ಬಡತನದಿಂದ ಶಿಕ್ಷಣ ಪಡೆಯಲು ಪರದಾಡುತ್ತಿದ್ದ ಬಾಲಕಿಯನ್ನು ನರ್ಸಿಂಗ್ ಓದಿಸುವುದಾಗಿ ಕರೆದೊಯ್ದು, ಕ್ಲಿನಿಕ್‌ನಲ್ಲಿ ಕೂಡಿ ಹಾಕಿ ಅತ್ಯಾಚಾ*ರ ಮಾಡಿದ ಘಟನೆ ಬೆಳಕಿಗೆ ಬಂದಿದೆ. ಇದಕ್ಕೆ ಅಂಗನವಾಡಿ ಕಾರ್ಯಕರ್ತೆಯೂ ಸಹಾಯ ಮಾಡಿದ್ದು, ಮೂವರನ್ನು ಬಂಧನ ಮಾಡಲಾಗಿದೆ.
ಭಾರತದಲ್ಲಿ ವೈದ್ಯರನ್ನು ನಾರಾಯಣ ದೇವರಿಗೆ ಹೋಲಿಕೆ ಮಾಡುತ್ತೇವೆ. ಇಲ್ಲೊಬ್ಬ ವೈದ್ಯ ಹಳ್ಳಿಯಲ್ಲಿ ತೀವ್ರ ಬಡತನದಲ್ಲಿ ಎಸ್ಸೆಸ್ಸೆಲ್ಸಿ, ಪಿಯುಸಿ ಓದಿಕೊಂಡು ಉತ್ತಮ ಅಂಕಗಳೊಂದಿಗೆ ಪಾಸಾಗಿದ್ದ ಬಾಲಕಿಯನ್ನು ನರ್ಸಿಂಗ್ ಓದಿಸುತ್ತೇನೆಂದು ತನ್ನೊಂದಿಗೆ ಕರೆದುಕೊಂಡು ಹೋಗಿದ್ದಾನೆ. ಆದರೆ, ಕೇವಲ 3 ದಿನಕ್ಕೆ ಅಪ್ರಾಪ್ತ ವಯಸ್ಕಳೆಂಬುದನ್ನೂ ನೋಡದೇ ಮತ್ತು ಬರುವ ಔಷಧಿ ನೀಡಿ ಬಾಲಕಿಯು ಮೇಲೆ ಅತ್ಯಾ*ಚಾರ ಮಾಡಿದ್ದಾನೆ. ಬಡತನದಿಂದ ಬೇಸತ್ತು ಶಿಕ್ಷಣ ಪಡೆಯುವ ಆಸೆಗೆ ಹೋದ ಬಾಲಕಿಯ ಜೀವನವನ್ನೇ ಹಾಳು ಮಾಡಿದ್ದಾನೆ.
ಈ ಘಟನೆ ಒಡಿಶಾದ ಗಂಜಾಮ್‌ನಲ್ಲಿ ಈ ಘಟನೆ ನಡೆದಿದೆ. ವೈದ್ಯನೆಂದು ನಟಿಸಿ 17 ವರ್ಷದ ಬಾಲಕಿಯ ಮೇಲೆ ಖಾಸಗಿ ಕ್ಲಿನಿಕ್‌ನಲ್ಲಿ ಅತ್ಯಾ*ಚಾರ ಎಸಗಿದ ಆರೋಪದ ಮೇಲೆ ಮೂವರನ್ನು ಬಂಧಿಸಲಾಗಿದೆ. ಬಾಲಕಿಯ ಸಂಬಂಧಿಕರ ದೂರಿನ ಮೇರೆಗೆ ಬೈದ್ಯಾನಂದಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಖಾಸಗಿ ಕ್ಲಿನಿಕ್ ನಡೆಸುತ್ತಿದ್ದ ಬಬಾನಿ ಶಂಕರ್ ದಾಸ್ ಸೇರಿದಂತೆ ಮೂವರನ್ನು ಬಂಧಿಸಿ, ವಿಚಾರಣೆ ಮಾಡಲಾಗುತ್ತಿದೆ.
