Headlines

Amruthadhare ಪ್ರೇಮಿಗಳು ಕಾಯ್ತಿದ್ದ ದಿನ ಬಂದೇ ಬಿಡ್ತು! ಮಗುವಿನ ಹೆಸರೇನು? ಗೆದ್ದವರು ಯಾರು?

Amruthadhare ಪ್ರೇಮಿಗಳು ಕಾಯ್ತಿದ್ದ ದಿನ ಬಂದೇ ಬಿಡ್ತು! ಮಗುವಿನ ಹೆಸರೇನು? ಗೆದ್ದವರು ಯಾರು?

ಅಮೃತಧಾರೆ ಸೀರಿಯಲ್​ ಪ್ರೇಮಿಗಳು ಕಾಯ್ತಿದ್ದ ದಿನ ಬಂದೇ ಬಿಟ್ಟಿದೆ. ಮಗುವಿಗೆ ಏನು ಹೆಸರು ಇಡಲಿದ್ದಾರೆ ಎಂದು ಕಾಯುತ್ತಿದ್ದವರಿಗೆ ಆ ಘಳಿಗೆ ಬಂದೇ ಬಿಟ್ಟದೆ. ಮಗುವಿಗೆ ನಾಮಕರಣ ಶಾಸ್ತ್ರ ಶುರುವಾಗಿದೆ.

ಅಮೃತಧಾರೆಯಲ್ಲಿ ಇದೀಗ ಮಗುವಿನ ನಾಮಕರಣದ ವಿಶೇಷ ಎಪಿಸೋಡ್​ ನಡೆಯುತ್ತಿದೆ. ಎಲ್ಲರೂ ಮಗುವಿನ ನಾಮಕರಣಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ. ಎಲ್ಲರೂ ಖುಷಿಯಾಗಿದ್ದಾರೆ. ಭೂಮಿಕಾ ಅಪ್ಪ-ಅಮ್ಮ ಎಲ್ಲರೂ ಮನೆಗೆ ಬಂದಿದ್ದು ಮನೆಯಲ್ಲಿ ಹಬ್ಬದ ವಾತಾವರಣ.

ಶಕುಂತಲಾ ಒಬ್ಬಳನ್ನು ಬಿಟ್ಟರೆ ಎಲ್ಲರೂ ಖುಷಿಯಾಗಿದ್ದಾರೆ. ಮಗುವನ್ನು ಭಾಗ್ಯಮ್ಮಾ ಎತ್ತಿಕೊಂಡಿದ್ದಾಳೆ. ಅಷ್ಟಕ್ಕೂ ಆಕೆಯ ಆರೋಗ್ಯ ಸರಿಯಾಗಿದ್ದು, ಎಲ್ಲವೂ ನೆನಪಿದೆ ಎನ್ನುವುದು ಯಾರಿಗೂ ತಿಳಿದಿಲ್ಲ. ಈ ವಿಷಯವನ್ನು ಹೇಳಿಬಿಟ್ಟರೆ ಶಕುಂತಲಾ ಎಲ್ಲಿ ತನ್ನ ಮಗನ ಪ್ರಾಣಕ್ಕೆ ಕಂಟಕ ತಂದುಬಿಡುತ್ತಾಳೆಯೋ ಎನ್ನುವ ಆತಂಕ ಆಕೆಯದ್ದು. ಇದೇ ಕಾರಣಕ್ಕಾಗಿ ಸೈಲೆಂಟ್​ ಆಗಿಯೇ ಇದ್ದಾಳೆ.

ಇದೀಗ ಮಗುವಿಗೆ ಏನು ಹೆಸರು ಇಡಬೇಕು ಎನ್ನುವ ಬಗ್ಗೆ ಎಲ್ಲರೂ ಚರ್ಚಿಸಿಯಾಗಿದೆ. ಗೌತಮ್​ ಮತ್ತು ಭೂಮಿಕಾ ತಮ್ಮ ತಮ್ಮ ಇಷ್ಟರ ಹೆಸರುಗಳನ್ನು ಚೀಟಿಯಲ್ಲಿ ಬರೆದು ಹಾಕಿದ್ದಾರೆ. ಅದನ್ನು ಮಗುವಿನ ಸಹೋದರಮಾವ ಜೀವಾ ಚೀಟಿ ಎತ್ತಿದ್ದಾನೆ.

