Headlines

ಕನ್ನಡದ ಹಾಸ್ಯ ಸಿನಿಮಾಗಳಲ್ಲಿ ಅನಂತ್‌ನಾಗ್‌ದೇ ಸಿಂಹ ಪಾಲು, ಮಿಸ್ ಮಾಡದೇ ನೋಡಿ

ಕನ್ನಡದ ಹಾಸ್ಯ ಸಿನಿಮಾಗಳಲ್ಲಿ ಅನಂತ್‌ನಾಗ್‌ದೇ ಸಿಂಹ ಪಾಲು, ಮಿಸ್ ಮಾಡದೇ ನೋಡಿ

ಅನಂತ್ ನಾಗ್ ಅವರ ಸಿನಿಮಾಗಳಲ್ಲಿ ಕಾಮಿಡಿಗೆ ಬರ ಇರೋದೆ ಇಲ್ಲ. ಅಂತಹ ಸೂಪರ್ ಹಿಟ್ ಸಿನಿಮಾಗಳ ಲಿಸ್ಟ್ ಇಲ್ಲಿದೆ. ಮಿಸ್ ಮಾಡದೇ ನೋಡಿ.

ಅನಂತ್ ನಾಗ್ (Anant Nag) ಅಂದ್ರೆ ನಟ ರಾಕ್ಷಸ. ಎಂಥದ್ದೇ ಪಾತ್ರ ಕೊಟ್ಟರೂ ಅದ್ಭುತವಾಗಿ ನಿರ್ವಹಿಸುತ್ತಾರೆ. ಅದರಲ್ಲೂ ಅವರ ಹಿಂದಿನ ಸಿನಿಮಾಗಳಲ್ಲಿ ಕಾಮಿಡಿಗೆ ಬರವೇ ಇರಲಿಲ್ಲ. ನಕ್ಕು ನಕ್ಕು ಹೊಟ್ಟೆ ಹುಟ್ಟಾಗಿಸುವಂತಹ ಅನಂತ್ ನಾಗ್ ಅಭಿನಯದ ಸಿನಿಮಾಗಳನ್ನು ನೀವು ಕೂಡ ನೋಡಿ.

ಗಣೇಶನ ಮದುವೆ (Ganeshana Maduwe) 1990 ರಲ್ಲಿ ತೆರೆಕಂಡ ಕನ್ನಡ ಚಲನಚಿತ್ರ . ಇದನ್ನು ಫಣಿರಾಮಚಂದ್ರ ಅವರು ನಿರ್ದೇಶಿಸಿದ್ದಾರೆ. ಈ ಚಿತ್ರದಲ್ಲಿ ಅನಂತನಾಗ್, ವಿನಯಾಪ್ರಸಾದ್, ಮುಖ್ಯಮಂತ್ರಿ ಚಂದ್ರು, ರಮೇಶ್ ಭಟ್ ಪ್ರಮುಖ ಪಾತ್ರ ವಹಿಸಿದ್ದಾರೆ. ಇದು ಬ್ಲಾಕ್ ಬಸ್ಟರ್ ಕಾಮಿಡಿ ಸಿನಿಮಾವಾಗಿತ್ತು.

ಗೌರಿ ಗಣೇಶ ಕೂಡ ಫಣಿ ರಾಮಚಂದ್ರ ನಿರ್ದೇಶನದ 1991 ರ ಕನ್ನಡ ಭಾಷೆಯ ಹಾಸ್ಯ ಚಲನಚಿತ್ರ. ಇದರಲ್ಲಿ ಅನಂತ್ ನಾಗ್, ಶ್ರುತಿ, ವಿನಯಾ ಪ್ರಸಾದ್, ಮಾಸ್ಟರ್ ಆನಂದ್, ಮುಖ್ಯಮಂತ್ರಿ ಚಂದ್ರು, ವೈಶಾಲಿ ಕಾಸರವಳ್ಳಿ, ರಮೇಶ್ ಭಟ್ ನಟಿಸಿದ್ದಾರೆ. ಮಾಸ್ಟರ್ ಆನಂದ್ ಈ ಸಿನಿಮಾ ಮೂಲಕ ಸಿಕ್ಕಾಪಟ್ಟೆ ಜನಪ್ರಿಯತೆ ಪಡೆದರು.

