Headlines

Me with the King Kempegowda: ಎಐ ತಂತ್ರಜ್ಞಾನ ನಿರ್ಮಿತ ‘ಮಿ ವಿತ್ ದ ಕಿಂಗ್ ಕೆಂಪೇಗೌಡ’ ಸಿನಿಮಾ: ನಾಗಾಭರಣ ಹೇಳಿದ್ದೇನು? | Me With The King Kempegowda Movie Made With Ai Technology What Did Ts Nagabharana Say Gvd

Me with the King Kempegowda: ಎಐ ತಂತ್ರಜ್ಞಾನ ನಿರ್ಮಿತ ‘ಮಿ ವಿತ್ ದ ಕಿಂಗ್ ಕೆಂಪೇಗೌಡ’ ಸಿನಿಮಾ: ನಾಗಾಭರಣ ಹೇಳಿದ್ದೇನು? | Me With The King Kempegowda Movie Made With Ai Technology What Did Ts Nagabharana Say Gvd


ಎಐ ತಂತ್ರಜ್ಞಾನ ಬಳಸಿ ‘ಲವ್‌ ಯೂ’ ಚಿತ್ರವನ್ನು ನಿರ್ದೇಶಿಸಿದ ನೂತನ್‌ ಕೆಂಪೇಗೌಡರ ಕತೆಯನ್ನು ಸಿನಿಮಾ ಮಾಡಲು ಹೊರಟಿದ್ದಾರೆ. ಎಚ್‌ ಪಿ ನರಸಿಂಹಸ್ವಾಮಿ ನಿರ್ದೇಶನದ ಈ ಚಿತ್ರಕ್ಕೆ ‘ಮಿ ವಿತ್‌ ದ ಕಿಂಗ್‌ ಕೆಂಪೇಗೌಡ’ ಎಂದು ಹೆಸರಿಡಲಾಗಿದೆ.

ನಾಡಪ್ರಭು ಕೆಂಪೇಗೌಡರ ಜೀವನಾಧರಿತ ಸಿನಿಮಾ ಮಾಡಲು ಅನೇಕ ತಾರೆಯರೂ ನಿರ್ದೇಶಕರೂ ಅನೇಕ ವರ್ಷಗಳಿಂದ ಪ್ರಯತ್ನಿಸುತ್ತವೇ ಇದ್ದಾರೆ. ವಿವಿಧ ಕಾರಣಗಳಿಂದ ಅಂಥ ಪ್ರಯತ್ನಗಳು ಬಿದ್ದು ಹೋಗಿವೆ. ದೊಡ್ಡ ಬಜೆಟ್, ವಿಸ್ತಾರ ತಾರಾಗಣ, ಸುದೀರ್ಘ ಚಿತ್ರೀಕರಣ ಕೂಡ ಈ ವಿಳಂಬಕ್ಕೆ ಕಾರಣ. ಇತ್ತೀಚೆಗೆ ಟಿ ಎಸ್‌ ನಾಗಭರಣ ನಿರ್ದೇಶನ ಧನಂಜಯ ನಟನೆಯ ಹಾಗೂ ದಿನೇಶ್‌ ಬಾಬು ನಿರ್ದೇಶನ, ಉಪೇಂದ್ರ ಅಭಿನಯದ ಕೆಂಪೇಗೌಡ ಚಿತ್ರ ಸೆಟ್ಟೇರುವ ಬಗ್ಗೆ ಸುದ್ದಿಯಾಗಿತ್ತು.

ಈ ಮಧ್ಯೆ, ಎಐ ತಂತ್ರಜ್ಞಾನ ಬಳಸಿ ‘ಲವ್‌ ಯೂ’ ಚಿತ್ರವನ್ನು ನಿರ್ದೇಶಿಸಿದ ನೂತನ್‌ ಕೆಂಪೇಗೌಡರ ಕತೆಯನ್ನು ಸಿನಿಮಾ ಮಾಡಲು ಹೊರಟಿದ್ದಾರೆ. ಎಚ್‌ ಪಿ ನರಸಿಂಹಸ್ವಾಮಿ ನಿರ್ದೇಶನದ ಈ ಚಿತ್ರಕ್ಕೆ ‘ಮಿ ವಿತ್‌ ದ ಕಿಂಗ್‌ ಕೆಂಪೇಗೌಡ’ ಎಂದು ಹೆಸರಿಡಲಾಗಿದೆ. ನಾನು ಹತ್ತು ವರ್ಷಗಳ ಹಿಂದೆಯೇ ಕತೆ ಬರೆದಿಟ್ಟುಕೊಂಡಿದ್ದೆ. ಬಜೆಟ್‌ ಹಾಗೂ ಕಲಾವಿದರ ಸಮಸ್ಯೆ ಎದುರಾಗಿ ಚಿತ್ರ ಮಾಡಲಾಗಲಿಲ್ಲ.