ಆ ಚೀಟಿಯಲ್ಲಿ ಏನು ಹೆಸರು ಬಂದಿದೆ ಎನ್ನುವುದು ಇನ್ನಷ್ಟೇ ತಿಳಿಯಬೇಕಿದೆ. ಭೂಮಿಕಾ ಅಥವಾ ಗೌತಮ್ ಇಬ್ಬರಲ್ಲಿ ಯಾರು ಆಯ್ಕೆ ಮಾಡಿರುವ ಹೆಸರು ಬಂದಿದೆ ಎಂದು ನೋಡಬೇಕಿದೆ. ಅಷ್ಟಕ್ಕೂ ಗೌತಮ್​ ತನಗೆ ಹೆಣ್ಣುಮಗು ಬೇಕು ಎಂದಿದ್ದರೆ, ಭೂಮಿಕಾ ಗಂಡು ಎಂದಿದ್ದಳು.ಎರಡೂ ಮಕ್ಕಳು ಹುಟ್ಟಿವೆ. ಆದರೆ ಹೆಣ್ಣುಮಗುವನ್ನು ಅಪಹರಣ ಮಾಡಲಾಗಿದೆ.

ಈ ರಹಸ್ಯವನ್ನು ಭೂಮಿಕಾಗೆ ಹೇಳಿ ಆಕೆಯ ಸ್ಥಿತಿಯನ್ನು ಶೋಚನೀಯ ಮಾಡುವ ಪ್ಲ್ಯಾನ್​ ಮಾಡಿದ್ದಾಳೆ ಶಕುಂತಲಾ. ಭೂಮಿಕಾ ಮಗುವಿನ ವಿಷಯದಲ್ಲಿ ತುಂಬಾ ಸೆನ್​ಸೆಟೆವ್​ ಆಗಿರುವ ಕಾರಣ, ವಿಷಯವನ್ನು ಹೇಳಬೇಡಿ ಎಂದು ವೈದ್ಯರು ಹೇಳಿರೋದ್ರಿಂದ ಆಕೆಯಿಂದ ಗೌತಮ್​ ಮತ್ತು ಆನಂದ್​ ವಿಷಯ ಮುಚ್ಚಿಟ್ಟಿದ್ದಾರೆ.

ಇದರ ನಡುವೆಯೇ ನಾಮಕರಣ ಶಾಸ್ತ್ರ ನಡೆಯುತ್ತಿದೆ. ಇಬ್ಬರೂ ಚೀಟಿ ಬರೆದು ಅಂತಿಮಗೊಳಿಸಿದ್ದಾರೆ. ಮಗುವಿಗೆ ಏನು ಹೆಸರು ಇಟ್ಟಿರಬಹುದು ಎನ್ನುವ ಕುತೂಹಲ ವೀಕ್ಷಕರದ್ದು.

ಆದರೆ ವಿಷಯ ತಿಳಿಸಿ ಬಿರುಗಾಳಿ ಎಬ್ಬಿಸುವ ಪ್ಲ್ಯಾನ್​ ಮಾಡುತ್ತಿದ್ದಾರೆ ಶಕುಂತಲಾ ಮತ್ತು ಜೈದೇವ. ಸದ್ಯ ಮಗುವಿನ ನಾಮಕರಣದ ಸಮಯದಲ್ಲಿ ಆಕೆ ಏನೂ ಹಾನಿ ಮಾಡದೇ ಇರಲಿ ಎಂದು ಸೀರಿಯಲ್​​ ಪ್ರೇಮಿಗಳು ಹೇಳುತ್ತಿದ್ದಾರೆ.

Source link

Leave a Reply

Your email address will not be published. Required fields are marked *