ಐದೂವರೆ ಲಕ್ಷ ರೂ ಈ ಮಾರುತಿ ಕಾರಿಗೆ ಎಲ್ಲಿಲ್ಲದ ಬೇಡಿಕೆ, ಮಾರಾಟದಲ್ಲಿ ಮೊದಲ ಸ್ಥಾನ

ಐದೂವರೆ ಲಕ್ಷ ರೂ ಈ ಮಾರುತಿ ಕಾರಿಗೆ ಎಲ್ಲಿಲ್ಲದ ಬೇಡಿಕೆ, ಮಾರಾಟದಲ್ಲಿ ಮೊದಲ ಸ್ಥಾನ



ಮಾರುತಿ ಸುಜುಕಿ ಕಾರುಗಳು ಭಾರತದಲ್ಲಿ ಅತೀ ಹೆಚ್ಚು ಮಾರಾಟವಾಗು ಕಾರಾಗಿ ಹೊರಹೊಮ್ಮಿದೆ. ಟಾಪ್ 10 ಪಟ್ಟಿಯಲ್ಲಿ ಬಹುತೇಕ ಕಾರುಗಳು ಮಾರುತಿ ಸುಜುಕಿ ಕಾರುಗಳಾಗಿವೆ.  ಈ ಪೈಕಿ ಕಡಿಮೆ ಬೆಲೆ ಹಾಗೂ ಉತ್ತಮ ಸ್ಥಳವಕಾಶದ ಕಾರಿಗೆ ಬಾರಿ ಬೇಡಿಕೆ. ಹೀಗಾಗಿ ಮಾರುತಿ ಸುಜುಕಿ ವ್ಯಾಗನ್ ಆರ್ ಕಾರು ಭಾರತ ಬಹು ಬೇಡಿಕೆಯ ಕಾರಾಗಿ ಮಾರ್ಪಟ್ಟಿದೆ. ಇದೀಗ ಜನವರಿಯಿಂದ ಜೂನ್ ತಿಂಗಳ ವರೆಗಿನ ಅಂಕಿ ಅಂಶದಲ್ಲಿ ಮಾರುತಿ ವ್ಯಾಗನ್ ಆರ್ ಕಾರು ನಂಬರ್ 1 ಸ್ಥಾನ ಪಡೆದಿದೆ. ಐದೂವರೆ ಲಕ್ಷ ರೂಪಾಯಿ ಬೆಲೆಯ ವ್ಯಾಗನ್ ಆರ್ ಕಾರನ್ನು ಖರೀದಿಸಲು ಎಲ್ಲರೂ ಮುಗಿ ಬೀಳುತ್ತಿದ್ದಾರೆ. 

ನಾಲ್ಕು ವರ್ಷಗಳಿಂದ ಭಾರತದಲ್ಲಿ ಅತಿ ಹೆಚ್ಚು ಮಾರಾಟವಾಗುತ್ತಿರುವ ಮಾರುತಿ ಸುಜುಕಿ ವ್ಯಾಗನ್ R, 2025ರ ಜನವರಿ-ಜೂನ್ ಅವಧಿಯಲ್ಲೂ ಮೊದಲ ಸ್ಥಾನದಲ್ಲಿದೆ. ಈ ಅವಧಿಯಲ್ಲಿ 101,424 ಯುನಿಟ್‌ಗಳು ಮಾರಾಟವಾಗಿವೆ.



Source link

Leave a Reply

Your email address will not be published. Required fields are marked *