ಸೋಷಿಯಲ್ ಮೀಡಿಯಾದ ಸೆನ್ಸೇಷನ್ ಬಿಗ್ಬಾಸ್ ಖ್ಯಾತಿಯ ನಿವೇದಿತಾ ಗೌಡ ಸೀರೆಯಲ್ಲಿ ರೀಲ್ಸ್ ಮಾಡಿದ್ರೆ ಅವರ ಅಭಿಮಾನಿಗಳು ಒಂದು ಡೌಟ್ ಶುರುವಾಗಿದೆ. ಏನದು ನೋಡಿ!
ಬಿಗ್ಬಾಸ್ ಖ್ಯಾತಿಯ ನಿವೇದಿತಾ ಗೌಡ ಸೋಷಿಯಲ್ ಮೀಡಿಯಾದ ಸೆನ್ಸೇಷನ್ ಆಗಿರುವುದು ಗೊತ್ತಿರುವ ವಿಷಯವೇ. ದಿನದಿಂದ ದಿನಕ್ಕೆ ಮೇಲಕ್ಕೆ ಹೋಗುತ್ತಿರುವ ಬಟ್ಟೆಗಳನ್ನು ಹಾಕುತ್ತಲೇ ಕಮೆಂಟಿಗರಿಗೆ ಉಗಿಯಲು ಸಾಕಷ್ಟು ಅವಕಾಶ ಕಲ್ಪಿಸುತ್ತಿದ್ದಾರೆ. ತಮ್ಮ ಡಿಕ್ಷನರಿಯಲ್ಲಿ ಇದ್ದ ಬೈಗುಳಗಳನ್ನೆಲ್ಲಾ ಕಮೆಂಟ್ ಬಾಕ್ಸ್ನಲ್ಲಿ ತುಂಬುತ್ತಲೇ, ಈಕೆಯ ವಿಡಿಯೋ ಮಾತ್ರ ನೋಡಲು ಬಿಡುವುದಿಲ್ಲ ಒಂದಿಷ್ಟು ಕಮೆಂಟಿಗ ಅಭಿಮಾನಿಗಳು. ಅದೇ ನಿವೇದಿತಾಗೆ ವರದಾನ. ಆಕೆಗೂ ಗೊತ್ತು, ಎಷ್ಟು ಹಾಟ್ ಆಗಿ ರೀಲ್ಸ್ ಮಾಡುತ್ತೇನೋ, ಅಷ್ಟು ಬೈಯುತ್ತಲೇ ತಮ್ಮ ವಿಡಿಯೋ, ರೀಲ್ಸ್ ನೋಡುತ್ತಾರೆ ಎನ್ನುವುದು. ಹಾಟ್ ಆದಷ್ಟೂ ವ್ಯೂಸ್ ಜಾಸ್ತಿಯಾಗುತ್ತದೆ ಎನ್ನುವುದು ಇಂಥ ಹಲವು ನಟಿಯರು ಇದಾಗಲೇ ಅರಿತುಕೊಂಡಿದ್ದಾರೆ. ಏಕೆಂದರೆ, ಸಭ್ಯತೆ, ಸಂಸ್ಕೃತಿ, ಸನ್ನಡತೆ… ಹೀಗೆ ಕಮೆಂಟ್ಗಳಲ್ಲಿ ಭಾಷಣ ಬಿಗಿಯುವ ಕಮೆಂಟಿಗರು ಯಾವುದೇ ಸಭ್ಯತೆಯ ರೀಲ್ಸ್ಗಳನ್ನು, ಉತ್ತಮ ಸಂದೇಶ ನೀಡುವ ವಿಷಯಗಳನ್ನು ವೀಕ್ಷಿಸುವುದು ಎಷ್ಟು ಎಂದು ಅವರಿಗೇ ಗೊತ್ತು.
ಇದೀಗ ನಿವೇದಿತಾ ಗೌಡ ಸೀರೆಯಲ್ಲಿ ರೀಲ್ಸ್ ಮಾಡಿದ್ದಾರೆ. ಸೀರೆಯಲ್ಲಿ ನಟಿ ಮುದ್ದಾಗಿ ಕಂಡರೂ, ಈ ವಿಡಿಯೋ ಮಾಡಿರುವ ಹಿಂದಿನ ಉದ್ದೇಶವೇ ಬೇರೆ ಇದ್ದಂತಿದೆ. ಇದಕ್ಕೆ ಕಾರಣ, ನೋಡಲು ಇದು ಸೀರೆಯಂತೆ ಇದ್ದರೂ, ಇಲ್ಲಿ ತಮ್ಮ ಎಂದಿನ ಧಾರಾಳ ಪ್ರದರ್ಶನಕ್ಕೆ ಬೇಕಾದಷ್ಟು ಅವಕಾಶ ನೀಡಿದ್ದಾರೆ ನಟಿ. ಹೀಗೆ ಮಾಡಿದರೆ ಸಾಕಷ್ಟು ಟ್ರೋಲ್ ಆಗುವ ಮೂಲಕ ವ್ಯೂವ್ಸ್ ಚೆನ್ನಾಗಿ ಬರುತ್ತದೆ ಎನ್ನುವುದು ಅವರು ಇಲ್ಲಿಯವರೆಗೆ ಕಲಿತಿರುವ ಪಾಠ. ಇನ್ನೇನು ಟ್ರೋಲರ್ಸ್ಗೂ ಇದೇ ಬೇಕಾಗಿದೆ. ಎಂದಿನಂತೆ ಬಾಯಿಗೆ ಬಂದ ರೀತಿಯಲ್ಲಿ ಟ್ರೋಲ್ ಮಾಡಿರುವ ನೆಟ್ಟಿಗರು ನಟಿಗೆ ಒಂದೇ ಒಂದು ಪ್ರಶ್ನೆ ಕೇಳಿದ್ದಾರೆ. ಈ ಬಗ್ಗೆ ಮೊದಲಿನಿಂದಲೂ ಟ್ರೋಲರ್ಸ್ಗೆ ಈ ಪ್ರಶ್ನೆ ಇದ್ದದ್ದೇ. ಅದೇನೆಂದರೆ ಆಕೆಗೆ ಕನ್ನಡ ಓದಲು ಬರತ್ತಾ ಎನ್ನುವುದು! ಇಷ್ಟೆಲ್ಲಾ ಕೆಟ್ಟ ಕೆಟ್ಟ ಕಮೆಂಟ್ಸ್ ಮಾಡಿದ್ರೂ ಡೋಂಟ್ ಕೇರ್ ಅಂತಿರೋ ನಟಿಯ ಬಗ್ಗೆ ಈ ಒಂದು ಸಂದೇಹವನ್ನು ಅವರು ವ್ಯಕ್ತಪಡಿಸಿದ್ದಾರೆ.
