ಹೆಚ್ಚು ಸುರಕ್ಷತೆ ಕಾರಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಇದೀಗ ಜನಪ್ರಿಯ ಟೊಯೋಟಾ ಇನ್ನೋವಾ ಹೈಕ್ರಾಸ್ ಕಾರಿನ ಸುರಕ್ಷತಾ ರೇಟಿಂಗ್ ಬಹಿರಂಗವಾಗಿದೆ. ಈ ವರದಿ ಬಹಿರಂಗವಾಗುತ್ತಿದ್ದಂತೆ ಕಾರಿನ ಬೇಡಿಕೆ ಹೆಚ್ಚಾಗುತ್ತಿದೆ.

ವಾಹನಗಳಲ್ಲಿ ಮೈಲೇಜ್, ಪರ್ಫಾಮೆನ್ಸ್, ವಿನ್ಯಾಸ ಎಷ್ಟು ಮುಖ್ಯವೋ ಅದಕ್ಕಿಂತ ಸುರಕ್ಷತೆ ಮುಖ್ಯವಾಗಿದೆ. ಭಾರತದಲ್ಲಿ ಹೆಚ್ಚು ಸುರಕ್ಷತೆ ಕಾರಿಗೆ ಬೇಡಿಕೆ ಹೆಚ್ಚಾಗಿದೆ. ಇದೀಗ ಬಹುತೇಕರ ನೆಚ್ಚಿನ ಟೊಯೆಟಾ ಇನ್ನೋವಾ ಹೈಕ್ರಾಸ್ ಕಾರಿನ ಸುರಕ್ಷತಾ ರೇಟಿಂಗ್ ಬಹಿರಂಗವಾಗಿದೆ. ಭಾರತದ ಅತ್ಯಂತ ಸಮಗ್ರ ವಾಹನ ಸುರಕ್ಷತಾ ಮೌಲ್ಯಮಾಪನ ವ್ಯವಸ್ಥೆಯಾದ ಭಾರತ್ ನ್ಯೂ ಕಾರ್ ಅಸೆಸ್‌ಮೆಂಟ್ ಪ್ರೋಗ್ರಾಂ (ಭಾರತ್ ಎನ್‌ಸಿಎಪಿ) ಅಡಿಯಲ್ಲಿ ಹೈಕ್ರಾಸ್ ಕಾರು 5-ಸ್ಟಾರ್ ಸುರಕ್ಷತಾ ರೇಟಿಂಗ್ ಪಡೆದಿದೆ

ವಯಸ್ಕ ಮತ್ತು ಮಕ್ಕಳ ಪ್ರಯಾಣಿಕರ ಸುರಕ್ಷತೆ ಎಂಬ ಎರಡೂ ವಿಭಾಗಗಳಲ್ಲಿ 5-ಸ್ಟಾರ್ ಸೇಫ್ಟಿ ರೇಟಿಂಗ್ ಪಡೆದಿದೆ. ಇಂದು ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಚಿವ ನಿತಿನ್ ಗಡ್ಕರಿ, ಸುರಕ್ಷತಾ ಪ್ರಮಾಣಪತ್ರ ವಿತರಿಸಿದರು. ಟೊಯೋಟಾ ನ್ಯೂ ಗ್ಲೋಬಲ್ ಆರ್ಕಿಟೆಕ್ಚರ್ (ಟಿಎನ್‌ಜಿಎ) ವೇದಿಕೆಯ ಆಧಾರದಲ್ಲಿ ನಿರ್ಮಿತವಾದ ಇನ್ನೋವಾ ಹೈಕ್ರಾಸ್ ಅನ್ನು ಅತ್ಯುತ್ತಮ ರಕ್ಷಣೆ ಒದಗಿಸುವಂತೆ ವಿನ್ಯಾಸಗೊಳಿಸಲಾಗಿದೆ. ಇದರ ಗಟ್ಟಿಮುಟ್ಟಾದ ವಿನ್ಯಾಸದ ಜೊತೆಗೆ, ಹೈಕ್ರಾಸ್ ನಲ್ಲಿ ಹಲವಾರು ಆಕ್ಟಿವ್ ಮತ್ತು ಪ್ಯಾಸಿವ್ ಸುರಕ್ಷತಾ ಫೀಚರ್ ಗಳು ಲಭ್ಯವಿದೆ. ಹೀಗಾಗಿ ಉದ್ಯಮದಲ್ಲಿ ಅತ್ಯಂತ ಸುರಕ್ಷಿತ ವಾಹನಗಳಲ್ಲಿ ಒಂದು ಎಂಬ ಹೆಗ್ಗಳಿಕೆ ಗಳಿಸಿದೆ

