ಇತ್ತೀಚೆಗಿನ ದಿನಗಳಲ್ಲಿ ಮೆದುಳಿಗೆ ಕೆಲಸ ನೀಡುವಂತಹ ಆಪ್ಟಿಕಲ್ ಇಲ್ಯೂಷನ್ (optical illusion) ಚಿತ್ರಗಳು ಎಲ್ಲರ ಗಮನ ಸೆಳೆಯುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಇಂತಹ ಒಗಟಿನ ಚಿತ್ರಗಳು ಆಗಾಗ ಕಾಣಸಿಗುತ್ತವೆ. ಈ ಕೆಲವು ಚಿತ್ರಗಳನ್ನು ಬಿಡಿಸುವುದು ಕೆಲವರಿಗೆ ತುಂಬಾ ಸುಲಭವಾಗಿದ್ದರೆ, ಇನ್ನು ಕೆಲವರು ಎಷ್ಟೇ ಪ್ರಯತ್ನಿಸಿದರೂ ಈ ಒಗಟುಗಳನ್ನು ಬಿಡಿಸಲು ಆಗುವುದಿಲ್ಲ. ಆದರೆ ಇಂತಹ ಒಗಟನ್ನು ಬಿಡಿಸುವುದರಲ್ಲಿರುವ ಮಜಾನೇ ಬೇರೆ. ಇದೀಗ ಇಲ್ಲೊಂದು ಇಂತಹದ್ದೇ ಕಠಿಣ ಸವಾಲಿನ ಚಿತ್ರವಿದ್ದು, ಇದರಲ್ಲಿ ಅಡಗಿರುವ ನಾಯಿಯನ್ನು (dog) ಹುಡುಕುವ ಸವಾಲನ್ನು ನೀಡಲಾಗಿದೆ. ಕೇವಲ ಆರು ಸೆಕೆಂಡುಗಳಲ್ಲಿ ಈ ಒಗಟನ್ನು ಬಿಡಿಸಲು ನಿಮ್ಮಿಂದ ಸಾಧ್ಯವೇ?.
ಈ ಚಿತ್ರದಲ್ಲಿ ಏನಿದೆ?
ಈ ಆಪ್ಟಿಕಲ್ ಇಲ್ಯೂಷನ್ ಚಿತ್ರದಲ್ಲಿ ಮೊದಲು ನಿಮ್ಮ ಕಣ್ಣಿಗೆ ಬೀಳುವುದೇ ಗಡ್ಡ ಬಿಟ್ಟ ವಯಸ್ಸಾದ ವ್ಯಕ್ತಿ. ಆದರೆ ಈ ಚಿತ್ರದಲ್ಲಿ ಶ್ವಾನವೊಂದು ಅಡಗಿದೆ. ನಿಮ್ಮ ಕಣ್ಣಿಗೆ ಈ ಪ್ರಾಣಿಯೂ ಅಷ್ಟು ಸುಲಭವಾಗಿ ಗೋಚರಿಸುವುದಿಲ್ಲ. ಹೀಗಾಗಿ ಗಡ್ಡ ಬಿಟ್ಟ ವಯಸ್ಸಾದ ವ್ಯಕ್ತಿಯನ್ನು ಸರಿಯಾಗಿ ನೋಡಿದ್ರೆ, ಅದರಲ್ಲಿ ನಿಮಗೆ ನಾಯಿಯೊಂದು ಕಾಣಿಸುತ್ತೆ.
ಇದನ್ನೂ ಓದಿ
ಈ ಸವಾಲನ್ನು ಸ್ವೀಕರಿಸಲು ನೀವು ಸಿದ್ಧವಿದ್ದೀರಾ?
ನಿಮ್ಮ ತೀಕ್ಷ್ಣ ದೃಷ್ಟಿ ಗ್ರಹಿಕೆ, ಉತ್ತಮ ಗಮನ ಹಾಗೂ ನಿಮ್ಮ ಸಾಮರ್ಥ್ಯ ತಿಳಿಯಲು ನಿಮಗೊಂದು ಅವಕಾಶವಿದೆ. ಗಡ್ಡ ಬಿಟ್ಟ ವಯಸ್ಸಾದ ವ್ಯಕ್ತಿಯಂತೆ ಕಾಣುವ ಈ ಚಿತ್ರದಲ್ಲಿ ನಾಯಿಯೊಂದಿದೆ. ನೀವು ಆರು ಸೆಕೆಂಡುಗಳಲ್ಲಿ ಆ ನಾಯಿಯನ್ನು ಕಂಡುಹಿಡಿಯಬೇಕು. ಒಂದು ವೇಳೆ ನಿಮ್ಮಿಂದ ಈ ಒಗಟನ್ನು ಬಿಡಿಸಲು ಸಾಧ್ಯವಾದರೆ ನೀವು ಅತೀ ಹೆಚ್ಚು ಬುದ್ಧಿ ಸಾಮರ್ಥ್ಯ ಹಾಗೂ ತೀಕ್ಷ್ಣ ದೃಷ್ಟಿಯನ್ನು ಹೊಂದಿದ್ದೀರಿ ಎನ್ನುವುದು ಖಚಿತವಾಗುತ್ತದೆ.
ಇದನ್ನೂ ಓದಿ :Optical Illusion: ನಿಮಗೊಂದು ಸವಾಲ್; ಈ ಉಲ್ಟಾ 24 ರ ನಡುವೆ ಅಡಗಿರುವ ಸೀದಾ 24 ಸಂಖ್ಯೆಯನ್ನು ಹುಡುಕಬಲ್ಲಿರಾ?
ಉತ್ತರ ಇಲ್ಲಿದೆ:
ಅಯ್ಯೋ ಎಷ್ಟೇ ಹುಡುಕಿದರೂ ಈ ಚಿತ್ರದಲ್ಲಿ ಅಡಗಿರುವ ಶ್ವಾನವು ನಿಮ್ಮ ಕಣ್ಣಿಗೆ ಬೀಳುತ್ತಿಲ್ಲವೇ, ಹೆಚ್ಚು ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ಈ ಚಿತ್ರವನ್ನು ಒಮ್ಮೆ ತಲೆಕೆಳಗಾಗಿ ತಿರುಗಿಸಿ, ಆಮೇಲೆ ಈ ಚಿತ್ರವನ್ನು ಸೂಕ್ಷ್ಮವಾಗಿ ನೋಡಿ. ಇಲ್ಲಿ ಮೂಳೆಯೊಂದಿಗೆ ನಾಯಿಯೊಂದು ನಿಮ್ಮ ಕಣ್ಣಿಗೆ ಬೀಳುತ್ತದೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On – 11:03 am, Sun, 29 June 25