1992ರಲ್ಲಿ ಬಿಡುಗಡೆಯಾದ ಫಣಿ ರಾಮಚಂದ್ರ ನಿರ್ದೇಶನದ ಗಣೇಶನ ಸರಣಿಯ ಮತ್ತೊಂದು ಚಿತ್ರವಾಗಿದೆ. ಈ ಚಿತ್ರದ ನಿರ್ಮಾಪಕರು ವಿಶ್ವಸಾಗರ್. ಈ ಚಿತ್ರದಲ್ಲಿ ಅನಂತನಾಗ್, ರಮೇಶ್ ಭಟ್ ಹಾಗೂ ಮಾನಸ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ಗೋಲ್ಮಾಲ್ ರಾಧಾಕೃಷ್ಣ (Golmal Radhakrishna) 1990 ರ ಹಾಸ್ಯ ಚಿತ್ರ., ಇದನ್ನು ಓಂ ಸಾಯಿ ಪ್ರಕಾಶ್ ನಿರ್ದೇಶಿಸಿದ್ದಾರೆ ಮತ್ತು ಬರೆದಿದ್ದಾರೆ. ಈ ಚಿತ್ರದಲ್ಲಿ ಅನಂತ್ ನಾಗ್ ರಾಧಾಕೃಷ್ಣ ಪಾತ್ರದಲ್ಲಿ ನಟಿಸಿದ್ದು, ಚಂದ್ರಿಕಾ ಮತ್ತು ವನಿತಾ ವಾಸು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಕೋಡ್ಲು ರಾಮಕೃಷ್ಣ ನಿರ್ದೇಶನದ ಅನಂತ್ ನಾಗ್ ಅಭಿನಯದ ಮತ್ತೊಂದು ಕಾಮಿಡಿ ಸಿನಿಮಾ ಇದು. ಈ ಸಿನಿಮಾದಲ್ಲಿ ವಿನಯ ಪ್ರಸಾದ್, ಮುಖ್ಯಮಂತ್ರಿ ಚಂದ್ರು ಹಾಗೂ ವೈಶಾಲಿ ಕಾಸರವಳ್ಳಿ ಸಹ ನಟಿಸಿದ್ದರು. ಇದು ಆ ಸಮಯ ಸೂಪರ್ ಹಿಟ್ ಸಿನಿಮಾ ಆಗಿತ್ತು.

ಓಂ ಸಾಯಿಪ್ರಕಾಶ್ ನಿರ್ದೇಶನದ ಮನೇಲಿ ಇಲಿ ಬೀದೀಲಿ ಹುಲಿ (Maneli Ili Beedili Huli) ಸಿನಿಮಾದಲ್ಲಿ ಅನಂತ್ ನಾಗ್, ಮಹಾಲಕ್ಷ್ಮೀ, ಶಶಿ ಕುಮಾರ್ ಹಾಗೂ ತಾರಾ ನಟಿಸಿದ್ದರು. ಇದು ಕೂಡ ಕಾಮಿಡಿ ಸಿನಿಮಾವಾಗಿದೆ.

ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ಚೊಚ್ಚಲ ಚಿತ್ರ ಇದು. ಈ ಸಿನಿಮಾದಲ್ಲಿ ಅನಂತ್ ನಾಗ್, ತಾರಾ , ಅಂಜಲಿ ಸುಧಾಕರ್, ಎಂ. ಎಸ್. ಉಮೇಶ್, ಟೆನ್ನಿಸ್ ಕೃಷ್ಣ, ವಿಜಯ್ ಕಾಶಿ ಮತ್ತು ಮಾನು ನಟಿಸಿದ್ದರು.

ದಿನೇಶ್ ಬಾಬು ಬರೆದು ನಿರ್ದೇಶಿಸಿದ ಹಾಸ್ಯ ಥ್ರಿಲ್ಲರ್ ಚಿತ್ರ ಇದು. ಅನಂತ್ ನಾಗ್ ಮತ್ತು ಮಹಾಲಕ್ಷ್ಮಿ ನಟಿಸಿದ್ದಾರೆ. ಇದು ಕೂಡ ಸಖತ್ ಕಾಮಿಡಿಯಾಗಿದೆ.

Source link

Leave a Reply

Your email address will not be published. Required fields are marked *