ವರದಿ: ರವಿ ಮೆಳೇಹಳ್ಳಿ ನ್ಯೂಸ್ ಡೆಸ್ಕ್ ಏಷ್ಯಾನೆಟ್ ಸುವರ್ಣನ್ಯೂಸ್
ದಶಕಗಳ ಕಾಲ ಬದ್ಧ ವೈರಿಗಳಂತೆ ಕಾದಾಡುತ್ತಿದ್ದ ಠಾಕ್ರೆ ಬ್ರದರ್ಸ್ 20 ವರ್ಷಗಳ ಬಳಿಕ ಮಹಾರಾಷ್ಟ್ರದಲ್ಲಿ ಒಂದಾಗಿರೋದು ನಿಮಗೆಲ್ಲಾ ಗೊತ್ತಿರೋದೆ..ಇದೀಗ 13 ವರ್ಷಗಳ ಬಳಿಕ ಮಾತೋಶ್ರೀಗೆ ರಾಜ್ ಠಾಕ್ರೆ ಕಾಲಿಟ್ಟಿದ್ದಾರೆ..ಯಾಕೆ ಅನ್ನೋದ್ರ ಫುಲ್ ಡಿಟೈಲ್ಸ್ ಇಲ್ಲಿದೆ..
ಕಳೆದ 20 ವರ್ಷಗಳಿಂದ ಬದ್ಧ ವೈರಿಗಳಂತೆ ಕಾದಾಡುತ್ತಿದ್ದ ಠಾಕ್ರೆ ಬ್ರದರ್ಸ್ ಇತ್ತೀಚೆಗೆ ಒಂದಾಗಿದ್ರು..ಹಿಂದಿ ಹೇರಿಕೆ ವಿರುದ್ಧ ಮರಾಠಿ ಭಾಷೆ ಉಳಿವು ಅಭಿಯಾನದ ಮೂಲಕ ಸಹೋದರರು ಒಂದಾಗಿದ್ರು. ಇದೀಗ ಸುಮಾರು 13 ವರ್ಷಗಳ ಬಳಿಕ ಮೊದಲ ಬಾರಿಗೆ ಎಂಎನ್‌ಎಸ್ ಮುಖ್ಯಸ್ಥ ರಾಜ್ ಠಾಕ್ರೆ ಮಾತ್ರೋಶ್ರೀಗೆ ಭೇಟಿ ನೀಡೋ ಮೂಲಕ ಅಚ್ಚರಿ ಮೂಡಿಸಿದ್ರು..
ಮಾತೋಶ್ರೀ.. ಮಹಾರಾಷ್ಟ್ರ ಅಷ್ಟೇ ಅಲ್ಲ, ಇಡೀ ದೇಶದ ರಾಜಕಾರಣದಲ್ಲಿ ಈ ಹೆಸರಿನ ಮನೆಗೊಂದು ದೊಡ್ಡ ಸ್ಥಾನವಿದೆ. ಒಂದರ್ಥದಲ್ಲಿ ಇದು ಶಕ್ತಿ ಕೇಂದ್ರವಾಗಿತ್ತು. ಬಾಳ್ ಠಾಕ್ರೆ ಇದೇ ಮನೆಯಲ್ಲಿ ಕುಳಿತು ಇಡೀ ರಾಜ್ಯ ರಾಜಕೀಯವನ್ನು ನಿಯಂತ್ರಿಸಿದ್ದ ಕಾಲವೊಂದಿತ್ತು. ಆದರೆ ಮುನಿಸಿನಿಂದ ದೂರವಾಗಿದ್ದ ರಾಜ್ ಠಾಕ್ರೆ ನಂತರ ಇಲ್ಲಿಗೆ ಕಾಲಿಟ್ಟಿದ್ದು 2012ರಲ್ಲಿ ಬಾಳ ಠಾಕ್ರೆ ನಿಧನರಾದಾಗ. ಬಳಿಕ 6 ವರ್ಷದ ಹಿಂದೆ ತಮ್ಮ ಪುತ್ರನ ವಿವಾಹ ಕರೆಯೋಲೆ ತಂದಿದ್ರು ಕೂಡ ಅದು ಕೆಲವೇ ನಿಮಿಷದ ಔಪಚಾರಿಕ ಭೇಟಿಯಾಗಿತ್ತಷ್ಟೆ. ಇದೀಗ ಸೋದರ ಸಂಬಂಧಿ, ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆಯ 65ನೇ ಜನ್ಮದಿನದ ಶುಭಾಷಯ ಹೇಳಲು ರಾಜ್ ಠಾಕ್ರೆ ಮಾತೋಶ್ರೀಗೇ ಆಗಮಿಸಿದ್ದರು.
ಇಬ್ಬರು ಸಹೋದರರು ಮಾತೋಶ್ರೀ ನಿವಾಸದಲ್ಲಿದ್ದ ಬಾಳಾಸಾಹೇಬ್ ಭಾವಚಿತ್ರದ ಮುಂದೆ ಫೋಟೋಗೆ ಪೋಸ್ ಕೊಟ್ಟಿದ್ದಾರೆ.. ಸಂಸದ ಸಂಜಯ್ ರಾವತ್ ಪಕ್ಕದಲ್ಲಿ ಸಹೋದರ ಉದ್ಧವ್ಗೆ ಕೆಂಪು ಗುಲಾಬಿ ಬೊಕ್ಕೆ ಕೊಟ್ಟು ಬರ್ತ್ ಡೇ ವಿಷ್ ಮಾಡಿದ್ರು.. ಈ ಮೂಲಕ ಇಬ್ಬರು ಮತ್ತೆ ನಾವ್ ಒಟ್ಟಾಗಿದ್ದೇವೆ ಅಂತಾ ಸಂದೇಶ ಸಾರಿದ್ರು ಅನ್ನೋ ಮಾತು ಕೇಳಿ ಬರ್ತಿದೆ.
ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಹೀನಾಯವಾಗಿ ಸೋಲುಂಡಿರುವ ಠಾಕ್ರೆ ಬ್ರದರ್ಸ್, ಮುಂಬೈ ಮಹಾನಗರ ಪಾಲಿಕೆ ಚುನಾವಣೆ ಮೇಲೆ ಕಣ್ಣಿಟ್ಟಿದ್ದಾರೆ.. ಮುಂಬೈ ಮಹಾನಗರದಲ್ಲಿ ಹಿಡಿತ ಹೊಂದಿರುವ ಶಿವಸೇನೆ, ಚುನಾವಣೆ ಘೋಷಣೆಗೂ ಮುನ್ನವೇ ಠಾಕ್ರೆ ಸಹೋದರರು ಒಂದಾಗಿದ್ದಾರೆ.. ಇದು ಮಹಾರಾಷ್ಟ್ರ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ..