
ಚೆನ್ನೈ ಮೂಲದ ಕಸ್ತೂರಿ 1991 ರಲ್ಲಿ ನಿರ್ದೇಶಕ ಕಸ್ತೂರಿ ರಾಜಾ ಅವರ ‘ಆತ್ತಾ ಉನ್ ಕೋಯಿಲಿಲೆ’ ಚಿತ್ರದ ಮೂಲಕ ತಮಿಳು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ನಂತರ ತಮಿಳು, ತೆಲುಗು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ನಟಿಸಿದ ಕಸ್ತೂರಿಗೆ ‘ಇಂಡಿಯನ್’, ‘ಸೆಂತಮಿಳ್ ಪಟ್ಟು’, ‘ಅಮೈತಿಪಡೈ’ ಮುಂತಾದ ಚಿತ್ರಗಳು ಹೆಸರು ತಂದುಕೊಟ್ಟವು.
ಇದಲ್ಲದೆ, ಸತ್ಯರಾಜ್, ಪ್ರಭು ಮತ್ತು ಕಾರ್ತಿಕ್ ಮುಂತಾದ ಪ್ರಮುಖ ನಟರೊಂದಿಗೆ ಜೋಡಿಯಾಗಿ ನಟಿಸಿದ್ದಾರೆ. ಕೆಲವು ವರ್ಷಗಳ ಕಾಲ ಸಿನಿಮಾದಿಂದ ದೂರ ಉಳಿದಿದ್ದ ಅವರು 2010 ರಲ್ಲಿ ‘ತಮಿಳ್ ಪದಂ’ ಚಿತ್ರದಲ್ಲಿ ಒಂದು ಹಾಡಿಗೆ ನೃತ್ಯ ಮಾಡಿ ಅಭಿಮಾನಿಗಳ ಗಮನ ಸೆಳೆದರು.