• ಟೊಯೋಟಾ ಸೇಫ್ಟಿ ಸೆನ್ಸ್ (ಟಿ ಎಸ್ ಎಶ್) – ಇದು ಡ್ರೈವರ್ ಅಸಿಸ್ಟೆನ್ಸ್ ಫೀಚರ್ ಗಳ ಸಮೂಹವಾಗಿದ್ದು, ಇದರಲ್ಲಿ ಪ್ರೀ- ಕೊಲಿಷನ್ ಸಿಸ್ಟಮ್, ಲೇನ್ ಟ್ರೇಸ್ ಅಸಿಸ್ಟ್, ಡೈನಾಮಿಕ್ ರಾಡಾರ್ ಕ್ರೂಸ್ ಕಂಟ್ರೋಲ್, ಬ್ಲೈಂಡ್ ಸ್ಪಾಟ್ ಮಾನಿಟರ್ ಮತ್ತು ಆಟೋಮ್ಯಾಟಿಕ್ ಹೈ ಬೀಮ್ ಇತ್ಯಾದಿ ಫೀಚರ್ ಗಳಿವೆ.

• ಎಲ್ಲಾ ಗ್ರೇಡ್ ಗಳಲ್ಲಿ ಆರು ಏರ್ ಬ್ಯಾಗ್ ಗಳನ್ನು ಒದಗಿಸಲಾಗುತ್ತಿದ್ದು, ಸಂಪೂರ್ಣ ಪ್ರಯಾಣಿಕರ ರಕ್ಷಣೆ ಮಾಡಲಾಗುತ್ತದೆ.

• ವೆಹಿಕಲ್ ಸ್ಟೆಬಿಲಿಟಿ ಕಂಟ್ರೋಲ್ (ವಿ ಎಸ್ ಸಿ) ಮತ್ತು ಟ್ರಾಕ್ಷನ್ ಕಂಟ್ರೋಲ್ (ಟಿ ಆರ್ ಸಿ)

• ಆಂಟಿ-ಲಾಕ್ ಬ್ರೇಕಿಂಗ್ ಸಿಸ್ಟಮ್ (ಎಬಿಎಸ್) ಜೊತೆಗೆ ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್ (ಇಬಿಡಿ)

• ಹಿಲ್-ಸ್ಟಾರ್ಟ್ ಅಸಿಸ್ಟ್ ಕಂಟ್ರೋಲ್, ರೇರ್ ಪಾರ್ಕಿಂಗ್ ಕ್ಯಾಮೆರಾ, ಮುಂಭಾಗ ಮತ್ತು ಹಿಂಭಾಗದ ಪಾರ್ಕಿಂಗ್ ಸೆನ್ಸರ್ ಗಳು, ಮತ್ತು ಆಲ್- ವ್ಹೀಲ್ ಡಿಸ್ಕ್ ಬ್ರೇಕ್‌ಗಳು

• ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (ಟಿಪಿಎಂಎಸ್)