ಆದರೆ ನಿವೇದಿತಾ ಸುಂದರವಾಗಿ ಕನ್ನಡವನ್ನು ಮಾತನಾಡುತ್ತಾರೆ, ಅವರಿಗೆ ತಮ್ಮ ಟ್ರೋಲ್ಗಳ ಬಗ್ಗೆಯೂ ಚೆನ್ನಾಗಿ ಗೊತ್ತಿದೆ. ಇದಾಗಲೇ ಹಲವು ಬಾರಿ ಅವರು ಟ್ರೋಲರ್ಸ್ ಮುಖಕ್ಕೆ ಹೊಡೆಯುವ ರೀತಿಯಲ್ಲಿ ಉತ್ತರವನ್ನೂ ಕೊಟ್ಟಿದ್ದಾರೆ. ಕೆಲವೊಮ್ಮೆ ಎಚ್ಚರಿಕೆಯನ್ನೂ ನೀಡಿದ್ದಾರೆ. ಆದರು ಇವರನ್ನು ಕಂಡರೆ ಟ್ರೋಲರ್ಸ್ಗೆ ಇನ್ನಿಲ್ಲದ ಪ್ರೀತಿ. ನಟಿ ವಿಡಿಯೋ ಹಾಕುವುದನ್ನೇ ಕಾಯುತ್ತಾ ಇರುವಂತೆ ಕಮೆಂಟ್ಸ್ ಸುರಿಮಳೆಯನ್ನೇಗೈಯುತ್ತಾರೆ. ಇಂಥ ಎರ್ರಾಬಿರ್ರಿ ಡಾನ್ಸ್ಗೆ ಹಿಗ್ಗಾಮುಗ್ಗ ಬೈಯುವ ಇದೇ ನೆಟ್ಟಿಗರು ಉತ್ತಮವಾಗಿ ಒಂದೇ ಒಂದು ವಿಡಿಯೋಅನ್ನು ಜನ್ಮದಲ್ಲಿ ಓಪನ್ ಮಾಡಿರಲಿಲ್ಲ, ಒಂದು ವೇಳೆ ಸ್ಕ್ರೋಲ್ ಮಾಡುವಾಗ ಅದು ಕಂಡರೂ ಸರಿಸಿ ಮುಂದೆ ಹೋಗಿ ಇಂಥದ್ದೇ ವಿಡಿಯೋಗಾಗಿ ಹಪಹಪಿಸುತ್ತಿರುವುದೂ ನಿಜ ಅಲ್ಲವೆ? ಇಂಥವರಿಗೆ ಇನ್ನೇನು ಬೇಕು ಮತ್ತೆ?
ಕೆಲ ದಿನಗಳ ಹಿಂದಷ್ಟೇ ನಟಿ ಬಾತ್ರೂಮ್ ಪ್ರೀತಿಯನ್ನು ಮತ್ತೆ ಮೆರೆದಿದ್ದರು. ಇದಾಗಲೇ ಹಲವಾರು ಬಾತ್ರೂಮ್ ವಿಡಿಯೋಗಳನ್ನು ಶೇರ್ ಮಾಡಿರುವ ನಿವೇದಿತಾ, ಅಲ್ಲಿಯೇ ಮತ್ತೆ ಸ್ಟೆಪ್ ಹಾಕಿದ್ದರು.ರೆ ಇದಕ್ಕೂ ಟ್ರೋಲ್ಗಳ ಸುರಿಮಳೆಯೇ ಆಗುತ್ತಿದ್ದರೆ, ಮತ್ತೆ ಕೆಲವರು ಹಾರ್ಟ್ ಎಮೋಜಿ ಹಾಕಿದ್ದಾರೆ. ನೆಟ್ಟಿಗನೊಬ್ಬ ಈ ವಿಡಿಯೋ ಮಧ್ಯೆ ಉಗ್ರರು, ಸೊಳ್ಳೆಗಳನ್ನೆಲ್ಲಾ ತಂದಿದ್ದು, ಕಾಶ್ಮೀರದಲ್ಲಿ ಉಗ್ರರ ಕಾಟ, ರಾತ್ರಿ ಸೊಳ್ಳೆ ಕಾಟ, ಇನ್ಸ್ಟಾದಲ್ಲಿ ಇವಳ ಕಾಟ ಎಂದು ಬರೆದುಕೊಂಡಿದ್ದಾರೆ. ಹೀಗೆ ಒಬ್ಬೊಬ್ಬರು ಒಂದೊಂದು ರೀತಿಯ ಕಮೆಂಟ್ಸ್ ಮಾಡುತ್ತಿದ್ದರು.