
ಜಾತಕ ಇಲ್ಲದಿದ್ದಾಗ ಹೆಸರು ಹೊಂದಾಣಿಕೆ ಮೂಲಕ ಮದುವೆ ಹೊಂದಾಣಿಕೆ ನೋಡಬಹುದು. ಅಂಕ ಜ್ಯೋತಿಷ್ಯದ ಆಧಾರದ ಮೇಲೆ ಹೆಸರುಗಳ ಅಂಕ ಮೌಲ್ಯಗಳನ್ನು ಹೋಲಿಸಿ ಹೊಂದಾಣಿಕೆ ಲೆಕ್ಕ ಹಾಕಲಾಗುತ್ತದೆ. ಆದರೆ ನಿಜವಾದ ಮದುವೆ ಯಶಸ್ಸಿಗೆ ಪ್ರೀತಿ, ನಂಬಿಕೆ, ತಿಳುವಳಿಕೆ ಮುಖ್ಯ.<img>ಮದುವೆ ಸಂಬಂಧ ಖಚಿತಪಡಿಸಲು ಜಾತಕ ನೋಡುವ ಪದ್ಧತಿ ನಮ್ಮ ಸಮಾಜದಲ್ಲಿ ಶತಮಾನಗಳಿಂದ ಬಂದಿದೆ. ಹಲವು ಕುಟುಂಬಗಳು ಇನ್ನೂ ಜಾತಕ ಹೊಂದಾಣಿಕೆಯನ್ನೇ ಆಧಾರವಾಗಿಟ್ಟುಕೊಂಡು ಮದುವೆ ನಿರ್ಧಾರ ತೆಗೆದುಕೊಳ್ಳುತ್ತವೆ. ಆದರೆ ಕೆಲವೊಮ್ಮೆ ಜಾತಕ ಭವಿಷ್ಯ ಸಿಗದೇ ಹೋಗಬಹುದು.<img>ಹೆಸರು ಹೊಂದಾಣಿಕೆ ಅಂಕ ಜ್ಯೋತಿಷ್ಯವನ್ನು (Numerology) ಆಧರಿಸಿದೆ. ನಮ್ಮ ಹೆಸರಿನ ಪ್ರತಿಯೊಂದು ಅಕ್ಷರಕ್ಕೂ ಪ್ರತ್ಯೇಕ ಅಂಕ ಮೌಲ್ಯವಿದೆ.<img>ಹೆಸರು ಅಂಕಗಳಲ್ಲಿ ಕೆಲವು ಅಂಕಗಳು ಒಂದಕ್ಕೊಂದು ಚೆನ್ನಾಗಿ ಹೊಂದುತ್ತವೆ. 1, 2, 7 ಅಂಕಗಳು ಸೇರಿದರೆ ಉತ್ತಮ ತಿಳುವಳಿಕೆ, ಸಹಕಾರ ಉಂಟಾಗುತ್ತದೆ.<img>ಜಾತಕ ಇಲ್ಲದಿದ್ದರೂ ಹೆಸರು ಹೊಂದಾಣಿಕೆ ಮೂಲಕ ಮದುವೆ ನಿರ್ಧಾರಗಳನ್ನು ಸುಲಭವಾಗಿ ಮತ್ತು ಪರಿಣಾಮಕಾರಿಯಾಗಿ ತೆಗೆದುಕೊಳ್ಳಬಹುದು.<img>ಜಾತಕ ಇಲ್ಲದ ಸಂದರ್ಭದಲ್ಲಿ ಹೆಸರು ಹೊಂದಾಣಿಕೆ ಒಂದು ಉತ್ತಮ ಪರ್ಯಾಯ ಮಾರ್ಗವಾಗಿದೆ.
Source link
ಜಾತಕ ಇಲ್ವಾ? ಹೆಸರು ಹೊಂದಾಣಿಕೆ ಸಾಕು.. ಮದುವೆಯಾಗಲು ಸುಲಭ ಮಾರ್ಗ!