಬಾಬು ಅವರ ಮಾಸ್​ ಇಮೇಜ್​ ಹೆಚ್ಚಿಸಿದ ಸಿನಿಮಾ ಇದು.<img>ಪೂರಿ ಜಗನ್ನಾಥ್​ ಈ ಕಥೆ ಹೇಳಿದಾಗ ಚೆನ್ನಾಗಿತ್ತು. ಆದ್ರೆ, ಟೈಟಲ್​ ‘ಪೋಕಿರಿ’ ಅಂದಾಗ ನನಗೆ ಟೆನ್ಷನ್​ ಆಯ್ತು. ನೆಗೆಟಿವ್​ ಟೈಟಲ್​ ಅಂತ ಅನಿಸಿತ್ತು. ಪೋಕಿರಿಯಂತೆ ಕಾಣಲು ಕಷ್ಟಪಟ್ಟೆ ಎಂದಿದ್ದಾರೆ ಮಹೇಶ್​ ಬಾಬು.<img>ಪೋಕಿರಿ ಲುಕ್​ಗಾಗಿ ಕೂದಲು ಬೆಳೆಸಬೇಕಾಯ್ತು. ಮೊದಲ ಬಾರಿ ಕೂದಲು ಬೆಳೆಸಿದ್ದರಿಂದ ಚಿరాಕು ಹಿಡಿಸುತ್ತಿತ್ತು. ಪೋಕಿರಿಯಂತೆ ಕಾಣುತ್ತಲೇ ಹ್ಯಾಂಡ್ಸಮ್​ ಆಗಿಯೂ ಕಾಣಬೇಕಿತ್ತು.&nbsp;ಮುಂಬೈನ ದಿಲ್ಷಾದ್​ ಎಂಬಾಕೆ ಹೇರ್​ಸ್ಟೈಲ್​ ಮಾಡಿದರು. ಪೋಕಿರಿ ಸಿನಿಮಾದಲ್ಲಿ ನನ್ನ ಹೇರ್​ಸ್ಟೈಲ್​ ಚೆನ್ನಾಗಿ&nbsp;ಕಾಣಲು ಕಾರಣ ಆಕೆ ಎಂದಿದ್ದಾರೆ ಮಹೇಶ್​.<img>ಈ ಸಿನಿಮಾ ಗೆದ್ದಿದ್ದು ಹೇಗೆ ಅಂತ ನಮಗೂ ಗೊತ್ತಿಲ್ಲ ಅಂತ ನಕ್ಕಿದ್ದಾರೆ ಮಹೇಶ್​ ಬಾಬು. ಈ ಚಿತ್ರದಲ್ಲಿ ಒಂದು ರೀತಿಯ ಎನರ್ಜಿ ಇದೆ. ಕೊನೆಯ 40 ನಿಮಿಷ ಅದ್ಭುತವಾಗಿದೆ. ಡೈಲಾಗ್​ಗಳು ಸೂಪರ್​. ಪೂರಿ ಜಗನ್ನಾಥ್​ ಚಿತ್ರಗಳಲ್ಲಿ ಹೀರೋ ಪಾತ್ರ ಅದ್ಭುತವಾಗಿರುತ್ತದೆ ಎಂದಿದ್ದಾರೆ ಮಹೇಶ್​.<img>ಪೋಕಿರಿ ನಂತರ ನಾನು ಸಾಕಷ್ಟು ಸಿನಿಮಾ ಮಾಡಿದ್ದೇನೆ. ಆದರೆ, ಪೋಕಿರಿಯಷ್ಟು ಹಿಟ್​ ಆಗಲಿಲ್ಲ. ಪೋಕಿರಿಯಲ್ಲಿ ನಾನು ಏನು ಮಾಡಿದ್ದೆ ಅಂತ ತಿಳಿದುಕೊಳ್ಳಲು ಒಬ್ಬಂಟಿಯಾಗಿ ಸಿನಿಮಾ ನೋಡಿದೆ. ಆದರೆ, ಏನೂ ಅರ್ಥವಾಗಲಿಲ್ಲ ಎಂದು ತಮಾಷೆ ಮಾಡಿದ್ದಾರೆ ಪೂರಿ ಜಗನ್ನಾಥ್​.



Source link

Leave a Reply

Your email address will not be published. Required fields are marked *