ಸಾಮಾಜಿಕ ಜಾಲತಾಣದಲ್ಲಿ ಕಣ್ಣು ಮತ್ತು ಮೆದುಳಿಗೆ ಸವಾಲೊಡ್ಡುವ ಕುತೂಹಲಕಾರಿ ಆಪ್ಟಿಕಲ್ ಇಲ್ಯೂಷನ್ (Optical Illusion) ಚಿತ್ರಗಳು ಆಗಾಗ ಹರಿದಾಡುವುದಿದೆ. ಈ ಚಿತ್ರಗಳು ಕಣ್ಣು ಮತ್ತು ಮೆದುಳಿಗೆ ಕೆಲಸ ನೀಡುತ್ತದೆ. ಇದರಲ್ಲಿ ಕೆಲವು ಚಿತ್ರಗಳು ನಿಮ್ಮ ಯೋಚನಾ ಸಾಮರ್ಥ್ಯವನ್ನು ಪರೀಕ್ಷಿಸುವಂತಿದ್ದರೆ, ಇನ್ನು ಕೆಲವು ಚಿತ್ರಗಳು ವ್ಯಕ್ತಿತ್ವವನ್ನು ಬಹಿರಂಗ ಪಡಿಸುತ್ತದೆ. ಆದರೆ ಈ ಒಗಟಿನ (puzzles) ಚಿತ್ರಗಳನ್ನು ಬಿಡಿಸಲು ಕೆಲವರು ತುಂಬಾನೇ ಸಮಯ ತೆಗೆದುಕೊಳ್ಳುತ್ತಾರೆ. ಕೆಲವರಿಗೆ ಎಷ್ಟೇ ಪ್ರಯತ್ನಿಸಿದರೂ ಉತ್ತರ ಕಂಡು ಹಿಡಿಯಲು ಆಗುವುದೇ ಇಲ್ಲ. ಇದೀಗ ವೈರಲ್ ಆಗಿರುವ ಚಿತ್ರದಲ್ಲಿ ಮಹಿಳೆಯ ಮುಖವೊಂದಿದ್ದು, ಇದರಲ್ಲಿ ಪ್ರಾಣಿಗಳು (animals) ಅಡಗಿವೆ. ನೀವು ಈ ಚಿತ್ರವನ್ನು ಸೂಕ್ಷ್ಮವಾಗಿ ಗಮನಿಸಿ ಇದರಲ್ಲಿ ಅಡಗಿರುವ ಪ್ರಾಣಿಗಳನ್ನು ಒಂದು ನಿರ್ದಿಷ್ಟ ಸಮಯದೊಳಗೆ ಪತ್ತೆ ಹಚ್ಚಬೇಕು.
ಈ ಚಿತ್ರದಲ್ಲಿ ಏನಿದೆ?
ಈ ಆಪ್ಟಿಕಲ್ ಇಲ್ಯೂಷನ್ ಚಿತ್ರವನ್ನು ಮೊದಲು ನೋಡಿದಾಗ ನಿಮ್ಮನ್ನು ದಿಗ್ಭ್ರಮೆಗೊಳಿಸುತ್ತವೆ. ಈ ಚಿತ್ರವನ್ನು ಮೊದಲು ಗಮನಿಸಿದಾಗ ಮಹಿಳೆ ಮುಖ ಮಾತ್ರ ಕಾಣಿಸುತ್ತದೆ. ಆದರೆ ಈ ಆಪ್ಟಿಕಲ್ ಇಲ್ಯೂಷನ್ ಚಿತ್ರದಲ್ಲಿ ಹತ್ತು ಪ್ರಾಣಿಗಳಿವೆ, ನೀವು ಈ ಪ್ರಾಣಿಗಳನ್ನು ಇಂತಿಷ್ಟು ಸೆಕೆಂಡುಗಳಲ್ಲಿ ಹುಡುಕಬೇಕು.
ಇದನ್ನೂ ಓದಿ
ಇದನ್ನೂ ಓದಿ :Optical Illusion : ಈ ಚಿತ್ರದಲ್ಲಿ ಅಡಗಿರುವ ಆನೆಯನ್ನು ನೀವು ಹುಡುಕುವುದಕ್ಕೆ ಸಾಧ್ಯ ಇದ್ಯಾ?
ಉತ್ತರ ಇಲ್ಲಿದೆ
ಎಷ್ಟೇ ಪ್ರಯತ್ನಿಸಿದರೂ ಈ ಚಿತ್ರದಲ್ಲಿ ಅಡಗಿರುವ ಪ್ರಾಣಿಯನ್ನು ಪತ್ತೆ ಹಚ್ಚಲು ಸಾಧ್ಯವಾಗುತ್ತಿಲ್ಲವೇ. ಈ ಚಿತ್ರವನ್ನು ಸರಿಯಾಗಿ ಗಮನಿಸಿದರೆ ಆನೆಯ ಸೊಂಡಿಲು ಹಾಗೂ ಹುಲಿಯನ್ನು ನೀವು ಸುಲಭವಾಗಿ ಪತ್ತೆ ಹಚ್ಚುತ್ತೀರಿ. ಆದರೆ ಉಳಿದ ಪ್ರಾಣಿಯನ್ನು ಗುರುತಿಸಲು ನಿಮಗೆ ಸ್ವಲ್ಪ ಕಷ್ಟವಾಗಬಹುದು. ಹೆಚ್ಚು ತಲೆಕೆಡಿಸಿಕೊಳ್ಳಬೇಡಿ, ಉತ್ತರವನ್ನು ನಾವು ನಿಮಗೆ ಹೇಳುತ್ತೇವೆ. ಈ ಚಿತ್ರದಲ್ಲಿ ಹಂಸ, ಹಾವು, ಎರಡು ಪಾರಿವಾಳಗಳು, ಕೊಕ್ಕರೆ, ಒಂದು ದೊಡ್ಡ ಮೀನು, ಹಸು, ಒಂದು ಸಣ್ಣ ಮೀನು, ತೋಳ ಹಾಗೂ ಮೊಲ ಸೇರಿದಂತೆ ಒಟ್ಟು ಹತ್ತು ಪ್ರಾಣಿಗಳು ಅಡಗಿದೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