• ಮಕ್ಕಳ ಸುರಕ್ಷತೆಗಾಗಿ ಐಸೋಫಿಕ್ಸ್ ಮಕ್ಕಳ ಸೀಟ್ ಮೌಂಟ್ ಗಳು

ಭಾರತೀಯ ಕುಟುಂಬಗಳ ಪ್ರೀತಿಯ ಕಾರು ಈಗ ಸುರಕ್ಷತೆಯಲ್ಲಿ ದಾಖಲೆ

2022ರ ನವೆಂಬರ್ ನಲ್ಲಿ ಬಿಡುಗಡೆಯಾದ ಇನ್ನೋವಾ ಹೈಕ್ರಾಸ್ ತನ್ನ ವಿಭಾಗದಲ್ಲಿ ಹೊಸ ಮಾನದಂಡ ಸ್ಥಾಪಿಸಿದ್ದು, ದೇಶಾದ್ಯಂತ ಭಾರತೀಯ ಕುಟುಂಬಗಳ ವಿಶ್ವಾಸವನ್ನು ಗಳಿಸಿದೆ. ತನ್ನ ಬೋಲ್ಡ್ ಎಸ್ ಯು ವಿ ಪ್ರೇರಿತ ವಿನ್ಯಾಸ, ಶಕ್ತಿಶಾಲಿ ಅಟೋ-ಚಾರ್ಜಿಂಗ್ ಹೈಬ್ರಿಡ್ ಎಲೆಕ್ಟ್ರಿಕ್ ತಂತ್ರಜ್ಞಾನ ಮತ್ತು ವಿಶಾಲವಾದ, ಪ್ರೀಮಿಯಂ ಒಳಾಂಗಣ ಹೊಂದಿರುವ ಹೈಕ್ರಾಸ್ ತನ್ನ ವಿಭಾಗದಲ್ಲಿನ ನಿರೀಕ್ಷೆಗಳನ್ನು ಪೂರೈಸಿದೆ. ಇದರ ಜನಪ್ರಿಯತೆಯ ಸಾಕ್ಷಿಯಾಗಿ ಈ ಮಾಡೆಲ್ ಇತ್ತೀಚೆಗೆ ಭಾರತದಲ್ಲಿ 1,35,000 ಯೂನಿಟ್ ಗಳ ಮಾರಾಟದ ಮೈಲಿಗಲ್ಲನ್ನು ಸಾಧಿಸಿದೆ. ಟೊಯೋಟಾ ಹೊಂದಿರುವ ಅತ್ಯುತ್ತಮ ಮಾರುಕಟ್ಟೆ ಸ್ವೀಕಾರ ಮತ್ತು ಗ್ರಾಹಕರ ವಿಶ್ವಾಸವನ್ನು ಈ ಸಾಧನೆಯು ಸಾರಿದೆ.

ಟೊಯೋಟಾ ಜಾಗತಿಕವಾಗಿ ಪಾಲಿಸುವ ಗುಣಮಟ್ಟ, ಬಾಳಿಕೆ, ಮತ್ತು ವಿಶ್ವಾಸಾರ್ಹತೆ (ಕ್ಯೂಡಿಆರ್) ಅನ್ನು ಅತ್ಯಾಧುನಿಕ ಫೀಚರ್ ಗಳು ಮತ್ತು ಹೊಸತನದೊಂದಿಗೆ ಸಂಯೋಜಿಸಿರುವ ಹೈಕ್ರಾಸ್ ಭಾರತದಲ್ಲಿ ಟೊಯೋಟಾದ ಬಹು-ಮಾರ್ಗದ ಸುಸ್ಥಿರ ಸಾರಿಗೆ ವಿಧಾನದ ಪ್ರಮುಖ ಅಭಿವ್ಯಕ್ತಿಯಾಗಿ ಮೂಡಿಬಂದಿದೆ. ಭಾರತವು ಸುರಕ್ಷತೆ, ಸುಸ್ಥಿರತೆ ಮತ್ತು ಸ್ವಾವಲಂಬನೆಯ ಭವಿಷ್ಯದತ್ತ ಸಾಗುತ್ತಿರುವಾಗ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಈ ರಾಷ್ಟ್ರೀಯ ದೃಷ್ಟಿಕೋನಕ್ಕೆ ಸೂಕ್ತರೀತಿಯಲ್ಲಿ ಹೊಂದಿಕೊಂಡು ಕಾರ್ಯನಿರ್ವಹಿಸುತ್ತಿದೆ. ಭಾರತ್ ಎನ್ ಸಿ ಎ ಪಿ ಅಡಿಯಲ್ಲಿ ದೊರೆತಿರುವ ಈ ಸುರಕ್ಷತಾ ಪ್ರಮಾಣಪತ್ರವು ಟಿಕೆಎಂಗೆ ಒಂದು ಹೆಮ್ಮೆಯ ಮೈಲಿಗಲ್ಲಾಗಿದ್ದು, ಪ್ರೇರಕ ಶಕ್ತಿಯಾಗಿ ಕಾರ್ಯನಿರ್ವಹಿಸುತ್ತದೆ. ಏಕೆಂದರೆ ಟೊಯೋಟಾ ಸಂಸ್ಥೆಯು ಗ್ರಾಹಕರಿಗೆ ನಿಜವಾದ ಮೌಲ್ಯವನ್ನು ಒದಗಿಸುವ ವಾಹನಗಳನ್ನು ಅಭಿವೃದ್ಧಿಪಡಿಸುವುದನ್ನು ಮುಂದುವರೆಸಲಿದೆ.

Source link
ಟೊಯೋಟಾ ಇನ್ನೋವಾ ಹೈಕ್ರಾಸ್ ಕಾರಿನ ಸುರಕ್ಷತಾ ರೇಟಿಂಗ್ ಬಹಿರಂಗ, ಬೇಡಿಕೆ ಡಬಲ್