ಪಾಕಿಸ್ತಾನ ಸೂಪರ್ ಲೀಗ್‌ನಲ್ಲಿ ಬಣ್ಣ ಬದಲಿಸಿದ ಚೆಂಡು! ಕಳಪೆ ಜೆರ್ಸಿ ಕ್ವಾಲಿಟಿ ಬಗ್ಗೆ ಜೋರಾಯ್ತು ಚರ್ಚೆ! | Ball Turns Red Mid Match In Psl 2026 Poor Jersey Quality Sparks Controversy Kvn
ಪಾಕಿಸ್ತಾನ ಸೂಪರ್ ಲೀಗ್‌ನ ಮೊದಲ ಪಂದ್ಯದಲ್ಲಿ, ಬಿಳಿ ಚೆಂಡು ಕೆಂಪು ಬಣ್ಣಕ್ಕೆ ತಿರುಗಿದ ವಿಚಿತ್ರ ಘಟನೆ ನಡೆದಿದೆ. ಆಟಗಾರರು ಧರಿಸಿದ್ದ ಕಳಪೆ ಗುಣಮಟ್ಟದ ಜೆರ್ಸಿಯ ಬಣ್ಣವೇ ಚೆಂಡಿಗೆ ಅಂಟಿಕೊಂಡಿದ್ದು ಇದಕ್ಕೆ ಕಾರಣವಾಗಿತ್ತು. ಇದರೊಂದಿಗೆ, ಇಬ್ಬನಿಯ ಪರಿಣಾಮವನ್ನು ತಗ್ಗಿಸಲು ಜಾರಿಗೆ ತಂದಿರುವ ಹೊಸ ನಿಯಮವೂ ಚರ್ಚೆಗೆ ಗ್ರಾಸವಾಗಿದೆ. ಲಾಹೋರ್: ಪಾಕಿಸ್ತಾನ ಸೂಪರ್ ಲೀಗ್ (PSL) ಶುರುವಾದ ಮೊದಲ ದಿನವೇ ವಿಚಿತ್ರ ಘಟನೆಯೊಂದು ನಡೆದಿದೆ. ಪಂದ್ಯದಲ್ಲಿ ಬಳಸಿದ ಜೆರ್ಸಿ ಮತ್ತು ಚೆಂಡಿನ ಕಳಪೆ ಗುಣಮಟ್ಟದ ಬಗ್ಗೆ ಅಭಿಮಾನಿಗಳು ಈಗ ಚರ್ಚೆ…