M ಅಕ್ಷರಗಳ ನಡುವೆ ಅಡಗಿರುವ N ಅಕ್ಷರವನ್ನು ಹುಡುಕಿ
Image Credit source: Jagran Josh
ಬುದ್ಧಿವಂತಿಕೆ ಮತ್ತು ದೃಷ್ಟಿ ತೀಕ್ಷ್ಣತೆಯನ್ನು ಪರೀಕ್ಷಿಸುವ ಒಗಟಿನ ಆಟಗಳು ಅಥವಾ ಆಪ್ಟಿಕಲ್ ಇಲ್ಯೂಷನ್ (Optical Illusion) ಇತ್ತೀಚಿನ ದಿನಗಳಲ್ಲಿ ಸಿಕ್ಕಾಪಟ್ಟೆ ಜನಪ್ರಿಯವಾಗುತ್ತಿದೆ. ಈ ಮೋಜಿನ ಆಟಗಳ ಮೂಲಕ ನಮ್ಮ ಕಣ್ಣುಗಳು ಮತ್ತು ಬುದ್ಧಿ ಎಷ್ಟು ಚುರುಕಾಗಿ ಕೆಲಸ ಮಾಡುತ್ತವೆ ಎಂಬುದನ್ನು ತಿಳಿಯಬಹುದು. ಅಂತಹದ್ದೇ ಚಿತ್ರವೊಂದು ಇದೀಗ ವೈರಲ್ ಆಗಿದ್ದು, ಆ ಚಿತ್ರದಲ್ಲಿ M ಅಕ್ಷರಗಳ ನಡುವೆ ಅಡಗಿರುವ ಒಂದು N ಅಕ್ಷರವನ್ನು ಹುಡುಕಲು ಸವಾಲನ್ನು ನೀಡಲಾಗಿದೆ. ನಿಮ್ಮ ಬುದ್ಧಿವಂತಿಕೆಯನ್ನು ಬಳಸಿ ಕೇವಲ 5 ಸೆಕೆಂಡುಗಳಲ್ಲಿ N ಅಕ್ಷರವನ್ನು ಹುಡುಕುವ ಮೂಲಕ ನಿಮ್ಮ ದೃಷ್ಟಿ (Visual Illusion) ತೀಕ್ಷ್ಣವಾಗಿದೆಯೇ ಪರೀಕ್ಷಿಸಿ.
M ಅಕ್ಷರಗಳ ನಡುವೆ ಅಡಗಿರುವ N ಅಕ್ಷರವನ್ನು 5 ಸೆಕೆಂಡುಗಳಲ್ಲಿ ಹುಡುಕಿ:
ಮೇಲಿನ ಚಿತ್ರದಲ್ಲಿ ರಾಶಿ M ಅಕ್ಷರಗಳ ನಡುವೆ N ಅಕ್ಷರವೊಂದಿದ್ದು, ನಿಮ್ಮ ಕಣ್ಣು ಸಖತ್ ಶಾರ್ಪ್, ಹದ್ದಿನ ಕಣ್ಣಿಗಿಂತಲೂ ಶಾರ್ಪ್ ಎಂದಾದರೆ ನೀವು ಬರೀ 5 ಸೆಕೆಂಡುಗಳಲ್ಲಿ M ಅಕ್ಷರಗಳ ನಡುವೆ ಅವಿತಿರುವ N ಅಕ್ಷರವನ್ನು ಹುಡುಕಬೇಕು. ಈ ಚಿತ್ರದಲ್ಲಿ ಮೇಲ್ನೋಟಕ್ಕೆ ಬರೀ M ಅಕ್ಷರಗಳೇ ಕಾಣಿಸುತ್ತವೆ. ಆದರೆ ನೀವು ನಿಮ್ಮ ಗಮನವನ್ನು ಕೇಂದ್ರೀಕರಿಸಿ, ಈ ಒಗಟಿನ ಚಿತ್ರವನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ ʼMʼ ಗಳ ನಡುವೆ ಅಡಗಿರುವ ʼNʼ ಅಕ್ಷರವನ್ನು ಸುಲಭವಾಗಿ ಪತ್ತೆ ಹಚ್ಚಬಹುದು.