ಕ್ಲಿನಿಕ್‌ನಲ್ಲಿ ಬಡ ಹುಡುಗಿಯರಿಗೆ ಉಚಿತ ವಸತಿ ಮತ್ತು ಶಿಕ್ಷಣ ನೀಡಲಾಗುವುದು ಎಂದು ಗ್ರಾಮದ ಅಂಗನವಾಡಿ ಕಾರ್ಯಕರ್ತೆ ಹೇಳಿದ್ದರಿಂದ 17 ವರ್ಷದ ಬಾಲಕಿಯ ತಾಯಿ ಆಕೆಯನ್ನು ಕ್ಲಿನಿಕ್‌ಗೆ ಕರೆತಂದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಬಾಲಕಿಗೆ ನರ್ಸಿಂಗ್ ತರಬೇತಿ ನೀಡುವುದಾಗಿ ಮತ್ತು ಉಚಿತ ವಸತಿ ನೀಡುವುದಾಗಿ ದಾಸ್ ಭರವಸೆ ನೀಡಿದ್ದರಿಂದ ಬಾಲಕಿಯನ್ನು ಅಲ್ಲಿಯೇ ಬಿಡಲಾಗಿತ್ತು. ಮೊದಲ ಮೂರು ದಿನ ಯಾವುದೇ ಸಮಸ್ಯೆ ಇರಲಿಲ್ಲ.
ಜೂನ್ 23 ರಂದು ಸಂಜೆ 5 ಗಂಟೆಗೆ ವೈದ್ಯ ದಾಸ್ ಸೂಚನೆಯಂತೆ ಬಾಲಕಿಯನ್ನು ಕ್ಲಿನಿಕ್‌ಗೆ ಕರೆತರಲಾಯಿತು. ರಾತ್ರಿ 7 ಗಂಟೆ ಸುಮಾರಿಗೆ ದಾಸ್ ಬಾಲಕಿಯನ್ನು ಮನೆಗೆ ಕರೆದುಕೊಂಡು ಹೋದರು ಮತ್ತು ಕ್ಲಿನಿಕ್‌ನ ಸಹಾಯಕಿ ಬಾಲಕಿಗೆ ನೀರು ಕುಡಿಯಲು ನೀಡಿದರು. ನೀರು ಕುಡಿದ ನಂತರ ಬಾಲಕಿ ಮಾತನಾಡಲೂ ಆಗದಷ್ಟು ಅಸ್ವಸ್ಥಳಾದಳು. ಈ ಸಮಯದಲ್ಲಿ ಶಂಕರ್ ದಾಸ್ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ.
ನಂತರ ಬಾಲಕಿ ತನ್ನ ಸಂಬಂಧಿಕರ ಮನೆಗೆ ಹೋಗಿ ನಡೆದ ಘಟನೆಯನ್ನು ವಿವರಿಸಿದ್ದಾಳೆ. ನಂತರ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಲಾಗಿದೆ. ಪೋಕ್ಸೊ ಕಾಯ್ದೆಯಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ವೈದ್ಯಕೀಯ ಪರೀಕ್ಷೆ ನಡೆಸಿದ ನಂತರ, ವಿಧಿವಿಜ್ಞಾನ ತಂಡವು ಕ್ಲಿನಿಕ್ ಮತ್ತು ಶಂಕರ್ ದಾಸ್ ಅವರ ಮನೆಯಿಂದ ಸಾಕ್ಷ್ಯಗಳನ್ನು ಸಂಗ್ರಹಿಸಿದೆ.
ಹೋಮಿಯೋಪತಿಯಲ್ಲಿ ನಕಲಿ ಪದವಿ ಪಡೆದಿದ್ದ ಶಂಕರ್ ದಾಸ್ ವೈದ್ಯನೆಂದು ನಟಿಸಿ ಕ್ಲಿನಿಕ್ ನಡೆಸುತ್ತಿದ್ದ ಎಂದು ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಈ ಪ್ರಕರಣದಲ್ಲಿ ಶಂಕರ್ ದಾಸ್ ಸೇರಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಶಂಕರ್ ದಾಸ್ ಅವರ ಕ್ಲಿನಿಕ್‌ನ ಸಹಾಯಕಿ 21 ವರ್ಷದ ಪ್ರಿಯಾಂಕ ಸಾಹು ಮತ್ತು ಅಂಗನವಾಡಿ ಕಾರ್ಯಕರ್ತೆ ಇತರ ಇಬ್ಬರು ಆರೋಪಿಗಳು.