ಎಐನಲ್ಲಿ ಸಿನಿಮಾ ಮಾಡಿರುವ ಅನುಭವದ ಮೇಲೆ ‘ಮಿ ವಿತ್‌ ದ ಕಿಂಗ್‌ ಕೆಂಪೇಗೌಡ’ ಚಿತ್ರವನ್ನು ಎಐ ಬಳಸಿ ಮಾಡಿದ್ದೇನೆ. ಚಿತ್ರದಲ್ಲಿ ಬರುವ ನಾಲ್ಕು ಯುದ್ಧದ ಸನ್ನಿವೇಶಗಳನ್ನು ನೇರವಾಗಿ ಚಿತ್ರೀಕರಣ ಮಾಡಿದ್ದೇನೆ. ಕ್ಲೈಮ್ಯಾಕ್ಸ್‌ನಲ್ಲಿ ಬರುವ ಯುದ್ಧದ ದೃಶ್ಯವೇ 30 ನಿಮಿಷ ಇದೆ. ಟಿ ಎಸ್‌ ನಾಗಭರಣ, ದಿನೇಶ್‌ ಬಾಬು ಅವರು ಕೆಂಪೇಗೌಡ ಅವರ ಚಿತ್ರವನ್ನು ಘೋಷಣೆ ಮಾಡಿದ್ದಾರೆ. ಮಾಡಿಲ್ಲ. ನಾನು ಮಾಡಿದ್ದೇನೆ ಎನ್ನುತ್ತಾರೆ ನೂತನ್. ನೂತನ್ ನಿರ್ದೇಶಿಸಿದ್ದ ಎಐ ತಂತ್ರಜ್ಞಾನದ ಲವ್ ಯೂ ಚಿತ್ರಕ್ಕೆ ಪ್ರೇಕ್ಷಕರಿಂದ ಅಂಥ ಒಲವು ವ್ಯಕ್ತವಾಗಿರಲಿಲ್ಲ.

ನನ್ನ ಚಿತ್ರಕತೆಗೆ 11 ವರ್ಷಗಳ ಅಧ್ಯಯನ ಇದೆ. 34ನೇ ವರ್ಷನ್‌ ಸ್ಕ್ರಿಫ್ಟ್‌ ಆಗಿದೆ. ಬೆಂಗಳೂರು ಹಾಗೂ ಮುಂಬಯಿನಲ್ಲಿ ಎರಡು ತಂಡಗಳು ಸ್ಟೋರಿ ಬೋರ್ಡ್‌ ಹಾಗೂ ಪ್ರೀ ವ್ಯೂಗಳನ್ನು ಮಾಡುತ್ತಿದ್ದಾರೆ. ಈಗ ಮತ್ತೊಬ್ಬರು ಕೆಂಪೇಗೌಡ ಅವರ ಚಿತ್ರ ಮಾಡುತ್ತಿದ್ದಾರೆಂದು ಗೊತ್ತಾಯಿತು. ಎಐನಲ್ಲಿ ಮಾಡುತ್ತಿದ್ದಾರೆ. ಮಾಡಲಿ. ಚರಿತ್ರೆ ಹಾಗೂ ಚಾರಿತ್ರಿಕ ವ್ಯಕ್ತಿಗಳ ಬಗ್ಗೆ ಎಷ್ಟು ಮಂದಿ ಬೇಕಾದರೂ ಸಿನಿಮಾ ಮಾಡಬಹುದು.
-ಟಿ ಎಸ್‌ ನಾಗಾಭರಣ, ನಿರ್ದೇಶಕ

YouTube video player



Source link

Leave a Reply

Your email address will not be published. Required fields are marked *