ಅಂದು ‘ಗೆಟ್​​ ಔಟ್​ ಇಂಡಿಯಾ’ ಇಂದು ರೆಡ್​ ಕಾರ್ಪೆಟ್​ ಸ್ವಾಗತ! ಮೋದಿ ಬೈದು ಅಧಿಕಾರಕ್ಕೇರಿದ್ದವನೇ ಮೋದಿಗೆ ನಮೋ ಎಂದ! | Modi Maldives Visit Muizzu Red Carpet Welcome Get Out India San

ಅಂದು ‘ಗೆಟ್​​ ಔಟ್​ ಇಂಡಿಯಾ’ ಇಂದು ರೆಡ್​ ಕಾರ್ಪೆಟ್​ ಸ್ವಾಗತ! ಮೋದಿ ಬೈದು ಅಧಿಕಾರಕ್ಕೇರಿದ್ದವನೇ ಮೋದಿಗೆ ನಮೋ ಎಂದ! | Modi Maldives Visit Muizzu Red Carpet Welcome Get Out India San

ಬೆಂಗಳೂರು (ಜು.23): ಇದೇ ತಿಂಗಳು 25 ಮತ್ತು 26ರಂದು ಪ್ರಧಾನಿ ನರೇಂದ್ರ ಮೋದಿ ಮಾಲ್ಡೀವ್ಸ್‌ಗೆ ಭೇಟಿ ನೀಡಲಿದ್ದಾರೆ. ಮಾಲ್ಡೀವ್ಸ್‌​​​​​ನ 60ನೇ ಸ್ವಾತಂತ್ರ ದಿನಾಚರಣೆ ಮಹೋತ್ಸವಕ್ಕೆ ಮುಖ್ಯ ಅತಿಥಿಯಾಗಿ ಪ್ರಧಾನಿ ನರೇಂದ್ರ ಮೋದಿಯವರನ್ನು ಆಹ್ವಾನಿಸಲಾಗಿದೆ. 

ಇದೇ ಸಂದರ್ಭದಲ್ಲಿ ಎರಡೂ ದೇಶಗಳ ನಡುವೆ ಪ್ರಮುಖ ಒಪ್ಪಂದಗಳು ನಡೆಯಲಿವೆ. ಪ್ರಧಾನಿ ಮೋದಿಯವರ ಈ ಭೇಟಿ ಈಗ ಜಗತ್ತಿನಾದ್ಯಂತ ದೊಡ್ಡ ಚರ್ಚೆಯಾಗುತ್ತಿದೆ. ಯಾಕೆಂದ್ರೆ ಒಂದು ವರ್ಷದ ಹಿಂದೆ ಇಂಡಿಯಾ ಔಟ್​ ಎಂದವರು ಈಗ ಇಂಡಿಯಾದ ಪ್ರಧಾನಿಗೆ ರೆಡ್​​​ ಕಾರ್ಪೆಟ್​ ಹಾಕಿ ಸ್ವಾಗತಿಸಿದ್ದಾರೆ. 

ಮೋದಿ ಕೊಟ್ಟ ಒಂದೇ ಒಂದು ಮಾಸ್ಟರ್​ ಸ್ಟ್ರೋಕ್‌ಗೆ ಎದ್ನೋ ಬಿದ್ನೋ ಎಂದು ಭಾರತಕ್ಕೆ ಓಡೋಡಿ ಬಂದಿದ್ದ ಮೊಹಮ್ಮದ್​​ ಮುಯಿಝು ಮೋದಿ ಸ್ನೇಹ ಬೆಳೆ ಬಯಸಿದ್ದರು. ಈಗ ಅದೇ ಸ್ನೇಹ ಮತ್ತಷ್ಟು ಬಲಗೊಂಡು ಮೋದಿ ಮಾಲ್ಡೀವ್ಸ್​ ಪ್ರವಾಸದರವರೆಗೂ ಬಂದು ನಿಂತಿದೆ. 

Source link

Leave a Reply

Your email address will not be published. Required fields are marked *