ಇದನ್ನೂ ಓದಿ
ಸವಾಲನ್ನು ಸ್ವೀಕರಿಸಲು ಸಿದ್ಧರೇ?
ಈ ಒಗಟಿನ ಚಿತ್ರದಲ್ಲಿ ʼMʼ ಅಕ್ಷರದ ರಾಶಿಯ ನಡುವೆ ʼNʼ ಅಕ್ಷರವೊಂದು ಅಡಗಿದೆ. ನೀವು ಕೇವಲ 5 ಸೆಕೆಂಡುಗಳಲ್ಲಿ ಅದನ್ನು ಪತ್ತೆ ಹಚ್ಚಬೇಕು. ಈ ರೀತಿಯ ದೃಶ್ಯ ಭ್ರಮೆಯ ಒಗಟುಗಳನ್ನು ಪರಿಹರಿಸಬಲ್ಲ ಜನರು ಅತ್ಯುತ್ತಮ ವೀಕ್ಷಣಾ ಕೌಶಲ್ಯವನ್ನು ಹೊಂದಿರುತ್ತಾರೆ ಎಂದು ತಜ್ಞರು ಹೇಳುತ್ತಾರೆ. ಹಾಗಿದ್ರೆ ನಿಮ್ಮ ಕಣ್ಣು ಎಷ್ಟು ಶಾರ್ಪ್ ಆಗಿದೆ ಎಂದು ಪರೀಕ್ಷಿಸಲು ಈ ಸವಾಲನ್ನು ಸ್ವೀಕರಿಸಲು ಸಿದ್ಧರಿದ್ದೀರಿ ಅಲ್ವಾ. ಚಿತ್ರವನ್ನು ಸೂಕ್ಷ್ಮವಾಗಿ ಗಮನಿಸಿ ನೋಡಿದರೆ ಮಾತ್ರ ನಿಮಗೆ ʼNʼ ಅಕ್ಷರವನ್ನು ಪತ್ತೆ ಮಾಡಲು ಸಾಧ್ಯ.
ಇದನ್ನೂ ಓದಿ: ಈ ಆಪ್ಟಿಕಲ್ ಇಲ್ಯೂಷನ್ ಚಿತ್ರದಲ್ಲಿ ನಿಮಗೆ ಮೊದಲು ಕಾಣಿಸುವ ಅಂಶವೇ ಬಹಿರಂಗ ಪಡಿಸುತ್ತೆ ನಿಮ್ಮ ವ್ಯಕ್ತಿತ್ವ
ಉತ್ತರ ಇಲ್ಲಿದೆ:
ಎಷ್ಟೇ ಸೂಕ್ಷ್ಮವಾಗಿ ಗಮನಿಸಿದರೂ 5 ಸೆಕೆಂಡುಗಳ ಒಳಗಾಗಿ ಈ ಸವಾಲನ್ನು ಪೂರ್ಣಗೊಳಿಸಲು ಸಾಧ್ಯವಾಗಿಲ್ಲ, ಜೊತೆಗೆ ʼNʼ ಅಕ್ಷರವನ್ನು ಕಂಡು ಹಿಡಿಯಲು ಸಾಧ್ಯವಾಗದೆ ಕಷ್ಟಪಡುತ್ತಿದ್ದೀರಾ? ಚಿಂತೆ ಬೇಡ ಇಲ್ಲಿದೆ ಉತ್ತರ. ಚಿತ್ರದ ಕೊನೆಯ ಎರಡನೇ ಸಾಲಿನ ಕಡೆಗೆ ಕಣ್ಣಾಯಿಸಿದರೆ ನೀವು N ಅಕ್ಷರವನ್ನು ಪತ್ತೆ ಹಚ್ಚಬಹುದು.
ಇನ್ನಷ್ಟು ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